ETV Bharat / snippets

ಬುಲೆಟ್, ಪಲ್ಸರ್ ಕಳ್ಳತನ: ಇಬ್ಬರ ಬಂಧನ, ₹30 ಲಕ್ಷ ಮೌಲ್ಯದ 16 ಬೈಕ್ ಜಪ್ತಿ

bikes thieves
ಕಳ್ಳತನವಾಗಿದ್ದ ಬೈಕ್​ಗಳು (ETV Bharat)
author img

By ETV Bharat Karnataka Team

Published : Jul 28, 2024, 5:19 PM IST

ದೇವನಹಳ್ಳಿ: ಬುಲೆಟ್, ಪಲ್ಸರ್ ಸೇರಿದಂತೆ ಬೈಕ್​ಗಳು ಮತ್ತು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ವಿಶ್ವನಾಥಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 16 ಬೈಕ್​ಗಳನ್ನು ಜಪ್ತಿ ಮಾಡಲಾಗಿದೆ.

ವಿಶ್ವನಾಥಪುರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಅರುಣ್ ಕುಮಾರ್ (31) ಹಾಗೂ ದಿಲೀಪ್ ಎಂ. (28) ಎಂಬ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಯಲಹಂಕ, ಹುಳಿಮಾವು, ಎಲೆಕ್ಟ್ರಾನಿಕ್ ಸಿಟಿ, ವಿದ್ಯಾರಣ್ಯಪುರ, ಹೊಸಕೋಟೆ, ಕೋಲಾರ ಮತ್ತು ಮುಳಬಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಮತ್ತು ಸರಗಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ ವಿಶ್ವನಾಥಪುರ ಠಾಣೆ ಪೊಲೀಸ್​​ ಇನ್ಸ್​​ಪೆಕ್ಟರ್​ ಟಿ.ಶ್ರೀನಿವಾಸ್, ಪಿಎಸ್​​ಐ ನಾರಾಯಣಸ್ವಾಮಿ, ಎಎಸ್​​ಐ ಶ್ರೀನಿವಾಸಯ್ಯ, ಹರೀಶ್, ವೆಂಕಟಾಚಲಯ್ಯ, ಹೆಡ್ ಕಾನ್ಸ್​ಟೇಬಲ್​ಗಳಾದ ಶಂಭುಲಿಂಗ, ಸಂತೋಷ್, ಅಶೋಕ್, ಸಂಜಯ್ ಹಾಗೂ ಡ್ರೈವರ್ ಉಮೇಶ್ ಅವರಿಗೆ ಡಿವೈಎಸ್​​ಪಿ ರವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.