ETV Bharat / education-and-career

8,326 ಪೋಸ್ಟ್‌ಗಳ ಭರ್ತಿಗೆ ಎಸ್‌ಎಸ್‌ಸಿ ಬೃಹತ್ ಅಧಿಸೂಚನೆ; ಜಸ್ಟ್​ SSLC​​ ಪಾಸ್ ಮಾಡಿ - ಅರ್ಜಿ ಸಲ್ಲಿಸಿ! - SSC MULTI TASKING STAFF JOBS 2024

ನಿರುದ್ಯೋಗಿ ಯುವಕರಿಗೆ ಭಾರಿ ಬಂಪರ್​ ಸುದ್ದಿಯೊಂದು ಬಂದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಬೃಹತ್ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಇದರ ಮೂಲಕ 8,326 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ಹುದ್ದೆಗಳನ್ನು ಏಕಕಾಲದಲ್ಲಿ ಭರ್ತಿ ಮಾಡಲಾಗುತ್ತದೆ. ಕೇವಲ10ನೇ ತರಗತಿ ತೇರ್ಗಡೆಯಾದರೆ ಸಾಕು.

author img

By ETV Bharat Karnataka Team

Published : Jul 10, 2024, 9:22 PM IST

SSC MTS Notification 2024
8326 ಪೋಸ್ಟ್‌ಗಳ ಭರ್ತಿಗೆ ಎಸ್‌ಎಸ್‌ಸಿ ಬೃಹತ್ ಅಧಿಸೂಚನೆ; ಜಸ್ಟ್​ SSLC​​ ಪಾಸ್ ಮಾಡಿ - ಅರ್ಜಿ ಸಲ್ಲಿಸಿ! (ETV Bharat( ಸಂಗ್ರಹ ಚಿತ್ರ)

SSC MTS Notification 2024: ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿಯೊಂದು ಹೊರ ಬಿದ್ದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 8,326 ಹುದ್ದೆಗಳೊಂದಿಗೆ ಬೃಹತ್ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಹುಕಾರ್ಯಕ ಸಿಬ್ಬಂದಿ ಹಾಗೂ ಹವಾಲ್ದಾರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಗಡುವಿನೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪರೀಕ್ಷೆ ಎದುರಿಸಬಹುದಾಗಿದೆ.

ನೌಕರಿಯ ವಿವರಗಳು:

  • MTS - 4,887
  • ಹವಾಲ್ದಾರ್ - 3,439
  • ಒಟ್ಟು ಪೋಸ್ಟ್‌ಗಳು – 8,326

SSC MTS Qualifications - SSC MTS ವಿದ್ಯಾರ್ಹತೆಗಳು: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಬೋರ್ಡ್​ನಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

SSC MTS ವಯೋಮಿತಿ: SSC MTS Age Limit

  • MTS ಅಭ್ಯರ್ಥಿಗಳ ವಯಸ್ಸು 1ನೇ ಆಗಸ್ಟ್ 2024 ರಂತೆ 18-25 ವರ್ಷಗಳ ಒಳಗೆ ಇರಬೇಕು.
  • ಹವಾಲ್ದಾರ್ ಸೇರಿದಂತೆ ಕೆಲವು MTS ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು 18 - 27 ವರ್ಷಗಳ ನಡುವೆ ಇರಬೇಕು.
  • ಸರ್ಕಾರದ ನಿಯಮಗಳ ಪ್ರಕಾರ, OBC ಗಳಿಗೆ 3 ವರ್ಷಗಳು: ಅಂಗವಿಕಲರಿಗೆ 10 ವರ್ಷಗಳು; ST ಮತ್ತು SC ಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

SSC MTS ಅರ್ಜಿ ಶುಲ್ಕ: SSC MTS Application Fee

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.100 ಪಾವತಿಸಬೇಕು.
  • ಮಹಿಳೆಯರು, ಅಂಗವಿಕಲರು, ಎಸ್‌ಟಿ, ಎಸ್‌ಸಿ ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ

SSC MTS ಸಂಬಳ ಎಷ್ಟಿರುತ್ತೆ-SSC MTS Salary ?: ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ಎರಡೂ ಹುದ್ದೆಗಳು ಲೆವೆಲ್-1 ಉದ್ಯೋಗಗಳ ಅಡಿ ಬರುತ್ತವೆ. ಅವರ ಮೂಲ ವೇತನ 18,000ರೂ. ಡಿಎ, ಎಚ್‌ಆರ್‌ಎ ಮತ್ತು ಇತರ ಭತ್ಯೆಗಳನ್ನು ಸೇರಿಸಿದರೆ ಮೊದಲ ತಿಂಗಳಿನಿಂದ 35 ಸಾವಿರ ರೂ. ಸಂಬಳ ಪಡೆಯಬಹುದು.

