ETV Bharat / bharat

ದೆಹಲಿ ಸಿಎಂ ಕೇಜ್ರಿವಾಲ್​ಗೆ ಮತ್ತೆ ಸೆರೆವಾಸ: 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​ - Arvind Kejriwal

author img

By PTI

Published : Jun 29, 2024, 6:08 PM IST

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಜಾಮೀನು ಕುರಿತ ವಿಚಾರಣೆಯ ಆದೇಶ ಇಂದು ಹೊರಬಿದ್ದಿದ್ದು, ಮತ್ತೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ದೆಹಲಿ ಸಿಎಂ ಕೇಜ್ರಿವಾಲ್​ಗೆ ಮತ್ತೆ ಸೆರೆವಾಸ
ದೆಹಲಿ ಸಿಎಂ ಕೇಜ್ರಿವಾಲ್​ಗೆ ಮತ್ತೆ ಸೆರೆವಾಸ (ETV Bharat)

ನವದೆಹಲಿ: ಅಬಕಾರಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಜೂನ್​ 12 ಅಂದರೆ, 14 ದಿನಗಳವರೆಗೆ ಕೇಜ್ರಿವಾಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ(ಸಿಬಿಐ) ಕೇಜ್ರಿವಾಲ್​ ಅವರನ್ನು ಇಂದು ಸಿಬಿಐ ವಿಶೇಷ ಕೋರ್ಟ್​ ಮುಂದೆ ಹಾಜರುಪಡಿಸಲಾಯಿತು. ಬಳಿಕ ಹೆಚ್ಚಿನ ವಿಚಾರಣೆಗಾಗಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಕೋರಿತು.

ಇದನ್ನು ಅಂಗೀಕರಿಸಿದ ವಿಶೇಷ ಕೋರ್ಟ್​ ನ್ಯಾಯಾಧೀಶ ಸುನೇನಾ ಶರ್ಮಾ ಅವರು ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ಬಳಿಕ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ಇದರಿಂದ ಜಾಮೀನು ಪಡೆದು ಬಿಡುಗಡೆಯ ನಿರೀಕ್ಷೆಯಲ್ಲಿದ್ದ ದೆಹಲಿ ಸಿಎಂಗೆ ಮತ್ತೆ ಸೆರೆವಾಸಕ್ಕೆ ತೆರಳಿದರು.

ಸಿಬಿಐ ವಾದವೇನು?: ಮೂರು ದಿನಗಳ ಕಸ್ಟಡಿಯಲ್ಲಿದ್ದಾಗ ದೆಹಲಿ ಸಿಎಂ ಕೇಜ್ರಿವಾಲ್​ ತನಿಖೆಗೆ ಸಹಕರಿಸಲಿಲ್ಲ. ಉದ್ದೇಶಪೂರ್ವಕವಾಗಿ ದಾಖಲೆಯಲ್ಲಿರುವ ಸಾಕ್ಷ್ಯಗಳಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿ ಸಾಕ್ಷ್ಯಗಳಿದ್ದರೂ, 2021-22 ರ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭದ ಪ್ರಮಾಣವನ್ನು 5 ರಿಂದ 12 ಪ್ರಮಾಣದಷ್ಟು ಹೆಚ್ಚಿಸುವ ಬಗ್ಗೆ ಸರಿಯಾದ ವಿವರಣೆ ನೀಡಲಿಲ್ಲ ಎಂದು ಸಿಬಿಐ ತನ್ನ ರಿಮಾಂಡ್ ಅರ್ಜಿಯಲ್ಲಿ ಹೇಳಿದೆ.

ಕೋವಿಡ್​ ಸೋಂಕು ಉತ್ತುಂಗದಲ್ಲಿದ್ದ ವೇಳೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ನಾಯಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದರು. ಪರಿಷ್ಕೃತ ಅಬಕಾರಿ ನೀತಿಗೆ ಕ್ಯಾಬಿನೆಟ್ ಅನುಮೋದನೆಯನ್ನು ಒಂದೇ ದಿನದಲ್ಲಿ ತರಾತುರಿಯಲ್ಲಿ ಪಡೆಯಲಾಗಿದೆ. ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ವಿಜಯ್ ನಾಯರ್ ಅವರೊಂದಿಗೆ ದೆಹಲಿ ಸಿಎಂ ಸಭೆಗಳನ್ನು ನಡೆಸಿದ್ದಾರೆ ಎಂದು ಸಿಬಿಐ ತಿಳಿಸಿದೆ.

ದೆಹಲಿ ಮದ್ಯದ ಅವ್ಯವಹಾರ ಪ್ರಕರಣದ ಪಾಲುದಾರರೊಂದಿಗೆ ವಿಜಯ್ ನಾಯರ್ ಅವರು ಸಭೆ ನಡೆಸಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಕೇಜ್ರಿವಾಲ್ ಉತ್ತರ ನೀಡಲು ನುಣುಚಿಕೊಂಡರು. ಆರೋಪಿಗಳಾದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಆರೋಪಿ ಅರ್ಜುನ್ ಪಾಂಡೆ ಮತ್ತು ಆರೋಪಿ ಮೂತ ಗೌತಮ್ ಅವರನ್ನು ಭೇಟಿಯಾದ ಬಗ್ಗೆ ಸರಿಯಾದ ವಿವರಣೆ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

2021-22ರ ಅವಧಿಯಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಪಕ್ಷವು ಬಳಸಿರುವ 44.54 ಕೋಟಿ ರೂಪಾಯಿ ಹಣದ ವರ್ಗಾವಣೆ ಮತ್ತು ಬಳಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿವರಿಸಿಲ್ಲ. ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಕೇಜ್ರಿವಾಲ್​ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದು, ಕಸ್ಟಡಿ ವಿಚಾರಣೆಯ ಸಮಯದಲ್ಲಿ ಅವರು ಈಗಾಗಲೇ ಬಹಿರಂಗಪಡಿಸಿದ ಸಾಕ್ಷಿಗಳು ಮತ್ತು ಅವುಗಳ ಮೇಲೆ ಪ್ರಭಾವ ಬೀರಬಹುದು ಎಂಬ ಶಂಕೆ ಇದೆ. ಪ್ರಕರಣದಲ್ಲಿ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿದೆ. ಅವರಿಗೆ ಜಾಮೀನು ನೀಡಿದಲ್ಲಿ ತನಿಖೆಗೆ ಅಡ್ಡಿಯಾಗಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಿಬಿಐನಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನ - Aravind kejriwal arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.