ETV Bharat / sports

ಇನ್​ಸ್ಟಾಗ್ರಾಮ್​ನಲ್ಲಿ ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಒಂದೇ ಒಂದು ಪೋಸ್ಟ್​: ಬಾಲಿವುಡ್ ಜೋಡಿಯ ದಾಖಲೆ ಉಡೀಸ್!​ - Virat Kohli Instagram post - VIRAT KOHLI INSTAGRAM POST

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮದಲ್ಲಿಯೂ ದಾಖಲೆ ಸೃಷ್ಟಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಕೊಹ್ಲಿ ಹಂಚಿಕೊಂಡ ಪೋಸ್ಟ್​ ದೇಶದಲ್ಲೇ ಅತೀ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಪೋಸ್ಟ್
ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಪೋಸ್ಟ್ (ETV Bharat)
author img

By ETV Bharat Karnataka Team

Published : Jul 1, 2024, 4:05 PM IST

ಹೈದರಾಬಾದ್: ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ ಪೋಸ್ಟ್​ವೊಂದು ಇದೀಗ ದಾಖಲೆ ಸೃಷ್ಟಿಸಿದೆ. ಹೌದು, ಅದು ಸಹ ಅತೀ ಹೆಚ್ಚು ಲೈಕ್​ಗಳನ್ನು ಪಡೆಯುವ ಮೂಲಕ. ಸದ್ಯ ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಇನ್​ಸ್ಟಾಗ್ರಾಮ್ ಪೋಸ್ಟ್​ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಹಂಚಿಕೊಂಡ ಪೋಸ್ಟ್​ ಪಾತ್ರವಾಗಿದೆ. ಈ ಮೂಲಕ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿದ್ದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ವಿವಾಹದ ಪ್ರಕಟಣೆ ಫೆಬ್ರವರಿ 7, 2023 ರಿಂದ 16.26 ಮಿಲಿಯನ್ ಲೈಕ್‌ಗಳೊಂದಿಗೆ ಅತಿ ಹೆಚ್ಚು ಲೈಕ್ಸ್​ ಪಡೆದ ಪೋಸ್ಟ್​ ಆಗಿ ದಾಖಲೆ ಸೃಷ್ಟಿಸಿತ್ತು. ಸದ್ಯ ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಂಭ್ರಮಿಸುವ ಫೋಟೋವನ್ನು ಒಳಗೊಂಡಂತೆ ವಿರಾಟ್ ಕೊಹ್ಲಿ ಒಟ್ಟು 4 ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಈಗಾಗಲೇ 18 ಮಿಲಿಯನ್​ಗೂ ಅಧಿಕ ಲೈಕ್ಸ್ ಸಿಕ್ಕಿದೆ. ಅಂದರೆ 1 ಕೋಟಿ 89 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಇನ್​ಸ್ಟಾಗ್ರಾಮ್ ಪೋಸ್ಟ್ ಎನಿಸಿಕೊಂಡಿದೆ.

"ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವಿರಲಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ಕೊನೆಗೂ ನಾವು ಗೆದ್ದೆವು, ಜೈ ಹಿಂದ್" ಎಂದು ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಫೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ವಿವಾಹದ ಫೋಟೋಗೆ 13.19 ಮಿಲಿಯನ್ ಲೈಕ್ಸ್​ ಪಡೆದಿದ್ದರು. ಡಿಸೆಂಬರ್ 2021 ರಲ್ಲಿ ವಿವಾಹವಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹದ ಫೋಟೋಗಳಿಗೆ 12.6 ಮಿಲಿಯನ್ ಲೈಕ್ಸ್​ ಪಡೆದಿದ್ದರು.

ಕೊಹ್ಲಿಯ ಪೋಸ್ಟ್​ಗೆ ಲೈಕ್‌ಗಳನ್ನು ಹೆಚ್ಚಿಸುತ್ತಲೇ ಇದ್ದರೂ, ಇದು ಪ್ರಸ್ತುತ ದಾಖಲೆ ಹೊಂದಿರುವ ಲಿಯೋನೆಲ್ ಮೆಸ್ಸಿ ಅವರ 2022ರ ಫಿಫಾ ವಿಶ್ವಕಪ್ ವಿಜಯೋತ್ಸವ ಆಚರಿಸುವ ಪೋಸ್ಟ್‌ಗಿಂತ ಹಿಂದುಳಿದಿದೆ, ಈ ಪೋಸ್ಟ್​ಗೆ ಬರೋಬ್ಬರಿ 75.3 ಮಿಲಿಯನ್​ಗೂ ಹೆಚ್ಚು ಲೈಕ್ಸ್​ ಸಿಕ್ಕಿವೆ.

ಇದನ್ನೂ ಓದಿ: 'ಟೀಂ ಇಂಡಿಯಾ' ಪ್ರಯಾಣಕ್ಕೆ ಚಂಡಮಾರುತ ಅಡ್ಡಿ: ತವರಿಗೆ ಬರುವುದು ವಿಳಂಬ - Indian cricket team

ETV Bharat Logo

Copyright © 2024 Ushodaya Enterprises Pvt. Ltd., All Rights Reserved.