ETV Bharat / snippets

ಹೊಂಬೆಳಕು ಯೋಜನೆಯಡಿ ರಾಜ್ಯದ 50 ಗ್ರಾ.ಪಂ.ಗಳಲ್ಲಿ ಸೌರ ಬೀದಿ ದೀಪ ಅಳವಡಿಕೆ: ