ETV Bharat / state

ಹೊಸ ಕಾನೂನಿನಡಿ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿ: ಪೊಲೀಸ್ ಆಯುಕ್ತರ ಸೂಚನೆ - Police Commissioner B Dayananda

author img

By ETV Bharat Karnataka Team

Published : Jul 4, 2024, 3:53 PM IST

ಹೊಸ ಕಾನೂನನ್ನು ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಇಲಾಖೆಯ ಸಿಬ್ಬಂದಿಗೆ ಸೂಚಿಸಿದ್ದಾರೆ.

city-police-commissioner-dayananda
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ (ETV Bharat)

ಬೆಂಗಳೂರು: ಜುಲೈ 1ರಿಂದ ದೇಶದಲ್ಲಿ ಮೂರು ಹೊಸ ಕಾನೂನುಗಳು ಅನುಷ್ಠಾನಗೊಂಡಿವೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್) ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಕಾನೂನು ಆಗಿರುವುದರಿಂದ ಸೂಕ್ತ ತರಬೇತಿ ಪಡೆದರೂ ಪೊಲೀಸರಲ್ಲಿ ಗೊಂದಲವಿದೆ. ಹೀಗಾಗಿ ಸರಿಯಾಗಿ ತಿಳಿದುಕೊಂಡು ಸೆಕ್ಷನ್ ಹಾಕಬೇಕು ಎಂದು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮೌಖಿಕ ಸೂಚನೆ ನೀಡಿದ್ದಾರೆ.

ಐಪಿಸಿ ಹಾಗೂ ಸಿಆರ್​ಪಿಸಿ ಕಾಯ್ದೆಗೆ ಪರ್ಯಾಯವಾಗಿ ಬಿಎನ್​ಎಸ್, ಬಿಎನ್​ಎಸ್​ಎಸ್ ಕಾಯ್ದೆಗಳು ಜಾರಿಯಾಗಿವೆ. ಇದರ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಿಬ್ಬಂದಿಗೆ ಗೊಂದಲವಾಗದಂತೆ ಪ್ರತ್ಯೇಕ ಪೊಲೀಸ್ ಆ್ಯಪ್ ರಚಿಸಲಾಗಿದೆ. ಹೀಗಿದ್ದರೂ ಕೆಲವು ಸಂದರ್ಭಗಳಲ್ಲಿ ಗೊಂದಲ ಉಂಟಾದರೆ ನುರಿತ ವಕೀಲರು ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಬಳಿ ಕೇಳಿ ಸೆಕ್ಷನ್​ಗಳ ಬಗ್ಗೆ ತಿಳಿದುಕೊಂಡು ಪ್ರಕರಣ ದಾಖಲಿಸಬೇಕು.

ಆರೋಪಿಗಳ ಮೇಲೆ ಬರುವುದು ಆರೋಪಗಳಷ್ಟೇ. ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸೆಕ್ಷನ್​ಗಳನ್ನು ನಮೂದಿಸಿ. ಉದ್ದೇಶಪೂರ್ವಕವಲ್ಲದಿದ್ದರೂ ತಪ್ಪಾಗಿ ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು. ಆರೋಪಿ ಅಪರಾಧ ಮಾಡದಿದ್ದಲ್ಲಿ ಆ ಸೆಕ್ಷನ್​ಗಳನ್ನು ಬಳಸಿದರೆ ತೊಂದರೆಗಳಾಗಬಹುದು.

ಹೀಗಾಗಿ ಜನರಿಗೆ ನ್ಯಾಯ ಸಿಗುವ ಉದ್ದೇಶದಿಂದ ಸರಿಯಾಗಿ ತಿಳಿದುಕೊಂಡು ಪ್ರಕರಣ ದಾಖಲಿಸಿಕೊಳ್ಳಬೇಕು. ಸಹಜವಾಗಿ, ಹೊಸ ಕಾಯ್ದೆಗಳು ಪೊಲೀಸರಲ್ಲಿ ಗೊಂದಲ ಮೂಡಿಸಬಹುದು. ಇದು ತಪ್ಪೆಂದಲ್ಲ. ತರಬೇತಿ ಪಡೆದರೂ ಕೂಡ ಕೆಲವು ಸಂದರ್ಭಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ಹೀಗಾಗಿ ತಜ್ಞರೊಂದಿಗೆ ಕೇಳಿ ತಿಳಿದುಕೊಂಡು ಹೊಸ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಯುಕ್ತರು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಕ್ರಿಮಿನಲ್ ಕಾನೂನಿನನ್ವಯ ಮೊದಲ ದಿನವೇ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ? - New Criminal law cases

ETV Bharat Logo

Copyright © 2024 Ushodaya Enterprises Pvt. Ltd., All Rights Reserved.