ಕರ್ನಾಟಕ

karnataka

ಡೆಲ್ಲಿ ವಿರುದ್ಧ ನಿಧಾನಗತಿ ಬೌಲಿಂಗ್: ರೋಹಿತ್‌ ಶರ್ಮಾಗೆ ₹ 12 ಲಕ್ಷ ದಂಡ

By

Published : Apr 21, 2021, 10:40 AM IST

ಇದೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂ.ಎಸ್.ಧೋನಿಗೂ ಸ್ಲೋ ಓವರ್‌ರೇಟ್‌ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ತಂಡದ​ ನಾಯಕ ರೋಹಿತ್‌ ಶರ್ಮಾಗೆ​ ಸೋಲಿನ ಆಘಾತದ ಬೆನ್ನಲ್ಲೇ 12 ಲಕ್ಷ ರೂ. ದಂಡದ ಬರೆಯೂ ಬಿದ್ದಿದೆ.

ಈ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಶರ್ಮಾಗೆ ದಂಡ ವಿಧಿಸಲಾಗಿದೆ. ಇದೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂ.ಎಸ್.ಧೋನಿಗೂ ಸ್ಲೋ ಓವರ್‌ರೇಟ್‌ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಐಪಿಎಲ್, ಐಸಿಸಿ‌ ನಿಯಮ ಏನು ಹೇಳುತ್ತೆ?

ಐಪಿಎಲ್‌ ನಿಯಮದ ಪ್ರಕಾರ, 90 ನಿಮಿಷಗಳ ಒಳಗಾಗಿ ಇನ್ನಿಂಗ್ಸ್‌ ಮುಗಿಸಬೇಕು. ಈ ಕಾಲಾವಧಿ ಮೀರಿದರೆ ಫೀಲ್ಡಿಂಗ್ ತಂಡಕ್ಕೆ ದಂಡ ತೆರಬೇಕಾಗುತ್ತದೆ. ಐಸಿಸಿ ನಿಯಮದ ಪ್ರಕಾರ, ಟೆಸ್ಟ್‌ ಕ್ರಿಕೆಟ್‌ನಲ್ಲಾದರೆ ಫೀಲ್ಡಿಂಗ್ ಮಾಡುವ ತಂಡ ಗಂಟೆಗೆ 15ರಂತೆ ಓವರ್‌ ಮುಗಿಸಿರಬೇಕು. ಅದೇ ಏಕದಿನದಲ್ಲಾದರೆ ಗಂಟೆಗೆ 14.2 ಓವರ್‌, ಟಿ-20 ಕ್ರಿಕೆಟ್​​ನಲ್ಲಿ ಗಂಟೆಗೆ 14.1 ಓವರ್‌ ಮುಗಿಸಿರಬೇಕು.

ಇದನ್ನೂ ಓದಿ: ಮುಂಬೈ ವಿರುದ್ಧದ ಗೆಲುವಿಗೆ ಬೌಲರ್​ಗಳು ಕಾರಣ: ರಿಷಭ್​ ಪಂತ್​

ABOUT THE AUTHOR

...view details