ETV Bharat / sports

ಆರ್‌ಸಿಬಿ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್! ಈ ಬಾರಿ ಹೊಸ ಜವಾಬ್ದಾರಿ - Dinesh Karthik

ಆರ್​ಸಿಬಿಯ ಮಾಜಿ ಆಟಗಾರ ದಿನೇಶ್​ ಕಾರ್ತಿಕ್​ಗೆ ತಂಡ ದೊಡ್ಡ ಹೊಣೆ ನೀಡಿದೆ. ಮುಂದಿನ ಐಪಿಎಲ್​ನಲ್ಲಿ ಅವರು ಆರ್​ಸಿಬಿಯ ಆಟಗಾರನ ಬದಲಿಗೆ ಕೋಚ್​ ಆಗಿ ಕೆಲಸ ನಿರ್ವಹಣೆ ಮಾಡಲಿದ್ದಾರೆ.

ಆರ್​​ಸಿಬಿ ತಂಡ ಕೋಚ್​ ಆಗಿ ದಿನೇಶ್​ ಕಾರ್ತಿಕ್​ ನೇಮಕ
ದಿನೇಶ್​ ಕಾರ್ತಿಕ್ (X handle)
author img

By ETV Bharat Karnataka Team

Published : Jul 1, 2024, 12:55 PM IST

ಬೆಂಗಳೂರು: ಐಪಿಎಲ್​ ಟೂರ್ನಿಯ ಫ್ರಾಂಚೈಸಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ನೂತನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ನೇಮಕ ಮಾಡಲಾಗಿದೆ. ಫ್ರಾಂಚೈಸಿ ಕ್ರಿಕೆಟ್​ನಿಂದ ವಿದಾಯ ಹೇಳಿದ ಬೆನ್ನಲ್ಲೇ ಅವರಿಗೆ ಮಹತ್ತರ ಹೊಣೆ ನೀಡಲಾಗಿದೆ.

ಬೆಂಗಳೂರು ಪರವಾಗಿ 2015ರ ಸೀಸನ್​ ಆಡಿದ್ದ ಕಾರ್ತಿಕ್​ ಬಳಿಕ ಕೋಲ್ಕತ್ತಾಗೆ ಮರಳಿದ್ದರು. ನಂತರ 2022ರಲ್ಲಿ ಮತ್ತೊಮ್ಮೆ ಬೆಂಗಳೂರು ತಂಡ ಸೇರಿ, 2024ರಲ್ಲಿ ಫ್ರಾಂಚೈಸಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಹಿರಿಯ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗಿದ್ದ ಕಾರ್ತಿಕ್​​ರ ಅನುಭವ ಮತ್ತು ಸೇವೆಯನ್ನು ಬಳಸಿಕೊಳ್ಳಲು ಆರ್​ಸಿಬಿ ತಂಡ ಅವರಿಗೆ ಕೋಚ್​ ಹುದ್ದೆ ನೀಡಿದೆ.

ಕಾರ್ತಿಕ್​​ ತಂಡದ ಆಸ್ತಿ: ಕಾರ್ತಿಕ್ ಅವರ ನೇಮಕದ ಬಗ್ಗೆ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ನಿರ್ದೇಶಕ ಮೊ.ಬೊಬಾಟ್, "ನಮ್ಮ ಕೋಚಿಂಗ್ ಗುಂಪಿಗೆ ಡಿಕೆ ಅತ್ಯುತ್ತಮ ಸೇರ್ಪಡೆ. ಮೈದಾನದಲ್ಲಿ ಅವರ ಆಟ ವೀಕ್ಷಿಸಲು ಎಷ್ಟು ರೋಮಾಂಚನವೋ, ಕೋಚ್ ಆಗಿಯೂ ಸಹ ಅಷ್ಟೇ ಪ್ರಭಾವ ಬೀರಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆಟಗಾರನಾಗಿ ಅವರ ದೀರ್ಘ ಜೀವನ ಮತ್ತು ದಾಖಲೆಗಳು ಅವರ ಕೌಶಲ್ಯದ ಕುರಿತು ಹೇಳುತ್ತವೆ" ಎಂದರು.

"ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ ಡಿಕೆ ಅವರ ಅನುಭವಗಳು, ಅವರನ್ನ ಆರ್‌ಸಿಬಿಗೆ ದೊಡ್ಡ ಆಸ್ತಿಯನ್ನಾಗಿ ಮಾಡಲಿವೆ. ಅವರ ಬೆಂಬಲದಿಂದ ನಮ್ಮ ಆಟಗಾರರು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ" ಎಂದು ಬೊಬಾಟ್ ಮತ್ತಷ್ಟು ಹೇಳಿದರು.

ಹೊಸ ಸವಾಲಿಗೆ ಉತ್ಸುಕ: ನೇಮಕದ ಕುರಿತು ಪ್ರತಿಕ್ರಿಯಿಸಿರುವ ದಿನೇಶ್ ಕಾರ್ತಿಕ್, "ಕೋಚ್​​ ವೃತ್ತಿಜೀವನ ನನಗೆ ಹೊಸ ಅಧ್ಯಾಯವಾಗಿದೆ. ಹೊಣೆ ನಿಭಾಯಿಸಲು ಉತ್ಸುಕನಾಗಿದ್ದೇನೆ. ಕ್ರಿಕೆಟ್ ಯಶಸ್ಸು ಕೇವಲ ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಮಾತ್ರವಲ್ಲದೆ, ಪಂದ್ಯದಲ್ಲಿ ಬುದ್ಧಿವಂತಿಕೆ ಮತ್ತು ಹಿಡಿತದ ಮೇಲೆಯೂ ಅವಲಂಬಿತವಾಗಿರುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ಬ್ಯಾಟಿಂಗ್ ಪಡೆಗೆ ತರಬೇತಿ ನೀಡಲು ಮತ್ತು ಮಾರ್ಗದರ್ಶನ ನೀಡಲು ನಾನು ಉತ್ಸುಕನಾಗಿದ್ದೇನೆ. ಒತ್ತಡದಲ್ಲಿ ಮಿಂಚಲು ಅಗತ್ಯ, ಪಂದ್ಯದ ಅರಿವನ್ನು ಅಭಿವೃದ್ಧಿಪಡಿಸಲು ಆಟಗಾರರಿಗೆ ಸಹಾಯ ಮಾಡುತ್ತೇನೆ" ಎಂದರು.

2004ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಭಾರತದ ಪರ ಪಾದಾರ್ಪಣೆಗೈದಿದ್ದ ದಿನೇಶ್ ಕಾರ್ತಿಕ್, 26 ಟೆಸ್ಟ್, 94 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 60 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 257 ಐಪಿಎಲ್ ಪಂದ್ಯಗಳಲ್ಲಿ 22 ಅರ್ಧಶತಕಗಳನ್ನ ಒಳಗೊಂಡಂತೆ ಒಟ್ಟು 4842 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಎತ್ತಿ ಹಿಡಿದ ಬಳಿಕ ಪಿಚ್​​ ಮೇಲಿನ ಮಣ್ಣು ತಿಂದು 'ಗೆಲುವಿನ ರುಚಿ' ಸವಿದ ರೋಹಿತ್​ ಶರ್ಮಾ - Rohit Sharma

ETV Bharat Logo

Copyright © 2024 Ushodaya Enterprises Pvt. Ltd., All Rights Reserved.