ETV Bharat / state

ಅರ್ಧ ಕೆ.ಜಿ ಪ್ಲಾಸ್ಟಿಕ್‌ ತ್ಯಾಜ್ಯ ತಂದುಕೊಟ್ಟರೆ ತಿಂಡಿ, 1 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಊಟ ಫ್ರೀ! - Free Meal At Indira Canteen

author img

By ETV Bharat Karnataka Team

Published : Jul 4, 2024, 3:31 PM IST

ಮೈಸೂರಿನಲ್ಲಿ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ನಿರ್ವಹಣೆ ಸವಾಲಾಗಿದೆ. ಹೀಗಾಗಿ ಜಿಲ್ಲಾಡಳಿತ ಪ್ಲಾಸ್ಟಿಕ್ ಪಡೆದು ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ, ತಿಂಡಿ ನೀಡಲು ಮುಂದಾಗಿದೆ.

Indira Canteen
ಇಂದಿರಾ ಕ್ಯಾಂಟೀನ್ (ETV Bharat)

ಪ್ರತಿಕ್ರಿಯೆ (ETV Bharat)

ಮೈಸೂರು: ಸ್ವಚ್ಛ ನಗರಿ ಖ್ಯಾತಿಯ ಮೈಸೂರಿನಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ನಿರ್ವಹಣೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಜಿಲ್ಲಾಡಳಿತ ಹೊಸ ದಾರಿ ಕಂಡುಕೊಂಡಿದೆ. ಜನರು ತ್ಯಾಜ್ಯ, ಪ್ಲಾಸ್ಟಿಕ್ ಕೊಟ್ಟರೆ ಉಚಿತವಾಗಿ ಇಂದಿರಾ ಕ್ಯಾಂಟೀನ್​ನಲ್ಲಿ ಊಟ ನೀಡುವ ವಿನೂತನ ಪ್ರಯೋಗ ಆರಂಭಿಸಿದೆ. ನಗರ ಸ್ವಚ್ಛತೆಯ ಜೊತೆಗೆ ಹಸಿದವನಿಗೂ ಊಟ ನೀಡುವ ಈ ಯೋಜನೆ ವಿಶೇಷವಾಗಿದೆ.

ಮೈಸೂರು ಮಹಾನಗರ ವ್ಯಾಪ್ತಿಯಲ್ಲಿ 11 ಹಾಗೂ ಮೈಸೂರು ಜಿಲ್ಲಾ ವ್ಯಾಪ್ತಿ ಅಂದರೆ ತಾಲೂಕು ಕೇಂದ್ರಗಳ 5 ಸೇರಿ ಒಟ್ಟಾರೆ 16 ಇಂದಿರಾ ಕ್ಯಾಂಟೀನ್​ಗಳಿವೆ. ಈ ಕ್ಯಾಂಟೀನ್​ಗಳಲ್ಲಿ ಪ್ರತಿದಿನ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ನೀಡಲಾಗುತ್ತಿದೆ. ಹಸಿವಿನಿಂದ ಯಾರೂ ಬಳಲಬಾರದು ಎಂಬುದು ಸರ್ಕಾರದ ಉದ್ದೇಶ. ಇದರಿಂದ ಕಾಲೇಜು ವಿದ್ಯಾರ್ಥಿಗಳು, ರಸ್ತೆ ಬದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಕೆಲಸಕ್ಕೆ ಬರುವ ಜನರಿಗೆ ಊಟ ದೊರೆಯುತ್ತಿದೆ.

"ಬಳಸಿ ಬಿಸಾಡಿರುವ ಅರ್ಧ ಕೆ.ಜಿ ಪ್ಲಾಸ್ಟಿಕ್​ಗಳನ್ನು ತಂದುಕೊಟ್ಟರೆ ಉಚಿತ ತಿಂಡಿ, 1 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಉಚಿತ ಊಟ ನೀಡಲಾಗುತ್ತದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕುವುದನ್ನು ತಡೆದು ನಗರದ ಸ್ವಚ್ಛತೆಗೆ ಆದ್ಯತೆ ಹಾಗೂ ಬಡವರ ಹಸಿವು ನೀಗಿಸುವುದು ಇದರ ಉದ್ದೇಶ" ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

''ಮೈಸೂರಿನಲ್ಲಿ ಇದೊಂದು ಒಳ್ಳೆಯ ಪ್ರಯೋಗ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು" ಎಂದು ಮೈಸೂರಿನ ಕನ್ನಡ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಹೇಳಿದರು.

ಇದನ್ನೂ ಓದಿ: ನಿರುಪಯುಕ್ತ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲು ಮುಂದಾದ ಬೆಳಗಾವಿ ಪಾಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.