ಕರ್ನಾಟಕ

karnataka

ಗಗನಕ್ಕೇರಿದ ಬೆಳೆಕಾಳು, ತರಕಾರಿ ಬೆಲೆ: ಗೃಹಿಣಿಯರಿಗೆ ಮನೆ ನಿಭಾಯಿಸುವುದು ಕಷ್ಟ ಕಷ್ಟ!

By

Published : Apr 8, 2021, 3:55 PM IST

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಾಗುವುದರ ಜೊತೆಗೆ ದೈನಂದಿನ ಬಳಕೆಯ ವಸ್ತುಗಳು ಇನ್ನಷ್ಟು ದುಬಾರಿಯಾಗಿವೆ. ಜೊತೆಗೆ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರ ಸಮಸ್ಯೆಗಳು ಮತ್ತಷ್ಟು ಹೆಚ್ಚುತ್ತಿವೆ.

rise-in-prices-of-pulses-veggies-and-eatables-upsets-kitchen-budgets
rise-in-prices-of-pulses-veggies-and-eatables-upsets-kitchen-budgets

ನವದೆಹಲಿ: ಬೆಳೆಕಾಳು, ವನಸ್ಪತಿ, ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ಇವುಗಳ ಬೆಲೆ ಕೇಳುವಂತೆಯೂ ಇಲ್ಲ. ಇನ್ನು ತರಕಾರಿ, ಹಣ್ಣುಗಳ ಬೆಲೆ ಕೈಗೆಟುಕದ ದರಕ್ಕೆ ಹೊರಟು ಹೋಗಿವೆ. ಈ ಎಲ್ಲಾ ಕಾರಣಗಳಿಂದ ಬಡ ಮತ್ತು ಮಧ್ಯಮ ವರ್ಗದ ಜನ ಹೈರಾಣಾಗಿದ್ದಾರೆ.

ಗಗನಕ್ಕೇರಿದ ಬೆಲೆ

ಒಂದೆಡೆ ಬೆಲೆ ಏರಿಕೆ ಬಿಸಿ, ಮತ್ತೊಂದೆಡೆ ಸಾಂಕ್ರಮಿಕದಿಂದಾಗಿ ಆರ್ಥಿಕತೆಗೆ ಬಿದ್ದಿರುವ ಪೆಟ್ಟು, ಜನ ನೌಕರಿ ಇಲ್ಲದೇ ಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ. ಅಡುಗೆ ಎಣ್ಣೆ ಕೈಗೆ ಸಿಗದಂತೆ ಮೇಲೇರುತ್ತಿದೆ. ಜತೆ ಜತೆಗೆ ಪೆಟ್ರೋಲ್​ - ಡೀಸೆಲ್​ ಬೆಲೆ 100ರ ಆಸುಪಾಸಿಗೆ ಬಂದು ನಿಂತಿದೆ.

ಗಗನಕ್ಕೇರಿದ ಬೆಲೆ

ಎಲ್ಲವೂ ಮನೆ ನಿಭಾಯಿಸುವವರಿಗೆ ದುಬಾರಿ ಎಂದು ಅನ್ನಿಸುತ್ತಿದೆ. ಸಂಸಾರ ತೂಗಿಸುವುದು ಕಷ್ಟವಾಗುತ್ತಿದೆ. ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ, ಅತ್ತ ಏರುತ್ತಿರುವ ಬೆಲೆಗಳಿಂದಾಗಿ ಬಡವರು, ಮಧ್ಯಮ, ತಳ ಹಾಗೂ ನಡು ಮಧ್ಯಮ ವರ್ಗದ ಜನ ದಿಕ್ಕು ತೋಚದಂತಾಗಿದ್ದಾರೆ.

ಗಗನಕ್ಕೇರಿದ ಬೆಲೆ

ಪಾಮ್​ ಆಯಿಲ್​ ಬೆಲೆ ಶೇ. 74ರಷ್ಟು ಹೆಚ್ಚಳವಾಗಿದೆ. ಸಾಸಿವೆ ಎಣ್ಣೆ ಲೀಟರ್​ಗೆ 200 ರೂ.ಗೆ ಏರಿಕೆ ಆಗಿದೆ. ಕೇವಲ ಅಡುಗೆ ಎಣ್ಣೆ ಬೆಲೆಯ ಕಥೆಯಷ್ಟೇ ಅಲ್ಲ, ಎಲ್ಲಾ ದರಗಳು ಗ್ರಾಹಕರನ್ನ ಕಂಗಾಲು ಮಾಡಿರುವುದಂತೂ ದಿಟ.

ABOUT THE AUTHOR

...view details