ಕರ್ನಾಟಕ

karnataka

ಫುಟ್​ಬಾಲ್​: ಲೆವಾಂಡೋಸ್ಕಿ ಮಡಿಲಿಗೆ ವರ್ಷದ ಜರ್ಮನ್ ಆಟಗಾರ ಪ್ರಶಸ್ತಿ

By

Published : Aug 31, 2020, 8:11 AM IST

ಈ ವರ್ಷ ಯುಸಿಎಲ್‌ನಲ್ಲಿ ಜುವೆಂಟಸ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ 15 ಗೋಲುಗಳ ದಾಖಲೆಯನ್ನು ಲೆವಾಂಡೋಸ್ಕಿ ಸರಿಗಟ್ಟಿದ್ದು, ಜರ್ಮನಿಯ ವರ್ಷದ ಫುಟ್‌ಬಾಲ್ ಆಟಗಾರನಾಗಿ ಸನ್ಮಾನಿಸಲ್ಪಟ್ಟಿದ್ದಾರೆ.

Lewandowski crowned German player of the year award
ಲೆವಾಂಡೋಸ್ಕಿ ಮಡಿಲಿಗೆ ವರ್ಷದ ಜರ್ಮನ್ ಆಟಗಾರ ಪ್ರಶಸ್ತಿ

ಫ್ರಾಂಕ್‌ಫರ್ಟ್: ಬೇಯರ್ನ್ ಮ್ಯೂನಿಚ್‌ ಫುಟ್​ಬಾಲ್​ ಕ್ಲಬ್​ನ ಆಟಗಾರ ರಾಬರ್ಟ್ ಲೆವಾಂಡೋಸ್ಕಿಯನ್ನು ಜರ್ಮನಿಯ ವರ್ಷದ ಫುಟ್‌ಬಾಲ್ ಆಟಗಾರನಾಗಿ ಸನ್ಮಾನಿಸಲಾಗಿದೆ.

ಈ ವರ್ಷ ಯುಸಿಎಲ್‌ನಲ್ಲಿ ಜುವೆಂಟಸ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ 15 ಗೋಲುಗಳ ದಾಖಲೆಯನ್ನು ಲೆವಾಂಡೋಸ್ಕಿ ಸರಿಗಟ್ಟಿದ್ದಾರೆ.

ಜರ್ಮನಿಯ ಕ್ರೀಡಾ ಪತ್ರಕರ್ತರ ಮತಗಳಿಂದ ಪ್ರಶಸ್ತಿಯನ್ನು ನಿರ್ಧರಿಸಲಾಯಿತು. ಲೆವಾಂಡೋಸ್ಕಿಗೆ 276 ಮತಗಳನ್ನು ಪಡೆದರೆ, ಬೇಯರ್ನ್‌ನ ಜರ್ಮನ್ ತಾರೆಗಳಾದ ಥಾಮಸ್ ಮುಲ್ಲರ್ (54 ಮತಗಳು) ಮತ್ತು ಜೋಶುವಾ ಕಿಮ್ಮಿಚ್ (49 ಮತಗಳು ) ನಂತರದ ಸ್ಥಾನದಲ್ಲಿದ್ದಾರೆ.

ಲೆವಾಂಡೋಸ್ಕಿ ಮಡಿಲಿಗೆ ವರ್ಷದ ಜರ್ಮನ್ ಆಟಗಾರ ಪ್ರಶಸ್ತಿ

ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಹೆಳಿರುವ ಲೆವಾಂಡೋಸ್ಕಿ, ನಿರೀಕ್ಷೆಗಳು ಹೆಚ್ಚಾಗುತ್ತಿವೆ ಮತ್ತು ಪ್ರತೀ ವರ್ಷ ನಾನು ಅವುಗಳನ್ನು ಮೀರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

2019-20ರ ಋತುವಿನಲ್ಲಿ ಬುಂಡೆಸ್ಲಿಗಾ ಚಾಂಪಿಯನ್​ನಲ್ಲಿ ಲೆವಾಂಡೋಸ್ಕಿ 55 ಗೋಲುಗಳನ್ನು ದಾಖಲಿಸಿದ್ದಾರೆ. ಈ ವರ್ಷ ಅವರು ಆಡಿದ ಪ್ರತಿಯೊಂದು ಸ್ಪರ್ಧೆಯಲ್ಲೂ ಅಗ್ರ ಸ್ಕೋರರ್ ಆಗಿದ್ದರು. 31 ವರ್ಷದ ಈ ಆಟಗಾರ ಬುಂಡೆಸ್ಲಿಗಾದಲ್ಲಿ 34, ಚಾಂಪಿಯನ್ಸ್ ಲೀಗ್‌ನಲ್ಲಿ 15 ಮತ್ತು ಜರ್ಮನ್ ಕಪ್‌ನಲ್ಲಿ 6 ಗೋಲುಗಳನ್ನು ಗಳಿಸಿದ್ದಾರೆ.

ABOUT THE AUTHOR

...view details