ಕರ್ನಾಟಕ

karnataka

'ಆಕ್ಸಿಡೆಂಟಲ್​​​ ಸಿಎಂ ಕುಮಾರಣ್ಣ'ನ ಸರ್ಕಾರ ಸೇಫಾ? ಹೇಗಿದೆ ಬಲಾಬಲ​​?

By

Published : Jul 7, 2019, 4:25 PM IST

Updated : Jul 7, 2019, 4:45 PM IST

ಅಲ್ಪ ಮತಕ್ಕೆ ಮೈತ್ರಿ ಪಕ್ಷದ ಸಂಖ್ಯಾಬಲ ಕುಸಿತಗೊಂಡ ಪರಿಣಾಮ ವಿಧಾನಸಭೆಯ ಮ್ಯಾಜಿಕ್ ಸಂಖ್ಯೆ 105ಕ್ಕೆ ಬಂದು ನಿಂತಿದೆ. 13 ಶಾಸಕರು ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಯಾಕೆಂದರೆ ಮ್ಯಾಜಿಕ್ ಸಂಖ್ಯೆಯಷ್ಟು ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ವಿಧಾನ ಸಭಾ ಸದಸ್ಯರ ಸಂಖ್ಯಾಬಲ

ಬೆಂಗಳೂರು:ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ 13 ಶಾಸಕರ ರಾಜೀನಾಮೆಯ ಬಳಿಕ ಉದ್ಭವಿಸಿರುವ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಯಿಂದ ಸರ್ಕಾರ ಬಿದ್ದೇ ಹೋಯ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮ್ಯಾಜಿಕ್ ಸಂಖ್ಯೆಯ ಬಲಾಬಲ ಹೀಗಿದೆ.

ಒಟ್ಟು 225 ಸಂಖ್ಯಾಬಲ ಹೊಂದಿರುವ ವಿಧಾನಸಭೆಯಲ್ಲಿ 119 ಕಾಂಗ್ರೆಸ್-ಜೆಡಿಎಸ್ ಶಾಸಕರಿದ್ದಾರೆ. 105 ಬಿಜೆಪಿ ಶಾಸಕರಿದ್ದಾರೆ. ಈ ಸಂಖ್ಯೆಯಲ್ಲಿ ಮೈತ್ರಿ ಪಕ್ಷದ 12 ಶಾಸಕರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಒಟ್ಟು 13 ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ಕೈ ಕೊಟ್ಟಿದ್ದಾರೆ. ಹೀಗಾಗಿ, ಮೈತ್ರಿ ಪಕ್ಷದ ಶಾಸಕರ ಬಲ 105ಕ್ಕೆ ಕುಸಿತಗೊಂಡಿದೆ. ಈ ಮೂಲಕ ಅಲ್ಪಮತಕ್ಕೆ ಮೈತ್ರಿ ಕುಸಿತಗೊಂಡಿದೆ.

ರಾಜ್ಯ ವಿಧಾನ ಸಭಾ ಸದಸ್ಯರ ಸಂಖ್ಯಾಬಲ
Last Updated : Jul 7, 2019, 4:45 PM IST

TAGGED:

ABOUT THE AUTHOR

...view details