ETV Bharat / state

ಗ್ರಾಮೀಣರಿಗೆ ಸ್ಥಳೀಯವಾಗಿಯೇ ನ್ಯಾಯ ಸಿಗಬೇಕೆಂಬ ಪರಿಕಲ್ಪನೆಯಡಿ ನೂತನ ಕಾನೂನು: ಹೊಸ ನೀತಿಯಲ್ಲಿ ಏನೆಲ್ಲಾ ಇರಲಿದೆ? - Law and Policy 2023

'ಕಾನೂನು ಮತ್ತು ನೀತಿ-2023' ಪ್ರಸ್ತಾವನೆಗೆ ಗುರುವಾರ ಸಚಿವ ಸಂಪುಟ ಅನುಮೋದನೆ ಸಿಕ್ಕಿದ್ದು, ಇನ್ನು ಮುಂದೆ ಸಣ್ಣ ಪುಟ್ಟ ವ್ಯಾಜ್ಯಗಳೆಲ್ಲ ನಿಮ್ಮೂರಿನ ಕಟ್ಟೆ ಪಂಚಾಯತ್‌ಗಳಲ್ಲೇ ಇತ್ಯರ್ಥವಾಗಲಿವೆ.

New law and policy under the concept that rural people should get justice locally
ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ನ್ಯಾಯ ಸಿಗಬೇಕೆಂಬ ಪರಿಕಲ್ಪನೆಯಡಿ ನೂತನ ಕಾನೂನು ಮತ್ತು ನೀತಿ (ETV Bharat)
author img

By ETV Bharat Karnataka Team

Published : Jul 6, 2024, 10:51 PM IST

ಬೆಂಗಳೂರು: ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಓಡಾಡುವ ಬದಲಿಗೆ ಜನರ ಮನೆ ಬಾಗಿಲಿಗೆ ನ್ಯಾಯವನ್ನು ಕೊಂಡೊಯ್ಯುವ ಉದ್ದೇಶದಿಂದ ಗ್ರಾಮ ನ್ಯಾಯಾಲಯದಂತಹ ವಿನೂತನ ಪರಿಕಲ್ಪನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ, "ಕಾನೂನು ಮತ್ತು ನೀತಿ-2023" ರೂಪಿಸಿದೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ 'ಕಾನೂನು ಮತ್ತು ನೀತಿ-2023' ಪ್ರಸ್ತಾವನೆಗೆ ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.

ತ್ವರಿತ ನ್ಯಾಯ ಒದಗಿಸುವುದು, ಆ ಮೂಲಕ ವ್ಯಾಜ್ಯಮುಕ್ತ ಗ್ರಾಮ ನಿರ್ಮಾಣದ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ, ಹೊಸ ತಾಲೂಕುಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ, ನ್ಯಾಯಾಂಗದ ಮೂಲಸೌಕರ್ಯ ನವೀಕರಣ, ಆಧುನೀಕರಣ ಮತ್ತು ತಂತ್ರಜ್ಞಾನ ಬಳಕೆ, 'ನಾಗರಿಕ ಸ್ನೇಹಿ' ಆಡಳಿತ ಸಹಿತ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಉದ್ದೇಶವಾಗಿದೆ. ಇನ್ನು ಮುಂದೆ ಸಣ್ಣ ಪುಟ್ಟ ವ್ಯಾಜ್ಯಗಳೆಲ್ಲ ನಿಮ್ಮೂರಿನ ಕಟ್ಟೆ ಪಂಚಾಯತ್‌ಗಳಲ್ಲೇ ಇತ್ಯರ್ಥವಾಗಲಿವೆ.

