ನವದೆಹಲಿ: ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತದ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು 10 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಸೋಮವಾರ 232/2 ಸ್ಕೋರ್‌ನೊಂದಿಗೆ ಎರಡನೇ ಇನ್ನಿಂಗ್ಸ್ (ಫಾಲೋ-ಆನ್) ಆರಂಭಿಸಿದ ದಕ್ಷಿಣ ಆಫ್ರಿಕಾ 373 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತಕ್ಕೆ 37 ರನ್‌ಗಳ ಗುರಿಯನ್ನು ನೀಡಿದೆ. ಈ ಗುರಿಯನ್ನು ಟೀಂ ಇಂಡಿಯಾ 9.2 ಓವರ್‌ಗಳಲ್ಲಿ ಪೂರ್ಣಗೊಳಿಸಿತು. ಶಫಾಲಿ ವರ್ಮಾ (24*) ಮತ್ತು ಶುಭಾ ಸತೀಶ್ (13) ರನ್ ಗಳಿಸಿದರು. ಈ ರೋಚಕ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನದ ಮೂರನೇ ಸೆಷನ್‌ನಲ್ಲಿ ಭಾರತ ಗೆಲುವು ದಾಖಲಿಸಿದೆ.
𝙒𝙄𝙉𝙉𝙀𝙍𝙎! 👏👏 🏆
— BCCI Women (@BCCIWomen) July 1, 2024
Scorecard ▶️ https://t.co/4EU1Kp6YTG#TeamIndia | #INDvSA | @IDFCFIRSTBank pic.twitter.com/g3zEjJLzgI
ಶುಭಾ ಸತೀಶ್ ಅವರ ಅಜೇಯ 13 ರನ್ ಮತ್ತು ಶೆಫಾಲಿ ವರ್ಮಾ ಅವರ ಅಜೇಯ 24 ರನ್‌ಗಳ ನೆರವಿನಿಂದ ಭಾರತ 9.2 ಓವರ್‌ಗಳಲ್ಲಿ 10 ವಿಕೆಟ್‌ಗಳು ಉಳಿಸಿಕೊಂಡು ಈ ಗುರಿಯನ್ನು ಸಾಧಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್‌ಗಳ ವಿಷಯದಲ್ಲಿ ಭಾರತಕ್ಕೆ ಅತಿ ದೊಡ್ಡ ಗೆಲುವು ಲಭಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 115.1 ಓವರ್‌ಗಳಲ್ಲಿ 603 ರನ್ ಗಳಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಲ್ಲಿ 266 ರನ್‌ಗಳಿಗೆ ಆಲೌಟ್ ಆಯಿತು.
For her stupendous bowling and getting 🔟 wickets in the match, Sneh Rana wins the Player of the Match award 🏆
— BCCI Women (@BCCIWomen) July 1, 2024
Scorecard ▶️ https://t.co/4EU1Kp7wJe#TeamIndia | #INDvSA | @IDFCFIRSTBank pic.twitter.com/PR8SA6lvtC
ಇದಾದ ಬಳಿಕ ಆಫ್ರಿಕಾ ತಂಡ ಎರಡನೇ ಇನಿಂಗ್ಸ್‌ನಲ್ಲಿ 154.4 ಓವರ್‌ಗಳಲ್ಲಿ 373 ರನ್ ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ನೀಡಿದ 37 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು. ಭಾರತದ ಪರ ಶೆಫಾಲಿ ವರ್ಮಾ 23 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 205 ರನ್ ಗಳಿಸಿದರು. ಆದರೆ, ಸ್ಮೃತಿ ಮಂಧಾನ 27 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 149 ರನ್ ಗಳಿಸಿದರು. ಇದಾದ ನಂತರ ಜೆಮಿಮಾ ರೋಡ್ರಿಗಸ್ 55 ರನ್, ಹರ್ಮನ್ಪ್ರೀತ್ ಕೌರ್ 69 ರನ್ ಮತ್ತು ರಿಚಾ ಘೋಷ್ 85 ರನ್ ಗಳಿಸಿದರು.
Win ✅
— BCCI Women (@BCCIWomen) July 1, 2024
Team Selfie ✅
Capping of the Test with a mandatory team selfie with Jemimah Rodrigues 💙#TeamIndia | #INDvSA | @IDFCFIRSTBank | @JemiRodrigues pic.twitter.com/CC6XGTMAFp
ಭಾರತದ ಪರ ಸ್ನೇಹಾ ರಾಣಾ ಈ ಪಂದ್ಯದಲ್ಲಿ 10 ವಿಕೆಟ್ ಪಡೆದರು. ರಾಣಾ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಭಾರತದ ಈ ಗೆಲುವು ವಿಕೆಟ್‌ಗಳ ದೃಷ್ಟಿಯಿಂದ ಅತಿದೊಡ್ಡ ಗೆಲುವು ತನ್ನದಾಗಿಸಿಕೊಂಡಿದೆ.