ETV Bharat / state

ಜುಲೈ 8 ರಂದು ಬೆಳಗಾವಿ, ವಾಸ್ಕೋ, ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು ಸಂಚಾರ - Special Train for Udhna - SPECIAL TRAIN FOR UDHNA

ಬೆಳಗಾವಿ, ವಾಸ್ಕೋ-ಡ-ಗಾಮಾ ಮತ್ತು ಹುಬ್ಬಳ್ಳಿಯಿಂದ ಉಧ್ನಾ ನಿಲ್ದಾಣಕ್ಕೆ ಜುಲೈ 8ರಂದು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

train
ಹುಬ್ಬಳ್ಳಿ ರೈಲು ನಿಲ್ದಾಣ (ETV Bharat)
author img

By ETV Bharat Karnataka Team

Published : Jul 6, 2024, 10:54 PM IST

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಸಲುವಾಗಿ, ಭಾರತೀಯ ರೈಲ್ವೆಯು ಬೆಳಗಾವಿ, ವಾಸ್ಕೋ-ಡ-ಗಾಮಾ ಮತ್ತು ಹುಬ್ಬಳ್ಳಿಯಿಂದ ಉಧ್ನಾ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳು ಜುಲೈ 8ರಂದು ಸಂಚರಿಸಲಿವೆ.

1. ಬೆಳಗಾವಿಯಿಂದ ಉಧ್ನಾಕ್ಕೆ ವಿಶೇಷ ರೈಲು (07353): ಈ ವಿಶೇಷ ರೈಲು ಜುಲೈ 8ರ ಬೆಳಗ್ಗೆ 10:30 ಗಂಟೆಗೆ ಬೆಳಗಾವಿಯಿಂದ ಹೊರಟು ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್, ಪಾಲ್ಘರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಮಧ್ಯ ರಾತ್ರಿ 2:45ಕ್ಕೆ ಗುಜರಾತ್​ನ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ವಿಶೇಷ ರೈಲು ಎಸಿ ಟು ಟೈಯರ್-2, ಎಸಿ ತ್ರಿ ಟೈಯರ್-2, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-4, ಎಸ್​ಎಲ್​ಆರ್​​ಡಿ-2 ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

2. ವಾಸ್ಕೋಡಗಾಮಾದಿಂದ ಉಧ್ನಾಕ್ಕೆ ವಿಶೇಷ ರೈಲು (07357): ಈ ವಿಶೇಷ ರೈಲು ಜುಲೈ 8ರಂದು ಬೆಳಗ್ಗೆ 10:00 ಗಂಟೆಗೆ ವಾಸ್ಕೋಡಗಾಮಾದಿಂದ ಹೊರಟು ಮಜೋರ್ಡಾ, ಮಡಗಾಂವ್, ಥಿವಿಮ್, ರತ್ನಾಗಿರಿ, ರೋಹಾ, ಪನ್ವೆಲ್, ಕಮಾನ್ ರೋಡ್, ವಸಾಯಿ ರೋಡ್ ಮತ್ತು ವಾಪಿ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಬೆಳಗ್ಗೆ 3:30ಕ್ಕೆ ಉಧ್ನಾ ನಿಲ್ದಾಣವನ್ನು ತಲುಪಲಿದೆ.

ಈ ರೈಲಿಗೆ ಎಸಿ ಟು ಟೈಯರ್-1, ಎಸಿ ತ್ರಿ ಟೈಯರ್-2, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-3, ಎಸ್ಎಲ್ ಆರ್ ಡಿ-1 ಸೇರಿದಂತೆ ಒಟ್ಟು 17 ಬೋಗಿಗಳು ಇರಲಿವೆ.

3. ಹುಬ್ಬಳ್ಳಿಯಿಂದ ಉಧ್ನಾಗೆ ವಿಶೇಷ ರೈಲು (07359): ಈ ರೈಲು ಜುಲೈ 8ರ ರಾತ್ರಿ 9:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಧಾರವಾಡ, ಲೋಂಡಾ, ಬೆಳಗಾವಿ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ಕಲ್ಯಾಣ್, ಭಿವಂಡಿ ರೋಡ್, ವಸಾಯಿರೋಡ್, ಪಾಲ್ಘರ್, ವಾಪಿ ಮತ್ತು ವಲ್ಸಾದ್ ನಿಲ್ದಾಣಗಳಲ್ಲಿ ನಿಲುಗಡೆಯ ಮೂಲಕ ಮರುದಿನ ಸಂಜೆ 4:00 ಗಂಟೆಗೆ ಉಧ್ನಾ ತಲುಪಲಿದೆ.

ಇದರಲ್ಲಿ ಎಸಿ ಟು ಟೈಯರ್-1, ಎಸಿ ತ್ರಿ ಟೈಯರ್-3, ಸ್ಲೀಪರ್ ಕ್ಲಾಸ್-8, ಜನರಲ್ ಸೆಕೆಂಡ್ ಕ್ಲಾಸ್-3, ಎಸ್ಎಲ್ ಆರ್ ಡಿ-2 ಸೇರಿದಂತೆ ಒಟ್ಟು 17 ಬೋಗಿಗಳು ಇರಲಿವೆ. ನಿಯಮಿತ ರೈಲುಗಳಲ್ಲಿ ವಿಪರೀತ ರಶ್ ಇರುವುದರಿಂದ ಅನಾನುಕೂಲತೆ ಎದುರಿಸುತ್ತಿರುವ ಪ್ರಯಾಣಿಕರಿಗಾಗಿ ಈ ವಿಶೇಷ ರೈಲುಗಳ ಸೇವೆ ನೀಡಲಾಗುತ್ತಿದೆ.

ಮುಂಗಡ ಬುಕಿಂಗ್ ಮತ್ತು ವೇಳಾಪಟ್ಟಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ 139 ನಂಬರಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ‌. ಮಂಜಿನಾಥ ಕರಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಕೇಂದ್ರ ಸಚಿವ ವಿ.ಸೋಮಣ್ಣ - Railway Station Upgradation

ETV Bharat Logo

Copyright © 2025 Ushodaya Enterprises Pvt. Ltd., All Rights Reserved.