ಆರೋಪಿ, ಸಾಕ್ಷಿಗಳ ಹೆಸರನ್ನು ಬಹಿರಂಗವಾಗಿ ಕೂಗುವ ವ್ಯವಸ್ಥೆ ರದ್ದುಗೊಳಿಸುವುದು, ಅಗತ್ಯವಿಲ್ಲದಾದ ಸಮಯದಲ್ಲಿ ವಿಚಾರಣೆ ಆರೋಪಿಗಳಿಗೆ ಕುಳಿತುಕೊಳ್ಳಲು ಡಾಕ್‌ನಲ್ಲಿ ಸೌಲಭ್ಯ, ಎಲ್ಲ ಹೊಸ ತಾಲೂಕುಗಳಲ್ಲಿ ನ್ಯಾಯಾಲಯ ಸ್ಥಾಪನೆ, ಆಧುನಿಕ ಸಂವಹನದ ವಿಧಾನದ ಮೂಲಕ ಸಮನ್ಸ್ ಜಾರಿ, ಹಳತಾದ ಕಾನೂನು ರದ್ದು, ಮಾದರಿ ನ್ಯಾಯಾಲಯಗಳ ಸ್ಥಾಪನೆ, ಕಾನೂನು ಶಿಕ್ಷಣ ನಿರ್ದೇಶನಾಲಯಗಳ ಸ್ಥಾಪನೆ ಹೀಗೆ ಹತ್ತು ಹಲವು ಸುಧಾರಣಾ ಕ್ರಮಗಳು ನೀತಿಯಲ್ಲಿ ಪ್ರಸ್ತಾಪವಾಗಿದೆ.

ಕಾನೂನು ಮತ್ತು ನೀತಿ ಅಡಿ ನ್ಯಾಯಿಕ ಮೂಲಸೌಕರ್ಯ ನವೀಕರಣಕ್ಕಾಗಿಯೇ ಸರಕಾರವು ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಇಚ್ಛಾಶಕ್ತಿ ವ್ಯಕ್ತಪಡಿಸಿದೆ. ಇದರಲ್ಲಿ ವಕೀಲರು, ಅಭಿಯೋಜಕರು, ಕಕ್ಷಿದಾರರಿಗೆ ಮೂಲಸೌಲಭ್ಯ ಕಲ್ಪಿಸುವುದು, ಸಂಧಾನ, ಮಾತುಕತೆ ಮತ್ತಿತರ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಗಳನ್ನು ನಿರ್ವಹಿಸಲು ಹೆಚ್ಚುವರಿ ಮೂಲಸೌಕರ್ಯ ಸೃಷ್ಟಿಸುವುದು, ತಂತ್ರಜ್ಞಾನಗಳ ಅಳವಡಿಕೆ ಮತ್ತಿತರ ಅಂಶಗಳು ಒಳಗೊಂಡಿವೆ.

ಪ್ರಕರಣಗಳ ತ್ವರಿತ ವಿಲೇವಾರಿ ಸೇವೆಗಾಗಿ ತಂತ್ರಜ್ಞಾನವನ್ನು ತರಬೇಕಾಗಿದೆ. ವಿವಿಧ ಉದ್ದೇಶಗಳಿಗಾಗಿ ನ್ಯಾಯಾಲಯಗಳಿಗೆ ಭೇಟಿ ನೀಡುವ ಎಲ್ಲ ಮಧ್ಯಸ್ಥಗಾರರು, ವಿಶೇಷವಾಗಿ ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ ನ್ಯಾಯಾಲಯದ ಆವರಣದಲ್ಲಿ ಸೂಕ್ತ ವಾತಾವರಣವನ್ನು ನಿರ್ಮಿಸಬೇಕಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆಂಬ ಭಾವನೆಯು ಅವರಲಿ ಮೂಡಬೇಕು. ನ್ಯಾಯಾಲಯಗಳನ್ನು ಪ್ರವೇಶಿಸಲು ಇಳಿಜಾರು (Ramps) ಮತ್ತು ಗಾಲಿಕುರ್ಚಿಗಳನ್ನು ಒದಗಿಸಬೇಕಾಗುವುದು, ಯಾವುದೇ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಅಭಿಯೋಜನಾ (prosecution) ವಿಭಾಗವು ಆಧುನಿಕ ತಂತ್ರಜ್ಞಾನದೊಂದಿಗೆ ಸನ್ನದ್ಧವಾಗಿರಬೇಕು. ಸಮಾಜದಲ್ಲಿ ಕಾನೂನಿನ ಗೌರವವನ್ನು ಕಾಪಾಡಲು ಅಪರಾಧ ಎಸಗಿದವರನ್ನು ನ್ಯಾಯಾಂಗದ ಮುಂದೆ ತರಬೇಕು.

