ಕರೀಂನಗರ (ತೆಲಂಗಾಣ):ತೆಲಂಗಾಣದಲ್ಲಿ ‘ರಾಮರಾಜ್ಯ’ ಸ್ಥಾಪನೆಗೆ ಪ್ರತಿಜ್ಞೆ ಮಾಡಿರುವ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರು, ರಾಜ್ಯದ ಎಲ್ಲಾ ಮಸೀದಿಗಳಲ್ಲಿಉತ್ಖನನ ಮಾಡುವಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕಿದ್ದಾರೆ. ಹೀಗೆ ಮಸೀದಿಗಳನ್ನು ಅಗೆದಾಗ ಶಿವಲಿಂಗ ಪತ್ತೆಯಾದರೆ, ಮುಸ್ಲಿಮರು ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕಾಗುತ್ತದೆ. ಒಂದು ವೇಳೆ ಮಸೀದಿಯಲ್ಲಿ ಮೃತದೇಹಗಳು ಕಂಡು ಬಂದರೆ, ಅದು ನಿಮ್ಮದು ಎಂದಿದ್ದಾರೆ.
ಕರೀಂನಗರದಲ್ಲಿ ಹನುಮ ಜಯಂತಿ ನಿಮಿತ್ತ ನಡೆದ ಹಿಂದೂ ಏಕತಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಮಸೀದಿಗಳನ್ನು ಎಲ್ಲಿ ಅಗೆದರೂ ಶಿವಲಿಂಗಗಳು ಪತ್ತೆಯಾಗುತ್ತಿವೆ. ರಾಜ್ಯದ ಎಲ್ಲ ಮಸೀದಿಗಳನ್ನು ಅಗೆಯುತ್ತೇವೆ. ಒಂದು ವೇಳೆ ಮೃತದೇಹಗಳು ಸಿಕ್ಕರೆ, ಅದು ನಿಮ್ಮದು. ಇಲ್ಲ ಶಿವಲಿಂಗ ಕಂಡುಬಂದರೇ ಹಿಂದೂಗಳಿಗೆ ಬಿಟ್ಟುಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.