ಕರ್ನಾಟಕ

karnataka

ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನಾಗೇಂದ್ರ ನಾಯಕ್, ಆದಿತ್ಯ ಸೋಂಧಿ ಹೆಸರು ಶಿಫಾರಸು

By

Published : Sep 4, 2021, 7:34 PM IST

ಕರ್ನಾಟಕ ಹೈಕೋರ್ಟ್​​​​ನಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆಗಳಿಗೆ ನಾಗೇಂದ್ರ ನಾಯಕ್ ಮತ್ತು ಆದಿತ್ಯ ಸೋಂಧಿ ಎಂಬ ಇಬ್ಬರು ಹಿರಿಯ ವಕೀಲರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಪತ್ರ ಬರೆದಿದೆ..

Nagendra Nayak, Aditya Sandhi
ನಾಗೇಂದ್ರ ನಾಯಕ್, ಆದಿತ್ಯ ಸೋಂಧಿ

ಬೆಂಗಳೂರು : ಕರ್ನಾಟಕ ಹೈಕೋರ್ಟ್​​​​ನಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆಗಳಿಗೆ ಹಿರಿಯ ವಕೀಲರಾದ ನಾಗೇಂದ್ರ ನಾಯಕ್ ಮತ್ತು ಆದಿತ್ಯ ಸೋಂಧಿ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಪತ್ರ ಬರೆದಿದೆ.

ಸೆಪ್ಟೆಂಬರ್ 1ರಂದು ಸಿಜೆಐ ಎನ್​​​​ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ರಾಜ್ಯದ ಇಬ್ಬರು ವಕೀಲರ ಹೆಸರುಗಳನ್ನು ಮರು ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆಯೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪತ್ರ ಬರೆದಿತ್ತು. ಇದೀಗ ಎರಡನೇ ಬಾರಿ ಶಿಫಾರಸು ಮಾಡಿದೆ. ಈ ವೇಳೆ ಇತರೆ ಹೈಕೋರ್ಟ್​​ಗಳಿಗೂ ಕೆಲ ವಕೀಲರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.

ಸುಪ್ರೀಂಕೋರ್ಟ್ ವಿವಿಧ ಹೈಕೋರ್ಟ್​​​ಗಳಿಗೆ ಶಿಫಾರಸು ಮಾಡಿರುವ ಹೆಸರುಗಳು :

ಹೈಕೋರ್ಟ್-ವಕೀಲರ ಹೆಸರು

  • ಕರ್ನಾಟಕ ಹೈಕೋರ್ಟ್ - ಆದಿತ್ಯ ಸೋಂಧಿ, ನಾಗೇಂದ್ರ ನಾಯಕ್​​
  • ರಾಜಸ್ಥಾನ ಹೈಕೋರ್ಟ್ - ಫರ್ಜಾಂದ್ ಅಲಿ
  • ಕೋಲ್ಕತ್ತಾ ಹೈಕೋರ್ಟ್ - ಜಯತೋಶ್ ಮಜುಂದಾರ್, ಅಮಿತೇಶ್ ಬ್ಯಾನರ್ಜಿ, ರಾಜ ಬಸು ಚೌಧರಿ, ಲಪಿತಾ ಬ್ಯಾನರ್ಜಿ
  • ಜಮ್ಮು-ಕಾಶ್ಮೀರ ಹೈಕೋರ್ಟ್ - ರಾಹುಲ್ ಭಾರ್ತಿ, ಮೋಕ್ಷಾ ಕಜ್ಮಿ

ಓದಿ: ನೀ ನನಗೆ ಬೇಕು.. ನೀ ನನಗೆ ಬೇಕು ಬಾ.. ಬಾ.. ಕೊನೆಗೂ ಸುಕಾಂತ್ಯ ಕಂಡ ತ್ರಿಕೋನ ಪ್ರೇಮ ಕಥೆ..

ABOUT THE AUTHOR

...view details