ಕೊಲಂಬೊ: ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಸಾಲ್ ಪೆರೆರಾ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಮುಂದಿನ ತಿಂಗಳು ದಕ್ಷಿಣ ಅಫ್ರಿಕಾ ವಿರುದ್ಧ ಸೀಮಿತ ಓವರ್ಗಳ ಸರಣಿಗೂ ಮುನ್ನ ಸ್ಟಾರ್ ಬ್ಯಾಟ್ಸ್ಮನ್ಗೆ ತಲೆ ನೋವು ತಂದಿದೆ.
ಕುಸಾಲ್ ಪೆರೆರಾ ಅವರಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿಯನ್ನು ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಮಂಗಳವಾರ 31ನೇ ವಸಂತಕ್ಕೆ ಕಾಲಿಡುತ್ತಿರುವ ಪೆರೆರಾ ಶ್ರೀಲಂಕಾ ತಂಡದ ಏಕದಿನ ತಂಡದ ನಾಯಕನಾಗಿದ್ದರು. ಇದೀಗ ಅವರು ವಿಶ್ವಕಪ್ಗೂ ಮುನ್ನ ನಡೆಯಲಿರುವ ಪ್ರಮುಖ ಟೂರ್ನಿಯಿಂದ ತಂಡದ ಸ್ಟಾರ್ ಆಟಗಾರ ಹೊರಬಿದ್ದಿರುವುದು ತಂಕ್ಕೆ ದೊಡ್ಡ ಹಿನ್ನಡೆಯಾಗಿದೆ.