ETV Bharat / international

ಸೇನಾ ಕಮಾಂಡರ್​ ಹತ್ಯೆ: ಇಸ್ರೇಲ್​ ಮೇಲೆ ಪ್ರತೀಕಾರದ ದಾಳಿಗೆ ಇರಾನ್​ ಘೋಷಣೆ - Iran warn Israel

ಸೇನಾ ಕಮಾಂಡರ್​ಗಳನ್ನು ಹತ್ಯೆ ಮಾಡಿದ ಬಳಿಕ ಇರಾನ್​ ಮತ್ತು ಪ್ಯಾಲೆಸ್ಟೈನ್​​ ಇಸ್ರೇಲ್​ ಮೇಲೆ ಉರಿದುಬಿದ್ದಿವೆ. ಇದರಿಂದ ತಾವೂ ಪ್ರತಿದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿವೆ.

ಇಸ್ರೇಲ್​ ಮೇಲೆ ಪ್ರತೀಕಾರದ ದಾಳಿಗೆ ಇರಾನ್​ ಘೋಷಣೆ
ಇಸ್ರೇಲ್​ ಮೇಲೆ ಪ್ರತೀಕಾರದ ದಾಳಿಗೆ ಇರಾನ್​ ಘೋಷಣೆ (ETV Bharat)
author img

By ETV Bharat Karnataka Team

Published : Aug 3, 2024, 10:55 PM IST

ಟೆಹ್ರಾನ್ (ಇರಾನ್): ಹಿಜ್ಬುಲ್ಲಾ ಮತ್ತು ಹಮಾಸ್​ ಕಮಾಂಡರ್​​ಗಳಿಬ್ಬರನ್ನು ಇಸ್ರೇಲ್​ ಸೇನೆ ಸದೆಬಡಿದಿದೆ. ಇದರ ಬೆನ್ನಲ್ಲೇ ಎರಡೂ ರಾಷ್ಟ್ರಗಳು ಇಸ್ರೇಲ್​ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿವೆ. ಇಸ್ರೇಲ್​ ಗಡಿಭಾಗದಲ್ಲಿ ಮಾತ್ರವಲ್ಲ, ಇನ್ನು ಮುಂದೆ ಒಳನುಗ್ಗಿ ದಾಳಿ ನಡೆಸುತ್ತೇವೆ ಎಂದು ಹಿಜ್ಬುಲ್ಲಾ ಪಡೆ ಶನಿವಾರ ಹೇಳಿದೆ.

ತಮ್ಮ ಕಮಾಂಡರ್​​ ಅನ್ನು ಇಸ್ರೇಲ್​ ಸೇನೆ ದಾಳಿ ಮಾಡಿ ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಲೆಬನಾನ್‌ನ ಟೆಹ್ರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಇಸ್ರೇಲ್‌ನ ಒಳಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ. ಇನ್ನು ಮುಂದೆ ಇದು ಕೇವಲ ಮಿಲಿಟರಿ ಗುರಿಗಳಿಗೆ ಸೀಮಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಕೆ ರವಾನಿಸಿದೆ.

ಗಾಜಾದ ಮೇಲೆ ಇಸ್ರೇಲ್​​ ಯುದ್ಧ ಸಾರಿದ ಬಳಿಕ ಪ್ಯಾಲೆಸ್ಟೈನ್​​ ಬೆಂಬಲಿತ ಹಿಜ್ಬುಲ್ಲಾ ಗುಂಪು, ಇಸ್ರೇಲ್​​ ಸೇನೆ ಜೊತೆಗೆ ಪ್ರತಿದಿನ ಗಡಿಯಲ್ಲಿ ಗುಂಡಿನ ವಿನಿಮಯ ನಡೆಸುತ್ತಿದೆ. ಗಡಿ ಬಳಿಕ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ. ಇದಕ್ಕೆ ಇಸ್ರೇಲ್​ ಪ್ರತಿದಾಳಿ ಕೂಡ ನಡೆಸುತ್ತಿದೆ. ಈ ವೇಳೆ ಇತ್ತೀಚೆಗೆ ಹಿಜ್ಬುಲ್ಲಾ ಗುಂಪಿನ ಕಮಾಂಡರ್​ ಸಾವಿಗೀಡಾಗಿದ್ದಾನೆ. ಇದು ಇರಾನ್​ ಅನ್ನು ಕೆರಳಿಸಿದೆ.

ದಕ್ಷಿಣ ಬೈರುತ್‌ನ ಜನನಿಬಿಡ ವಸತಿ ಪ್ರದೇಶದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಹಿಜ್ಬುಲ್ಲಾ ಕಮಾಂಡರ್​​ ಜೊತೆಗೆ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿ ಐವರು ನಾಗರಿಕರು ಸಾವಿಗೀಡಾಗಿದ್ದಾರೆ. ಜೊತೆಗೆ ರಾಕೆಟ್​ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್​ ಫೌದ್ ಶುಕ್ರ್ ಸೇರಿ 12 ಯುವಕರು ಹತರಾಗಿದ್ದಾರೆ. ಈ ಮೂಲಕ ಇಸ್ರೇಲ್​ ನಿಯಮಗಳನ್ನು ಮೀರಿದೆ. ಇದಕ್ಕೆ ಪ್ರತೀಕಾರದ ದಾಳಿ ನಡೆಸಲಾಗುವುದು ಎಂದು ಇರಾನ್​ ವಿಶ್ವಸಂಸ್ಥೆಗೂ ಮಾಹಿತಿ ನೀಡಿದೆ.

ಹಿಜ್ಬುಲ್ಲಾ ಕಮಾಂಡರ್​​ ಹತ್ಯೆಯ ಕೆಲವೇ ಗಂಟೆಗಳ ನಂತರ, ಹಮಾಸ್‌ನ ಪಡೆಯ ಪ್ರಮುಖ ನಾಯಕ ಇಸ್ಮಾಯಿಲ್ ಹನಿಯೆಹ್ ಟೆಹ್ರಾನ್‌ನಲ್ಲಿನ ವಸತಿಗೃಹದಲ್ಲಿ ಇಸ್ರೇಲ್​ ರಾಕೆಟ್​ ದಾಳಿಗೆ ಸಾವಿಗೀಡಾಗಿದ್ದ.

ಇದನ್ನೂ ಓದಿ: ಲೆಬನಾನ್​ನಿಂದ ಡಜನ್​ಗಟ್ಟಲೆ ರಾಕೆಟ್‌ ದಾಳಿ: ರಾಕೆಟ್ ಲಾಂಚರ್​ ಹೊಡೆದುರುಳಿಸಿದ ಇಸ್ರೇಲ್​ - Dozens of rockets attacked Israel

ETV Bharat Logo

Copyright © 2024 Ushodaya Enterprises Pvt. Ltd., All Rights Reserved.