ಪ್ರಯಾಗ್ರಾಜ್ (ಉತ್ತರ ಪ್ರದೇಶ) :ಹಿಂದು ಧರ್ಮೀಯರ ಮಹಾಮಿಲನ ಎಂದೇ ಹೇಳಲಾಗುವ ಮಹಾಕುಂಭದಲ್ಲಿ ಹಲವು ಅಚ್ಚರಿಯ ಘಟನೆಗಳು ಬೆಳಕಿಗೆ ಬರುತ್ತಿವೆ. ಅಘೋರಿಗಳು, ಹಠಸಿದ್ಧಿ ಸಾಧುಗಳ ಕಠಿಣ ನಿಯಮಗಳ ಮಧ್ಯೆ 13 ವರ್ಷದ ಬಾಲಕಿ ತಾನು ಸನ್ಯಾಸಿಯಾಗುವುದಾಗಿ ನಿರ್ಧರಿಸಿದ್ದಾಳೆ.
ರಾಖಿ ಧಾಕ್ರೆ ಎಂಬ 13 ವರ್ಷದ ಬಾಲಕಿ ತನ್ನ ಮನದಾಸೆಯನ್ನು ಮಹಾಂತ ಕೌಶಲ್ ಗಿರಿ ಬಾಬಾ ಅವರ ಹತ್ತಿರ ಹೇಳಿದ್ದಾಳೆ. ಆದರೆ, ಅವರು ಇದನ್ನು ಮೊದಲು ನಿರಾಕರಿಸಿದ್ದಾರೆ. ಸನ್ಯಾಸ ಜೀವನ ಅತಿ ಕಠಿಣ. ಇದು ನಿನ್ನ ವಯಸ್ಸಿಗೆ ಸರಿ ಹೊಂದಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ, ದಿಟ್ಟ ನಿರ್ಧಾರಕ್ಕೆ ಬಂದಿರುವ ಬಾಲೆ ತಾನು ಸನ್ಯಾಸಿಯಾಗಲು ನಿರ್ಣಯಿಸಿದ್ದಾಗಿ ತಿಳಿಸಿದ್ದಾಳೆ.
ರಾಖಿ ಧಾಕ್ರೆ ತನ್ನ ಕುಟುಂಬವನ್ನು ತೊರೆದು ತಮ್ಮ ಗುರು ಮಹಾಂತ ಕೌಶಲ್ ಗಿರಿ ಮಹಾರಾಜ್ ಅವರೊಂದಿಗೆ ವಾಸಿಸಲು ನಿಶ್ಚಿಯಿಸಿದ್ದಾರೆ. ಆಧ್ಯಾತ್ಮಿಕ ಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳಲು ರೆಡಿ ಆಗಿದ್ದಾಳೆ.
ನನ್ನ ಬಾಲ್ಯದ ಕನಸು:ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖೆ ಧಾಕ್ರೆ ಗೌರಿ ಗಿರಿ, "ನಾನು 11ನೇ ವರ್ಷದಲ್ಲಿ ಗುರು ದೀಕ್ಷೆ ತೆಗೆದುಕೊಂಡಿದ್ದೇನೆ. ಈಗ ನನಗೆ 13 ವರ್ಷ. ಈ ವಯಸ್ಸಿನಲ್ಲಿ ಸನ್ಯಾಸ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ಸನ್ಯಾಸಿಯಾಗಿ ಸಂತಳಾಗಬೇಕು ಎಂಬುದು ನನ್ನ ಬಾಲ್ಯದ ಕನಸು. ಆದರೆ, ಚಿಕ್ಕವಳಾದ ಕಾರಣ ನನ್ನ ಕುಟುಂಬ ಸದಸ್ಯರು ನನ್ನ ಮಾತನ್ನು ಕೇಳಲಿಲ್ಲ ಎಂದಿದ್ದಾರೆ.