SSC MTS ಆಯ್ಕೆ ಪ್ರಕ್ರಿಯೆ SSC MTS Selection Process: ಅಭ್ಯರ್ಥಿಗಳಿಗೆ ಮೊದಲು ವಸ್ತುನಿಷ್ಠ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ಮತ್ತು ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ) ಮಾಡಲಾಗುತ್ತದೆ. ದಾಖಲೆ ಪರಿಶೀಲನೆಯ ನಂತರ, ಅರ್ಹ ಅಭ್ಯರ್ಥಿಗಳನ್ನು ಎಂಟಿಎಸ್ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಇಟಿ): ಹವಾಲ್ದಾರ್ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರ ಭಾಗವಾಗಿ ಪುರುಷರು 1600 ಮೀಟರ್ ದೂರವನ್ನು 15 ನಿಮಿಷಗಳಲ್ಲಿ ಮತ್ತು ಮಹಿಳೆಯರು 20 ನಿಮಿಷಗಳಲ್ಲಿ ಒಂದು ಕಿಲೋಮೀಟರ್ ಅನ್ನು ಕ್ರಮಿಸಬೇಕು.

ದೈಹಿಕ ಪ್ರಮಾಣಿತ ಪರೀಕ್ಷೆ (PST): ಪುರುಷ ಎತ್ತರ 157.5 ಸೆಂ.ಮೀ ಆಗಿರಬೇಕು. ಉಸಿರಾಡುವಾಗ ಎದೆಯ ವಿಸ್ತರಣೆಯು ಕನಿಷ್ಠ 5 ಸೆಂ.ಮೀ ಹಿಗ್ಗಬೇಕು ಮತ್ತು 81 ಸೆಂ.ಮೀಗಿಂತ ಕಡಿಮೆ ಇರದಂತೆ ಇರಬೇಕು. ಮಹಿಳೆಯರು 152 ಸೆಂ ಎತ್ತರ ಮತ್ತು 48 ಕೆಜಿ ತೂಕ ಹೊಂದಿರಬೇಕು.

SSC MTS ಅಪ್ಲಿಕೇಶನ್ ಪ್ರಕ್ರಿಯೆ: SSC MTS Application Process

  • ಮೊದಲು ನೀವು https://ssc.gov.in/ ವೆಬ್‌ಸೈಟ್ ಭೇಟಿ ನೀಡಿ.
  • ಮುಖಪುಟದಲ್ಲಿ SSC MTS ಮತ್ತು ಹವಾಲ್ದಾರ್ ಆನ್‌ಲೈನ್ ಅನ್ವಯಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ ಲಾಗಿನ್ ಪುಟ ತಕ್ಷಣವೇ ತೆರೆದುಕೊಳ್ಳುತ್ತದೆ.
  • ಈಗ ನೀವು ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಹೆಸರು, ವಯಸ್ಸು, ವರ್ಗವನ್ನು ನಮೂದಿಸಿ ಮತ್ತು ನೋಂದಾಯಿಸಿಕೊಳ್ಳಬೇಕು.
  • ನೀವು ನೋಂದಾಯಿಸಿದ ತಕ್ಷಣ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಗಳಿಗೆ ಕಳುಹಿಸಲಾಗುತ್ತದೆ.
  • ಇವುಗಳೊಂದಿಗೆ ನೀವು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಬೇಕು.
  • ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನೀವು ನಮೂದಿಸಬೇಕು.
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೂ ಪಾವತಿಸಬೇಕು.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.
  • ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ಅನ್ನು ತೆಗೆದುಕೊಂಡು ಸುರಕ್ಷಿತವಾಗಿಟ್ಟುಕೊಳ್ಳಬೇಕು

SSC MTS ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -SSC MTS Apply Last Date

  • ಅರ್ಜಿಗಳ ಸ್ವೀಕೃತಿಯ ಪ್ರಾರಂಭ: 27 ಜೂನ್ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2024
  • ಅಪ್ಲಿಕೇಶನ್ ತಿದ್ದುಪಡಿ ವಿಂಡೋ: 2024 ಆಗಸ್ಟ್ 10, 11
  • ಪರೀಕ್ಷೆಯ ದಿನಾಂಕ: 2024 ಅಕ್ಟೋಬರ್ - ನವೆಂಬರ್

ಇದನ್ನು ಓದಿ: ಎಸ್ಎಸ್ಎಲ್ಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ - SSLC EXAM 2 RESULT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.