ಮೈಸೂರು:ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿ ಮತ್ತೆ ಕಾಡಿಗೆ ತೆರಳಿದ 14 ಆನೆಗಳ ಪೈಕಿ 5 ಆನೆಗಳ ತೂಕವನ್ನು ಮಾತ್ರ ಪರಿಶೀಲಿಸಲಾಗಿದೆ.
ಕ್ಯಾಪ್ಟನ್ ಅಭಿಮನ್ಯು ಗಜಪಯಣದ ಮೂಲಕ ಅರಮನೆ ಬಂದಾಗ 4,770 ಕೆ.ಜಿ ತೂಕ ಇದ್ದ. ಈಗ 5320 ಕೆ.ಜಿ. ತೂಕವಿದ್ದು, ಈ ಮೂಲಕ ಬರೋಬ್ಬರಿ 550 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಮಾಜಿ ಕ್ಯಾಪ್ಟನ್ ಅರ್ಜುನ ಬಂದಾಗ 5,725 ಕೆ.ಜಿ ತೂಕವಿದ್ದ. ಈಗ 6,100 ಕೆ.ಜಿ. ಇದ್ದು, 375 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ.