ಕರ್ನಾಟಕ

karnataka

ಕೊರೊನಾ ಸೋಂಕು ನಿವಾರಣೆಗೆ ಏ. 13ರಂದು ಇಷ್ಟಲಿಂಗ ಪೂಜೆಗೆ ಕರೆ

By

Published : Apr 7, 2020, 11:24 PM IST

ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಏಪ್ರಿಲ್ 13ರಂದು ಇಷ್ಟಲಿಂಗ ಪೂಜೆ ನೆರವೇರಿಸುವಂತೆ ಕರೆ ನೀಡಲಾಗಿದ್ದು, ಭಕ್ತರು ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಬೇಕು ಎಂದು ಕೋರಿದೆ.

call from veerashaiva mahasabhe
ಏಪ್ರಿಲ್​ 13ರಂದು ಇಷ್ಟಲಿಂಗ ಪೂಜೆಗೆ ಕರೆ

ಬೆಂಗಳೂರು: ಕೊರೊನಾ ಸೋಂಕಿನ ನಿವಾರಣೆಗಾಗಿ ಪ್ರಾರ್ಥಿಸಿ ಏಪ್ರಿಲ್‌ 13ರಂದು ಇಷ್ಟಲಿಂಗ ಪೂಜೆ ನೆರವೇರಿಸುವಂತೆ ಶಿವಭಕ್ತರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಕರೆ ನೀಡಿದೆ.

ಏಪ್ರಿಲ್​ 13ರಂದು ಇಷ್ಟಲಿಂಗ ಪೂಜೆಗೆ ಕರೆ

ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವ ಸದುದ್ದೇಶದೊಂದಿಗೆ ಸಮಸ್ತ ವೀರಶೈವ ಲಿಂಗಾಯತರು ಏಪ್ರಿಲ್ 13ರಂದು ಸಂಜೆ 7 ಗಂಟೆಗೆ ಇಷ್ಟಲಿಂಗ ಪೂಜೆಯನ್ನು ತಾವು ಇರುವ ಸ್ಥಳಗಳಿಂದಲೇ ಸಲ್ಲಿಸಿ, ಧ್ಯಾನಸ್ಥರಾಗಿ. ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿಯಿಂದ ಮುಕ್ತಗೊಳಿಸಲು ಪೂಜೆ ಸಲ್ಲಿಸಿ ಎಂದು ಮನವಿ ಮಾಡಿದೆ.

ವೀರಶೈವ ಲಿಂಗಾಯತ ಸಮಾಜದ ವಿವಿಧ ಮಠಾಧೀಶರು, ಸುತ್ತೂರು ಶ್ರೀಗಳು, ತುಮಕೂರಿನ ಸಿದ್ಧಗಂಗಾ ಮಠಾಧೀಶರು, ಚಿತ್ರದುರ್ಗದ ಬೃಹನ್ ಮಠ, ಹುಬ್ಬಳ್ಳಿ ಸಿದ್ದಾರೂಢ ಹಾಗೂ ಮೂರು ಸಾವಿರ ಮಠ, ಚಿತ್ರದುರ್ಗದ ಸಾಣೇಹಳ್ಳಿ ಮಠ, ಕೂಡಲ ಸಂಗಮ ಪಂಚಮಸಾಲಿ ಪೀಠ, ಧಾರವಾಡದ ಮುರುಘಾ ಮಠ, ಬೆಳಗಾವಿಯ ನಾಗನೂರು ಮಠ, ಗದಗಿನ ತೋಂಟದಾರ್ಯ ಮಠ, ಕಲಬುರಗಿಯ ಶರಣ ಬಸಪ್ಪ ಅಪ್ಪಗಳ ಮಹಾಸಂಸ್ಥಾನ ಹಾಗೂ ಬೀದರ್​ ಭಾಲ್ಕಿ ಮಠಗಳ ಪೀಠಾಧ್ಯಕ್ಷರು ಹಾಗೂ ಪಂಚ ಪೀಠಗಳ ಪೀಠಾಧ್ಯಕ್ಷರು ಈ ಲೋಕ ಕಲ್ಯಾಣ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಮ್ಮ ಮನೆಗಳಲ್ಲಿಯೇ ಕುಟುಂಬ ಸಮೇತರಾಗಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕೆಂದು ವಿನಂತಿಸಿದೆ.

ABOUT THE AUTHOR

...view details