ಕರ್ನಾಟಕ

karnataka

ಜನರ ಮುಂದೆ ಅಹಂ ತೋರಿಸಬೇಡಿ,ನೂತನ ಸಂಸದರಿಗೆ ಮೋದಿ ಪಾಠ

By

Published : May 25, 2019, 6:17 PM IST

Updated : May 25, 2019, 8:14 PM IST

ಸಂಸತ್ತಿನ ಸೆಂಟ್ರಲ್​ ಹಾಲ್​ನಲ್ಲಿ ನಡೆದ ಸಭೆಯಲ್ಲಿ ನರೇಂದ್ರ ಮೋದಿ ಎನ್‌ಡಿಎ ಸಂಸದೀಯ ಮಂಡಳಿಯ ನಾಯಕರಾಗಿ ಆಯ್ಕೆಯಾದರು. ಈ ವೇಳೆ ಮೋದಿ ನೂತನ ನಿಯೋಜಿತ ಸಂಸದರನ್ನುದ್ದೇಶಿಸಿ ಸು ಧೀರ್ಘವಾಗಿ ಮಾತನಾಡಿದರು.

ಸಂಸದೀಯ ಸಭೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಪಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸಂಸದರ ಮೊದಲ ಸಭೆ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯಿತು.

ಮೋದಿ ಸಂಸದೀಯ ಸಭೆ

ಸಂಸತ್ತಿನ ಸೆಂಟ್ರಲ್​ ಹಾಲ್​ನಲ್ಲಿ ನಡೆದ ಸಭೆಯಲ್ಲಿ ನೂತನ ಸಂಸದರು, ನರೇಂದ್ರ ಮೋದಿ ಅವರನ್ನು ಎನ್‌ಡಿಎ ಮೈತ್ರಿಕೂಟದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡಿದರು. ಎನ್​ಡಿಎ ಮೈತ್ರಿಕೂಟದ ನಾಯಕರು ಇದಕ್ಕೆ ಬೆಂಬಲ ಸೂಚಿಸಿದರು. ನಿತಿನ್‌ ಗಡ್ಕರಿ, ರಾಜನಾಥ್​ ಸಿಂಗ್ ಮೋದಿ ಹೆಸರು ಪ್ರಸ್ತಾಪಿಸಿದರು.

ಸಂಸದೀಯ ನಾಯಕನಾಗಿ ಮೋದಿ ಪುನರಾಯ್ಕೆ

ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 353 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ನಿನ್ನೆ 16ನೇ ಲೋಕಸಭೆಯ ಕೊನೆೇಯ ಸಂಪುಟ ಸಭೆ ನಂತರ ಮೋದಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದರು. ಜೊತೆಗೆ 17ನೇ ಲೋಕಸಭೆ ರಚನೆ ಮಾಡಲು ಅವಕಾಶ ಕೇಳಿದ್ದರು.

ಸಂಸದರ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್​ಕೆ ಅಡ್ವಾಣಿ, ಮುರಳಿ ಮನೋಹರ್​ ಜೋಶಿ ಸೇರಿದಂತೆ ನಿತೀಶ್​ ಕುಮಾರ್​,ಸುಷ್ಮಾ ಸ್ವರಾಜ್​,ಉದ್ಧವ್​ ಠಾಕ್ರೆ,ರಾಮ್​ವಿಲಾಸ್​ ಪಾಸ್ವಾನ್​,ರಾಜನಾಥ್​ ಸಿಂಗ್​,ಸ್ಮೃತಿ ಇರಾನಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಪ್ರಕಾಶ್​ ಸಿಂಗ್​ ಬಾದಲ್​ ಸೇರಿದಂತೆ ಅನೇಕ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ಮೋದಿ ಭಾಷಣ

ಮೈತ್ರಿಕೂಟದ ಎಲ್ಲ ಸಂಸದರಿಂದ ಮೋದಿಗೆ ಅಭಿನಂದನೆ ಸಲ್ಲಿಸಲಾಗಿದ್ದು, ಇದೇ ವೇಳೆ ಮೋದಿ ಪಕ್ಷದ ಹಿರಿಯ ಮುಖಂಡರಾದ ಎಲ್​ಕೆ ಅಡ್ವಾಣಿ,ಮುರುಳಿ ಮನೋಹರ್​ ಜೋಶಿ ಕಾಲಿಗೆ ನಮಸ್ಕರಿಸಿದರು.

