ಕರ್ನಾಟಕ

karnataka

ಪಕ್ಷದ ಹೈಕಮಾಂಡ್​​​​ ನಿರ್ಧಾರಕ್ಕೆ ನಾವು ಬದ್ಧ: ಗೋವಿಂದ ಕಾರಜೋಳ

By

Published : Jan 30, 2020, 12:18 PM IST

ಇಂದು ವಿಧಾನಸೌಧದಲ್ಲಿ ಡಿಸಿಎಂ ಗೋಂವಿಂದ ಕಾರಜೋಳ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೀವಿ ಅಂದಿದ್ದಾರೆ. ಅದರಂತೆ ನಡೆದುಕೊಳ್ತಾರೆ. ಇವತ್ತು ವರಿಷ್ಠರನ್ನು ಸಿಎಂ ಭೇಟಿ ಆಗೇ ಆಗ್ತಾರೆ ಎಂದರು.

DCM Govinda karajola
ಗೋವಿಂದ ಕಾರಜೋಳ

ಬೆಂಗಳೂರು:ಹಾಲಿ ಡಿಸಿಎಂಗಳು ಮುಂದುವರೆಯುವ ವಿಚಾರ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬವಾಗಿಲ್ಲ. ಇವತ್ತು ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ಮಾಡ್ತಾರೆ. ಸಂಪುಟ ವಿಸ್ತರಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಿನ್ನೆ ಸಿಎಂ ಇನ್ನೆರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡ್ತೀವಿ ಅಂದಿದ್ದಾರೆ. ಅದರಂತೆ ನಡೆದುಕೊಳ್ತಾರೆ. ಇವತ್ತು ವರಿಷ್ಠರನ್ನು ಸಿಎಂ ಭೇಟಿ ಆಗೇ ಆಗ್ತಾರೆ. ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ‌ ವರಿಷ್ಠರು ತೀರ್ಮಾನಿಸ್ತಾರೆ ಎಂದು ಹೇಳಿದರು.

ಸಚಿವ ಬಿ.ಶ್ರೀರಾಮಲು ಡಿಸಿಎಂ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಬೇಕಾದ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಪಕ್ಷ ಅಂದ್ರೆ ತಾಯಿ ಇದ್ದಂತೆ. ಇಂದು ಹೈಕಮಾಂಡ್ ನಾಯಕರ ಜೊತೆ ಯಡಿಯೂರಪ್ಪ ಮಾತಾಡ್ತಾರೆ. ಯಾವುದೇ ಸಂದೇಹ ಬೇಡ, ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಿಎಂ ಚರ್ಚೆ ಮಾಡ್ತಾರೆ ಎಂದರು.

ABOUT THE AUTHOR

...view details