ಮಾನವ ಹಕ್ಕು ಉಲ್ಲಂಘನೆ ಸಂತ್ರಸ್ತರ ಪ್ರಕರಣದಲ್ಲಿ ಅಗತ್ಯ ನೆರವು ನೀಡಲು ಸಂಸ್ಥೆಗಳ ಸ್ಥಾಪನೆ, ವ್ಯಾಜ್ಯ ನಿರ್ವಹಿಸುವ ಸರ್ಕಾರದ ನೀತಿಯಲ್ಲಿ ಮಾದರಿ ಬದಲಾವಣೆ ಮಾಡಿಕೊಳ್ಳುವುದು, ಬಾಕಿ ಇರುವ ಪ್ರಕರಣ ವಿಲೇವಾರಿ ಮಾಡಲು ವಿಶೇಷ ಕ್ರಮ, ಸರಳ ಭಾಷೆಯಲ್ಲಿ ಕಾನೂನು ರಚನೆ ಮತ್ತು ಪ್ರಕಟಣೆ, ಮಹಿಳೆಯರು, ಹದಿಹರೆಯದವರ, ಹಿರಿಯರ ಅಗತ್ಯತೆ ಪೂರೈಸುವುದು, ಇಲಾಖೆಗಳು ಕಾನೂನು, ಹೊಸ ನಿಯಮಗಳನ್ನು ಪಾಲಿಸುವಂತೆ ಮಾಡಲು ಕ್ರಮ, ವೃತ್ತಿನಿರತರಿಗೆ ಕೆಲಸ ಮಾಡಲು ಅನುಕೂಲಕರ ವಾತಾವರಣ ಕಲ್ಪಿಸುವುದು, ಕಾರಾಗೃಹಗಳಲ್ಲಿ ಕಾನೂನು ನೆರವು ಸೌಲಭ್ಯ, ಅಪರಾಧಕ್ಕಾಗಿ ಸೂಚಿಸಲಾದ ಗರಿಷ್ಠ ಶಿಕ್ಷೆಗಿಂತ ಹೆಚ್ಚು ಅವಧಿ ಬಂಧನದಲ್ಲಿರುವ ವ್ಯಕ್ತಿಗಳ ಬಿಡುಗಡೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ, ಅವಧಿ ಮೀರಿದ ಕಾನೂನು ರದ್ದುಗೊಳಿಸುವುದು, ಕರ್ನಾಟಕ ಆಡಳಿತಾತ್ಮಕ (ಕಾರ್ಯ ನಿರ್ವಹಣೆ) ಅಧಿನಿಯಮ, ಎಲ್ಲ ಕಂದಾಯ ವಿಭಾಗಗಳಲ್ಲಿ ಎಲ್ಲ ಆಧುನಿಕ ಸೌಲಭ್ಯ ಇರುವ ವಿಧಿವಿಜ್ಞಾನ ಸಂಸ್ಥೆ ಸ್ಥಾಪನೆ ಮಾಡುವ ಉದ್ದೇಶವನ್ನು ನೀತಿಯಲ್ಲಿ ಸಾರಲಾಗಿದೆ.