ಎನ್​ಡಿಎ ಸಂಸದೀಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ಸರ್ವಾನುಮತದಿಂದ ಮೋದಿ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಮೋದಿ ಆಯ್ಕೆ ಅನುಮೋದಿಸಿದ್ದಕ್ಕೆ ಧನ್ಯವಾದಗಳು. ಎನ್​ಡಿಎ ಮೈತ್ರಿಕೂಟದ ಎಲ್ಲ ಮುಖಂಡರಿಗೆ ಅಭಿನಂದನೆಗಳು ಎಂದು ಅಮಿತ್​ ಶಾ ಹೇಳಿದರು. ಮೋದಿ ಸುನಾಮಿಗೆ ಎಲ್ಲರೂ ಧೂಳಿಪಟವಾಗಿದ್ದಾರೆಂದು ಹೇಳಿದರು.

ಸಂಸತ್ ಭವನದಲ್ಲಿ ಮೋದಿ ಮಾತು

ಸಂಸದರನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ನರೇಂದ್ರ ಮೋದಿ ಸಂವಿಧಾನಕ್ಕೆ ನಮಸ್ಕರಿಸಿದರು. ಇದಾದ ಬಳಿಕ ಮಾತನಾಡಿದ ಅವರು, ಮೈತ್ರಿಕೂಟದ ಎಲ್ಲ ಮುಖಂಡರಿಗೆ ಧನ್ಯವಾದಗಳು.ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದೀರಿ.ಇಂದಿನಿಂದ ನಮ್ಮ ಹೊಸ ಯುಗ ಆರಂಭಗೊಳ್ಳಲಿದೆ. ನವಭಾರತದ ಹೊಸ ಸಂಕಲ್ಪವನ್ನ ಆರಂಭಿಸಬೇಕಾಗಿದ್ದು, ಅದಕ್ಕಾಗಿ ಇಂದಿನಿಂದ ಹೊಸ ಯುಗ ಆರಂಭಗೊಳ್ಳಲಿದೆ ಎಂದರು.

ನೀವೆಲ್ಲರೂ ಈ ಬದಲಾವಣೆಯಲ್ಲಿ ಭಾಗಿಯಾಗಲಿದ್ದೀರಿ.ದಿನದಿಂದ ದಿನಕ್ಕೆ ಭಾರತದ ಲೋಕತಂತ್ರ ಬದಲಾಗುತ್ತಾ ಸಾಗಿದೆ. ದೇಶದ ರಾಜಕೀಯದಲ್ಲಿ ಬದಲಾವಣೆ ಬಂದಿದೆ. ಮೊದಲ ಬಾರಿ ಆಯ್ಕೆಯಾಗಿ ಬಂದವರಿಗೆ ಅಭಿನಂದನೆಗಳು.

ಜನತಾ ಜನಾರ್ಧನ ಈಶ್ವರನ ರೂಪ

ನಾವು ಜನರ ಸೇವೆ ಮಾಡುತ್ತಿರುವುದಕ್ಕೆ ಅವರು ನಮ್ಮನ್ನ ಆಯ್ಕೆ ಮಾಡಿದ್ದಾರೆ. ಪ್ರಚಂಡ ಜನಾದೇಶ ನಮ್ಮ ಜವಾಬ್ದಾರಿಗಳನ್ನ ಹೆಚ್ಚಿಸಿದೆ. ಜವಾಬ್ದಾರಿ ಸ್ವೀಕರಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ ಎಂದರು.

2019ರ ಚುನಾವಣೆ ಎಲ್ಲ ಮನಸ್ಸುಗಳನ್ನ ಒಂದು ಮಾಡಿದೆ. ದೇಶವನ್ನ ಬಲಿಷ್ಠಗೊಳಿಸಲು ನಾವು ಮಾಡಿರುವ ಯೋಜನೆಗೆ ಫಲವಾಗಿ ಇಂದು 130 ಕೋಟಿ ಜನರು ನಮ್ಮೊಂದಿಗಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಅಗಬೇಕೆಂದು ನಮಗೆ ವೋಟ್​ ಹಾಕಿದ್ದಾರೆ.

ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ನಡೆಯಬೇಕಾಗಿದ್ದು, ಹೊಸ ಜವಾಬ್ದಾರಿ ನಿಭಾಯಿಸಲು ಸಿದ್ಧರಾಗಿದ್ದೇವೆ. ಜನರು ಈ ಚುನಾವಣೆಯಲ್ಲಿ ಸಕಾರಾತ್ಮವಾಗಿ ಮತದಾನ ಮಾಡಿದ್ದಾರೆ. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಘೋಷ ವಾಕ್ಯವನ್ನ ಎಲ್ಲರೂ ಒಪ್ಪಿಕೊಂಡಿದ್ದಾರೆ. ದೇಶಕ್ಕೆ ಸ್ವತಂತ್ರ ಸಿಕ್ಕ ಬಳಿಕ ಇದೇ ಮೊದಲ ಸಲ ಇಷ್ಟೊಂದು ಮತದಾನವಾಗಿದೆ.

ಸ್ವತಂತ್ರ ಭಾರತದ ನಂತರ ಅತೀ ಹೆಚ್ಚು ಮತದಾನ

ಚುನಾವಣೆಯಲ್ಲಿ ಇಷ್ಟೊಂದು ಮತದಾನವಾಗಿರುವುದಕ್ಕೆ ವಿದೇಶದ ಎಲ್ಲ ಮುಖಂಡರು ಫೋನ್​ ಮಾಡಿ ಕೇಳ್ತಾರೆ. ಇದು ಹೇಗೆ ಸಾಧ್ಯ ಎಂದು. ನಾನು ವೋಟ್​ ಕೇಳಲು ಹೋಗ್ತಿರಲಿಲ್ಲ. ಬದಲಿಗೆ ಧನ್ಯವಾದ ಅರ್ಪಣೆ ಮಾಡಲು ತೆರಳುತ್ತಿದೆ. ಈ ಸಲದ ಚುನಾವಣೆಯಲ್ಲಿ ಮಹಿಳೆಯರು ಅತಿ ಹೆಚ್ಚು ಮತದಾನ ಮಾಡಿದ್ದಾರೆ.

17 ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು ಮತದಾನವಾಗಿದೆ. ನಾನು ಈ ಹಿಂದೆ ಅನೇಕ ಚುನಾವಣೆ ನೋಡಿದ್ದೇನೆ. ಆದರೆ ಈ ಸಲದ ಚುನಾವಣೆ ವಿಶೇಷವಾಗಿತ್ತು. ಹಿಂದಿನ ಚುನಾವಣೆಗಳಲ್ಲಿ ಮಹಿಳೆಯರ ಮತದಾನ ಕಡಿಮೆಯಾಗುತ್ತಿತ್ತು. ಈ ಸಲ ದಾಖಲೆಯ ವೋಟಿಂಗ್​ ಆಗಿದೆ. ನನಗೆ ದೇಶದಲ್ಲಿ ಮಾತೃಶಕ್ತಿ ಸಿಕ್ಕಿದೆ.

ಅಡ್ವಾಣಿ, ವಾಜಪೇಯಿ, ಜೋಶಿ ಹೊಗಳಿದ ಮೋದಿ

ಅಡ್ವಾಣಿಜೀ ಪಕ್ಷವನ್ನ ಸುಭದ್ರವಾಗಿ ಮುನ್ನಡೆಸಿದ್ದಾರೆ. ಭಾರತದ ಏಕತೆ, ಅಖಂಡತೆಯಲ್ಲಿ ಅವರು ನಂಬಿಕೆಯಿಟ್ಟಿದ್ದರು. ಎನ್​ಡಿಎ ವಿಶೇಷತೆ ಏನು ಎಂಬುದನ್ನ ರಾಜಕೀಯ ತಜ್ಞರು ಅರಿತುಕೊಳ್ಳಬೇಕು. ಅಡ್ವಾಣಿ, ವಾಜಪೇಯಿ ಹಾಗೂ ಜೋಶಿ ಅವರ ಕಾಲದಲ್ಲಿದ್ದ ವಿಶ್ವಾಸವನ್ನ ನಾವು ಉಳಿಸಿಕೊಂಡು ಬಂದಿದ್ದೇವೆ. ಎನ್​ಡಿಎ ಅಂದರೆ ಎನರ್ಜಿ ಹಾಗೂ ಒಗ್ಗಟ್ಟು ಅದನ್ನ ನಾವು ಮುಂದುವರೆಸಿದ್ದೇವೆ.

