ಕರ್ನಾಟಕ

karnataka

ಕುದಿಯುವ ನೀರಿನ ತೊಟ್ಟಿಗೆ ಬಿದ್ದು ಕಂದಮ್ಮ ಸಾವು

By

Published : Feb 26, 2022, 6:46 PM IST

ಪಾಪು ನೋವಿನಿಂದ ಕಿರುಚುತ್ತಿದ್ದಂತೆಯೇ ಅಲ್ಲಿದ್ದ ಮಕ್ಕಳು ದೊಡ್ಡವರನ್ನು ಕರೆದಿದ್ದಾರೆ. ಆದರೆ, ಮಗುವನ್ನ ಬದುಕಿಸಿಕೊಳ್ಳಲಾಗಲಿಲ್ಲ. ಮುಗ್ಧ ಮಗುವಿನ ಹಠಾತ್ ಮತ್ತು ಅನಿರೀಕ್ಷಿತ ಸಾವಿನಿಂದ ಇಡೀ ಗ್ರಾಮವೇ ಆಘಾತಕ್ಕೊಳಗಾಗಿದೆ..

ಕುದಿಯುವ ನೀರಿನ ತೊಟ್ಟಿಗೆ ಬಿದ್ದು ಕಂದಮ್ಮ ಸಾವು
ಕುದಿಯುವ ನೀರಿನ ತೊಟ್ಟಿಗೆ ಬಿದ್ದು ಕಂದಮ್ಮ ಸಾವು

ಭರತ್‌ಪುರ(ರಾಜಸ್ಥಾನ): ಕುದಿಯುವ ನೀರಿನ ತೊಟ್ಟಿಗೆ ಬಿದ್ದು ಒಂದೂವರೆ ವರ್ಷದ ಬಾಲಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರೇವದ್‌ಪುರ ಗ್ರಾಮದಲ್ಲಿ ನಿನ್ನೆ ನಡೆದಿದೆ.

ಮಗು ನೀರಿನ ತೊಟ್ಟಿಗೆ ಬೀಳುತ್ತಿದ್ದಂತೆಯೇ ಕುಟುಂಬಸ್ಥರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ತಾಯಿ ತನ್ನ ಮಗುವನ್ನು ಕರೆದುಕೊಂಡು ತವರು ಮನೆಗೆ ಬಂದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕಾವೇರಿ ನದಿ ದುರಂತ : ಸಂಗಮದ ಬಳಿ ಮತ್ತೊಬ್ಬ ಮಹಿಳೆ ಮೃತದೇಹ ಪತ್ತೆ

ನೆರೆಮನೆಯ ಕೆಲವು ಮಕ್ಕಳೊಂದಿಗೆ ಮಗು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸಮೀಪದಲ್ಲಿ ಇರಿಸಲಾದ ಕುದಿಯುವ ನೀರಿನ ತೊಟ್ಟಿಗೆ ಬಿದ್ದಿದೆ. ಪಾಪು ನೋವಿನಿಂದ ಕಿರುಚುತ್ತಿದ್ದಂತೆಯೇ ಅಲ್ಲಿದ್ದ ಮಕ್ಕಳು ದೊಡ್ಡವರನ್ನು ಕರೆದಿದ್ದಾರೆ. ಆದರೆ, ಮಗುವನ್ನ ಬದುಕಿಸಿಕೊಳ್ಳಲಾಗಲಿಲ್ಲ. ಮುಗ್ಧ ಮಗುವಿನ ಹಠಾತ್ ಮತ್ತು ಅನಿರೀಕ್ಷಿತ ಸಾವಿನಿಂದ ಇಡೀ ಗ್ರಾಮವೇ ಆಘಾತಕ್ಕೊಳಗಾಗಿದೆ.

ABOUT THE AUTHOR

...view details