ಕರ್ನಾಟಕ

karnataka

ಕೆಐಒಸಿಎಲ್​​ ಲಿಮಿಟೆಡ್​​ಗೆ 111.86 ಕೋಟಿ ರೂ. ನಿವ್ವಳ ಲಾಭ

By

Published : Oct 1, 2019, 5:00 PM IST

ಭಾರತ ಸರ್ಕಾರದ ಉದ್ಯಮವಾಗಿರುವ ಕೆಐಒಸಿಎಲ್ ಲಿಮಿಟೆಡ್ ಈ ಬಾರಿ 111. 86 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ಬಾರಿಗಿಂತ 37 % ಅಧಿಕ ಲಾಭ ಗಳಿಸಿದೆ. 2018-19ನೇ ಸಾಲಿನಲ್ಲಿ ಉಂಡೆ ಕಬ್ಬಿಣದ ಉತ್ಪಾದನೆ 2.24 ಮಿಲಿಯನ್ ಟನ್​​ಗಳಾಗಿದ್ದು, ಮಾರುಕಟ್ಟೆಗೆ 2.21 ಮಿಲಿಯನ್ ಟನ್ ರವಾನಿಸಲಾಗಿದೆ. ಈ ಸಾಲಿನಲ್ಲಿ 1887.71 ಕೋಟಿ ರೂಪಾಯಿಗಳಷ್ಟು ಆರ್ಥಿಕ ವ್ಯವಹಾರ ನಡೆಸಿದ್ದೇವೆ. 184.12 ಕೋಟಿ ಲಾಭ ಗಳಿಸಲಾಗಿದ್ದು, ತೆರಿಗೆ ಪಾವತಿಯ ನಂತರ ಒಟ್ಟು 111.86 ಕೋಟಿ ರೂ. ಲಾಭ ಗಳಿಸಿದೆ. ಕೆಐಒಸಿಎಲ್ ಕಂಪನಿಯು ಜಪಾನ್, ಕೋರಿಯಾ, ವಿಯೇಟ್ನಾಂ, ಮಲೇಷಿಯಾ ಮತ್ತು ಚೀನಾ ದೇಶಗಳಲ್ಲಿ ಸ್ಥಿರ ಮಾರುಕಟ್ಟೆ ಹೊಂದಿದ್ದು, ಪ್ರಧಾನಮಂತ್ರಿ ಆಶಯದಂತೆ ಯುಕೆ ಮಾರುಕಟ್ಟೆಯನ್ನು ಪ್ರವೇಶಿಸಿದೆ‌ ಎಂದು ಕೆಐಒಸಿಎಲ್ ಲಿಮಿಟೆಡ್ ನ ಸಿಎಂಡಿ ಎಂ.ಎನ್.ಸುಬ್ಬರಾವ್ ತಿಳಿಸಿದರು.

ABOUT THE AUTHOR

...view details