ಜತೆಗೆ 10 ಹೊಸ ವಿಧೇಯಕ ತರುವ ಪ್ರಸ್ತಾಪಿಸಿದ್ದು, ಕುಡಿಯುವ ನೀರನ್ನು ಸುರಕ್ಷಿತ ಗೊಳಿಸುವುದು, ಮತದಾರರ ಮಾಹಿತಿ ಕಳ್ಳತನ ತಡೆಯುವುದು, ಆನ್‌ಲೈನ್ ಲೋನ್ ಏಜೆನ್ಸಿಗಳ ನಿಯಂತ್ರಣ ವಿಧೇಯಕ ತರಲಾಗುತ್ತದೆ. ಸರ್ಕಾರಿ ನಿಯಮಾವಳಿಗಳಡಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುವಂತೆ ಮಾಡಲು ಹೊಸ ನೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಪ್ಪಿದರೆ ಸಂಬಂಧಪಟ್ಟ ಅಧಿಕಾರಿ ಹೊಣೆಗಾರನಾಗಿರುತ್ತಾರೆ. ಅಧಿಕಾರಿಗಳು ಕಾನೂನಿಗೆ ಬದ್ಧರಾಗಿರಲು ಮತ್ತು ವೈಫ‌ಲ್ಯದ ಸಂದರ್ಭದಲ್ಲಿ ಅನುಸರಿಸಬಹುದಾದ ಪರಿಣಾಮಗಳನ್ನು ಎದುರಿಸಲು ಸೂಕ್ತ ಕಾನೂನು ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡ 'ಕಾನೂನು ಮತ್ತು ನೀತಿ- 2023’ರಲ್ಲಿ ಉಲ್ಲೇಖಿಸಲಾಗಿದೆ.

"ಈ ಕಾನೂನು ಮತ್ತು ನೀತಿಯಡಿ ಮುಖ್ಯವಾಗಿ ಗ್ರಾಮದತ್ತ ನ್ಯಾಯದಾನ ವ್ಯವಸ್ಥೆ ತರುವುದಾಗಿದೆ. ಪ್ರತಿ ಜಿಲ್ಲೆಯ ಆಯ್ದ 2-3 ಹಳ್ಳಿಗಳಲ್ಲಿ ಜೆಎಂಎಫ್ಸಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಪ್ರಸ್ತುತ ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ಇರುವಂತೆಯೇ ಗ್ರಾಮಗಳಲ್ಲೂ ನ್ಯಾಯಾಧೀಶರನ್ನು ನೇಮಿಸಲಾಗುತ್ತದೆ. ಅಲ್ಲಿ ಸಾಧ್ಯವಾದಷ್ಟು ವ್ಯಾಜ್ಯಗಳನ್ನು ರಾಜಿ - ಸಂಧಾನಗಳ ಮೂಲಕವೇ ಬಗೆಹರಿಸಲಾಗುತ್ತದೆ. ಒಟ್ಟು 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಗ್ರಾಮ ನ್ಯಾಯಾಲಯ ಕಾಯ್ದೆಯ ಭಾಗವಾಗಿದೆ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ಏನಿದು ಗ್ರಾಮ ನ್ಯಾಯಾಲಯ?:

  • ಕಟ್ಟೆ ಪಂಚಾಯತ್‌ ರೀತಿಯಲ್ಲಿ ಗ್ರಾಮಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ.
  • ಪ್ರತೀ ಜಿಲ್ಲೆಯ ಆಯ್ದ 2-3 ಹಳ್ಳಿಗಳಲ್ಲಿ ಈ ನ್ಯಾಯಾಲಯಗಳು ತಲೆ ಎತ್ತಲಿವೆ. ಈ ಗ್ರಾಮಗಳಲ್ಲೂ ನ್ಯಾಯಾಧೀಶರನ್ನು ನೇಮಕ ಮಾಡಲಾಗುತ್ತದೆ.
  • ಇಲ್ಲಿ ಸಾಧ್ಯವಾದಷ್ಟು ವ್ಯಾಜ್ಯಗಳನ್ನು ರಾಜಿ - ಸಂಧಾನಗಳ ಮೂಲಕವೇ ಬಗೆಹರಿಸಲಾಗುತ್ತದೆ.
  • ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣ ಮತ್ತು ತ್ವರಿತ ನ್ಯಾಯದಾನ ಇದರ ಮುಖ್ಯ ಉದ್ದೇಶ.