ಹೇಳಿಕೆ ನೀಡುವ ಮುನ್ನ ಎಚ್ಚರಿಕೆ

ಹೊಸದಾಗಿ ಆಯ್ಕೆಯಾಗಿ ಸಂಸತ್​ಗೆ ಆಗಮಿಸಿರುವ ಸಂಸದರಿಗೆ ಮೋದಿ ಇದೇ ವೇಳೆ ಎಚ್ಚರಿಕೆ ಪಾಠ ಬೋಧಿಸಿದರು. ಹೇಳಿಕೆ ನೀಡುವ ಮುನ್ನ ಎಚ್ಚರಿಕೆಯಿಂದ ಮಾತನಾಡಿ. ಜನತಾ ಜನಾರ್ಧನ ಅವರ ನೀಡಿರುವ ಭಿಕ್ಷೆಯಿಂದ ನಾವು ಇಂದು ಇಲ್ಲಿದ್ದೇವೆ. ಅವರ ಪರವಾದ ಕೆಲಸ ಮಾಡುಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ಕೆಲವೊಮ್ಮೆ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ನಮಗೆ ಅತಿದೊಡ್ಡ ಜವಾಬ್ದಾರಿ ಇರುತ್ತದೆ. ಜನಪರ ಕೆಲಸ ಮಾಡಿ ಎನ್​ಡಿಎ ಮೈತ್ರಿಕೂಟ ಮುನ್ನಡೆಸಿಕೊಂಡು ಹೋಗಿ ಎಂದು ಕಿವಿಮಾತು ಹೇಳಿದರು.

ಯಾವತ್ತೂ ಅಹಂಕಾರ ಬರಬಾರದು

ದೇಶದ ಜನರ ಕಾರಣದಿಂದ ನಾವು ಇಲ್ಲಿದ್ದೇವೆ. ಎಷ್ಟೇ ಬೆಳೆದರೂ ನಮ್ಮ ಬೇರುಗಳನ್ನ ಕೈಬಿಡಬಾರದು. ಯಾವಾಗ ನಿಮ್ಮಲ್ಲಿ ಗರ್ವ ಬೆಳೆಯುತ್ತೋ ಆಗ ಮೋದಿ ಅಲ್ಲ, ಸಮುದಾಯವೂ ನಿಮ್ಮನ್ನ ಗೆಲ್ಲಿಸಲು ಸಾಧ್ಯವಿಲ್ಲ. ಜನರ ತೀರ್ಪನ್ನ ಗೌರವಿಸಲು ಮುಂದಾಗಿ. ಸಚಿವ ಸ್ಥಾನ ನೀಡಲಾಗುವುದು ಬನ್ನಿ, ನಾವು ಪಿಎಂಒದಿಂದ ಕಾಲ್​ ಮಾಡ್ತಿದ್ದೇವೆ ಎಂದೆಲ್ಲ ಹೇಳ್ತಾರೆ. ಆದರೆ ಅದನ್ನ ನಂಬಬೇಡಿ. ಸಚಿವ ಸ್ಥಾನ ಕೆಲವರಿಗೆ ಮಾತ್ರ ನೀಡಲಾಗುತ್ತದೆ. ನವಭಾರತದ ಅಭಿವೃದ್ದಿಗೆ ಎಲ್ಲರೂ ಒಂದಾಗಿ. ನಿಮಗೆ ನಿಜವಾಗಿ ಫೋನ್​ ಕಾಲ್​ ಬಂದರೂ ಪರೀಕ್ಷೆ ಮಾಡಿಕೊಳ್ಳಿ. ಟಿವಿಯಲ್ಲಿ ನಿಮ್ಮ ಹೆಸರು ಬಿತ್ತರಗೊಳ್ಳುತ್ತಿದ್ದರೆ ಟಿವಿ ಆಫ್​ ಮಾಡಿ ಎಂದರು.

Last Updated : May 25, 2019, 8:14 PM IST

ABOUT THE AUTHOR

...view details