ಕರ್ನಾಟಕ

karnataka

ಕೋಳಿ ಸಾರು ಮಾಡಿಲ್ಲ ಎಂದು ಪತ್ನಿಯ ಹತ್ಯೆ: ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ

By ETV Bharat Karnataka Team

Published : Dec 6, 2023, 9:15 PM IST

ಪತ್ನಿಯನ್ನು ಹತ್ಯೆಗೈದ ವ್ಯಕ್ತಿಗೆ ದಾವಣಗೆರೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ.

murder-of-wife-court-sentenced-to-6-years-imprisonment-to-accused
ಕೋಳಿ ಸಾರು ಮಾಡಿಲ್ಲ ಎಂದು ಪತ್ನಿಯ ಹತ್ಯೆ : ಆರೋಪಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ದಾವಣಗೆರೆ: ಚಿಕನ್ ಸಾರು ಮಾಡಿಲ್ಲ ಎಂದು ತನ್ನ ಪತ್ನಿಯನ್ನು ಕೊಲೆಗೈದ ವ್ಯಕ್ತಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. 10 ಸಾವಿರ ರೂ ದಂಡವನ್ನೂ ವಿಧಿಸಿದೆ. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಶಿಕ್ಷೆಗೊಳಗಾದ ಅಪರಾಧಿ.

2022ರ ಜೂನ್ 8ರಂದು ಇಲ್ಲಿನ ಬನ್ನಿಕೋಡು ಗ್ರಾಮದಲ್ಲಿ ಘಟನೆ ನಡೆದಿತ್ತು. ಕಂಠಪೂರ್ತಿ ಕುಡಿದು ಬಂದಿದ್ದ ಕೆಂಚಪ್ಪ ತನ್ನ ಪತ್ನಿಯಲ್ಲಿ ಏಕೆ ಕೋಳಿ ಸಾರು (ಚಿಕನ್) ಅಡುಗೆ ತಯಾರು ಮಾಡಿಲ್ಲ ಎಂದು ಪ್ರಶ್ನಿಸಿದ್ದ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಕೆಂಚಪ್ಪ ತನ್ನ ಪತ್ನಿ ಶೀಲಾ ಅವರಿಗೆ ಚಾಕುವಿನಿಂದ ಎಡಭುಜಕ್ಕೆ ಇರಿದು ಹತ್ಯೆ ಮಾಡಿದ್ದನು. ಈ ಕುರಿತು ಶೀಲಾ ಅವರ ತಾಯಿ ಉಕ್ಕಡಗಾತ್ರಿ ಮೂಲದ ಗುತ್ಯಮ್ಮ ಅವರು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ತನಿಖಾಧಿಕಾರಿ ಸಿಪಿಐ ಸತೀಶ್ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಆಲಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ ಅಪರಾಧಿ ಕೆಂಚಪ್ಪನಿಗೆ 6 ವರ್ಷ ಸಜೆ ಹಾಗು ಹತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಕೀಲ ಸತೀಶ್ ಕುಮಾರ್ ವಾದ ಮಂಡಿಸಿದರು.

ಇದನ್ನೂ ಓದಿ:ವಿವಾಹೇತರ ಸಂಬಂಧ : ಇಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ABOUT THE AUTHOR

...view details