ಗ್ರಾಮ ನ್ಯಾಯಾಲಯದ ಕಾರ್ಯಾಚರಣೆ ಹೇಗಿರಲಿದೆ?:

  • ಆಯ್ಕೆಯಾದ ಗ್ರಾಮಗಳಿಗೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಮೀಕ್ಷೆ.
  • ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಪ್ರಕರಣಗಳ ಮೇಲ್ವಿಚಾರಣೆ.
  • ಸರಳ ಭಾಷೆಯಲ್ಲಿ ಕಾನೂನುಗಳ ರಚನೆ ಮತ್ತು ಪ್ರಕಟಣೆ.
  • ಸಾರ್ವಜನಿಕ ಕಾನೂನು ಶಿಕ್ಷಣಕ್ಕಾಗಿ ಪೂರಕ ಕ್ರಮ.
  • ಕಾನೂನು ಶಿಕ್ಷಣಕ್ಕಾಗಿ ವಕೀಲರ ಅಕಾಡೆಮಿ ಸ್ಥಾಪನೆ.
  • ಅಗತ್ಯ ಇರುವ ಕಡೆ ಮಾದರಿ ನ್ಯಾಯಾಲಯಗಳ ಸ್ಥಾಪನೆ.
  • ಹದಿಹರೆಯದವರು ಇಂಟರ್‌ನೆಟ್‌ ವ್ಯಸನಿಗಳಾಗದಂತೆ ಸೂಕ್ತ ನೀತಿ ನಿರೂಪಣೆ.
  • ಕೆಲವು ಚಟುವಟಿಕೆಯನ್ನು ನಿಷೇಧಿಸಲು ಕಾನೂನು ಜಾರಿ ಬಗ್ಗೆ ಚಿಂತನೆ.
  • ಸರ್ಕಾರದಿಂದ 100 ಗ್ರಾಮ ನ್ಯಾಯಾಲಯಗಳ ಸ್ಥಾಪನೆ.
  • ಎಲ್ಲ ಹೊಸ ತಾಲೂಕುಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ
  • ಇಲಾಖೆಗಳಿಗೂ ಕಾನೂನು.

"ಗ್ರಾಮೀಣ ಜನರಿಗೆ ಗ್ರಾಮಮಟ್ಟದಲ್ಲೇ ನ್ಯಾಯ ದೊರಕಿಸಿಕೊಡುವುದಕ್ಕಾಗಿ ನೂತನ ನ್ಯಾಯ ನೀತಿ ರೂಪಿಸಲಾಗುತ್ತಿದೆ. ಅದಕ್ಕಾಗಿ ಹಿಂದಿನ ಅರಳೀಕಟ್ಟೆ ನ್ಯಾಯ ಪಂಚಾಯಿತಿ ಮಾದರಿಯಲ್ಲಿ ನ್ಯಾಯಾಲಯಗಳನ್ನು ಸ್ಥಾಪಿಸಿ ಅದಕ್ಕೆ ನ್ಯಾಯಾಧೀಶರೇ ಅಧ್ಯಕ್ಷತೆ ವಹಿಸುವಂತಹ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ನೂತನ ನೀತಿಯ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಇದನ್ನೂ ಓದಿ: 'ಬುಲ್ಡೋಜರ್ ನ್ಯಾಯ'ದ ಹೊಸ ಕ್ರಿಮಿನಲ್ ಕಾನೂನುಗಳನ್ನು ಇಂಡಿಯಾ ಕೂಟ ಒಪ್ಪಲ್ಲ: ಕಾಂಗ್ರೆಸ್​ - new Criminal laws

ETV Bharat Logo

Copyright © 2024 Ushodaya Enterprises Pvt. Ltd., All Rights Reserved.