ಕರ್ನಾಟಕ

karnataka

IPL 2023: 2.8 ಕೋಟಿ ರೂಪಾಯಿಗೆ ಜೇಸನ್ ರಾಯ್ ಖರೀದಿಸಿದ ಕೆಕೆಆರ್

By

Published : Apr 5, 2023, 3:36 PM IST

ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡಗಳು ಗಾಯಾಳುಗಳ ಬದಲಿಗೆ ಹೊಸ ಪ್ಲೇಯರ್​ಗಳನ್ನು ಸೇರಿಸಿಕೊಂಡಿವೆ.

Jasen Roy replaces Shreyas Iyer and Shakib Al Hasan for KKR
ಅಯ್ಯರ್​, ಶಕೀಬ್​ ಬದಲಿಗೆ ಜೇಸನ್ ರಾಯ್ ಕೆಕೆಆರ್​ಗೆ, ಪಂಜಾಬ್​ ಸೇರಿದ ಗುರ್ನೂರ್ ಸಿಂಗ್

ಕೋಲ್ಕತ್ತಾ ನೈಟ್​​ ರೈಡರ್ಸ್​ ನಾಯಕ ಶ್ರೇಯಸ್ ಅಯ್ಯರ್ ಪ್ರಸಕ್ತ ಸಾಲಿನ ಐಪಿಎಲ್​ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದು, ಅವರ ಬದಲಿಗೆ ಇಂಗ್ಲೆಂಡ್‌ನ ಜೇಸನ್ ರಾಯ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಬಾಂಗ್ಲಾದೇಶದ ಆಲ್​ರೌಂಡ್​ ಕ್ರಿಕೆಟರ್​ ಶಕಿಬ್ ಅಲ್ ಹಸನ್ ಕೂಡಾ ಈ ಬಾರಿ ತಂಡದಲ್ಲಿ ಆಡುತ್ತಿಲ್ಲ. ಜೇಸನ್ ರಾಯ್ ಅವರನ್ನು ₹2.8 ಕೋಟಿ ಕೊಟ್ಟು ಕೆಕೆಆರ್​ ಖರೀದಿಸಿದೆ. ರಾಯ್​ ಅವರ ಮೂಲ ಬೆಲೆ ₹ 1.5 ಕೋಟಿಯಾಗಿತ್ತು.

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಅಯ್ಯರ್​ಗೆ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್​ಗೆ ತೆರಳುತ್ತಿದ್ದಾರೆ. ಮುಂದಿನ ಐದು ತಿಂಗಳು ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. ಹಾಗೆಯೇ ಶಕಿಬ್ ಅಲ್ ಹಸನ್ ಕೂಡ ಈ ಆವೃತ್ತಿಯಲ್ಲಿ ಕೆಕೆಆರ್​ ಪರ ಕಣಕ್ಕಿಳಿಯುತ್ತಿಲ್ಲ.

ಜೇಸನ್ ರಾಯ್ 2017 ಮತ್ತು 2018ರ ಐಪಿಎಲ್ ಸೀಸನ್‌ಗಳಲ್ಲಿ ಆಡಿದ್ದಾರೆ. 2021ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಕೊನೆಯ ಬಾರಿ ಕಣಕ್ಕಿಳಿದಿದ್ದರು. 2021 ರಲ್ಲಿ ಐದು ಪಂದ್ಯಗಳನ್ನಾಡಿ ಒಂದು ಅರ್ಧ ಶತಕ ಸೇರಿದಂತೆ 150 ರನ್ ಗಳಿಸಿದ್ದರು. 64 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 137.61 ರ ಸ್ಟ್ರೈಕ್​ ರೇಟ್​ನಿಂದ 8 ಅರ್ಧಶತಕ ಸೇರಿ 1,522 ರನ್​ ಗಳಿಸಿದ್ದಾರೆ.

ಪಂಜಾಬ್ ತಂಡದಲ್ಲಿ ಬದಲಾವಣೆ:ಪಂಜಾಬ್​ ಕಿಂಗ್ಸ್​ನಲ್ಲಿಗಾಯಾಳು ರಾಜ್ ಅಂಗದ್ ಬಾವಾ ಬದಲು ಗುರ್ನೂರ್ ಸಿಂಗ್ ಬ್ರಾರ್ ಅವರನ್ನು ಸೇರಿಸಿಕೊಂಡಿದೆ. 22 ವರ್ಷದ ಆಲ್‌ರೌಂಡರ್ ಗುರ್ನೂರ್ ಸಿಂಗ್ ಬ್ರಾರ್‌ರನ್ನು ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಲಾಗಿತ್ತು. ಎಡಗೈ ಬ್ಯಾಟಿಂಗ್ ಆಲ್‌ರೌಂಡರ್ ಗುರ್ನೂರ್ ಡಿಸೆಂಬರ್ 2022 ರಲ್ಲಿ ಪಂಜಾಬ್‌ಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 5 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 120.22 ಸ್ಟ್ರೈಕ್ ರೇಟ್‌ನಲ್ಲಿ 107 ರನ್ ಗಳಿಸಿದ್ದಾರೆ. 3.80 ರ ಎಕಾನಮಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಗೆದ್ದವರ ಮಧ್ಯೆ ಗುದ್ದಾಟ: ಇಂದು ಗುವಾಹಟಿಯಲ್ಲಿ ರಾಜಸ್ಥಾನಕ್ಕೆ ಪಂಜಾಬ್​ ಕಿಂಗ್ಸ್​ ಸವಾಲು

ABOUT THE AUTHOR

...view details