ಕರ್ನಾಟಕ

karnataka

ETV Bharat / bharat

ಯೋಧರನ್ನು ಉಡಾಯಿಸಲು ನಕ್ಸಲರು ನೆಲದಡಿ ಹೂತಿಟ್ಟಿದ್ದ 10 ಕೆಜಿ ಐಇಡಿ ಸ್ಫೋಟಕ ಪತ್ತೆ, ನಿಷ್ಕ್ರಿಯ - IED RECOVERED IN SUKMA

ಛತ್ತೀಸ್​​ಗಢದಲ್ಲಿ ನಕ್ಸಲ್​ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ನೆಲದಡಿ ಹೂತಿಟ್ಟಿದ್ದ 10 ಕೆಜಿ ಐಇಡಿಯನ್ನು ಪತ್ತೆ ಮಾಡಲಾಗಿದೆ.

10 ಕೆಜಿ ಐಇಡಿ ಸ್ಫೋಟಕ ಪತ್ತೆ
10 ಕೆಜಿ ಐಇಡಿ ಸ್ಫೋಟಕ ಪತ್ತೆ (ETV Bharat)

By ETV Bharat Karnataka Team

Published : Jan 7, 2025, 9:08 PM IST

ಸುಕ್ಮಾ (ಛತ್ತೀಸ್​ಗಢ) :ಛತ್ತೀಸ್​ಗಢದ ಬಿಜಾಪುರದಲ್ಲಿ ನೆಲಬಾಂಬ್​ ಸಿಡಿದು 9 ಯೋಧರು ಹುತಾತ್ಮರಾದ ಘಟನೆ ಬೆನ್ನಲ್ಲೇ, ಭದ್ರತಾ ಸಿಬ್ಬಂದಿ ತೀವ್ರ ಎಚ್ಚರಿಕೆ ವಹಿಸಿದ್ದಾರೆ. ಸುಕ್ಮಾ ಜಿಲ್ಲೆಯ ಕೊಂಟಾದಲ್ಲಿ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ 10 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.

ಕೊಂಟಾದ ಬೆಲ್ಪೋಚೋ ಪ್ರದೇಶದಲ್ಲಿ 10 ಕೆಜಿ ತೂಕದ ಐಇಡಿಯನ್ನು ನಕ್ಸಲರು ನೆಲದಡಿ ಹೂತಿಟ್ಟಿದ್ದರು. ಇದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಭದ್ರತಾ ಸಿಬ್ಬಂದಿ ಸ್ಫೋಟಕವನ್ನು ವಶಕ್ಕೆ ಪಡೆದು, ನಿಷ್ಕ್ರಿಯಗೊಳಿಸಿದ್ದಾರೆ.

10 ಕೆಜಿ ಐಇಡಿ ನಿಷ್ಕ್ರಿಯ:ನಕ್ಸಲ್​​ ನಿಗ್ರಹ ಜಂಟಿ ಕಾರ್ಯಾಚರಣೆ ನಡೆಸುತ್ತಿರುವ ಸಿಆರ್‌ಪಿಎಫ್ ಯೋಧರು ಮತ್ತು ಜಿಲ್ಲಾ ಪೊಲೀಸ್ ಪಡೆ ಸಿಬ್ಬಂದಿ ಸುಕ್ಮಾದ ಕೊಂಟಾ ಪ್ರದೇಶವನ್ನು ತಲುಪಿದಾಗ, ಅಲ್ಲಿ ಐಇಡಿಗಳನ್ನು ಹೂತಿಡಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಭದ್ರತಾ ಸಿಬ್ಬಂದಿ ಗೋಲಪಲ್ಲಿ ರಸ್ತೆ ಮತ್ತು ಬೆಲ್ಪೋಚೋ ಬಳಿ ನೆಲಬಾಂಬ್ ಅನ್ನು ಅಗೆದು ತೆಗೆದಿದ್ದಾರೆ. ಈ ವೇಳೆ 10 ಕೆಜಿಯ ಬಾಂಬ್ ನೆಲದಡಿ ಸಿಕ್ಕಿದೆ. ಕೂಡಲೇ ತಜ್ಞರ ಸಹಾಯದಿಂದ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ದಾಳಿಗೆ 8 ಯೋಧರು ಹುತಾತ್ಮ:ಬಿಜಾಪುರದ ಕುಟ್ರು ಎಂಬಲ್ಲಿ ಸೋಮವಾರ ನಕ್ಸಲೀಯರ ಐಇಡಿ ಸ್ಫೋಟದಿಂದ ಚಾಲಕ ಮತ್ತು 8 ಯೋಧರಿದ್ದ ವಾಹನ ಛಿದ್ರವಾಗಿತ್ತು. ದಾಳಿಯಲ್ಲಿ ಎಲ್ಲರೂ ಹುತಾತ್ಮರಾಗಿದ್ದರು. ಯೋಧರಿದ್ದ ವಾಹನವನ್ನು ಸ್ಫೋಟಿಸಲು 60 ರಿಂದ 70 ಕೆಜಿ ಐಇಡಿಯನ್ನು ನಕ್ಸಲಿಯರು ಬಳಸಿದ್ದರು ಎಂದು ವರದಿಯಾಗಿತ್ತು. ಘಟನೆಯ ನಂತರ, ನಕ್ಸಲ್​​ಪೀಡಿತ ಬಸ್ತಾರ್​​ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ:ಭದ್ರತಾ ವಾಹನ ಸ್ಫೋಟಿಸಿದ ನಕ್ಸಲರು: 9 ಯೋಧರು ಹುತಾತ್ಮ

ABOUT THE AUTHOR

...view details