ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲೀಡ್ರೋಲ್ನಲ್ಲಿ ನಟಿಸುತ್ತಿರುವ ಸಿನಿಮಾ ಪೊಗರು. ಈ ಚಿತ್ರ ಸದ್ಯ ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದು, ಇತ್ತೀಚೆಗಷ್ಟೇ ಟ್ರೇಲರ್ ರಿಲೀಸ್ ಮಾಡಿ ಸಿನಿ ಪ್ರಿಯರಿಗೆ ರಸದೌತಣ ನೀಡಿತ್ತು.
ಟ್ರೇಲರ್ನಲ್ಲಿ ಬರುವ ಕನ್ನಡ ಅಭಿಮಾನದ ಧ್ರುವ ಸರ್ಜಾರ ಡೈಲಾಗ್ ಸಖತ್ ಟ್ರೋಲ್ ಆಗಿ ಎಲ್ಲೆಲ್ಲೂ ವೈರಲ್ ಆಗಿದ್ದೂ ನಿಜ. ಈ ಸಿನಿಮಾದ ಕ್ಲೈಮಾಕ್ಸ್ ಫೈಟಿಂಗ್ನಲ್ಲಿ ಕಾಣಿಸಿಕೊಳ್ಳುವ ಅಮೆರಿಕದ ಬಾಡಿ ಬಿಲ್ಡರ್ ಕಾಯ್ ಗ್ರೀನ್ ದೀಪಾವಳಿ ಮತ್ತು ಪೊಗರು ಚಿತ್ರಕ್ಕೆ ವಿಶ್ ಮಾಡಿದ್ದಾರೆ.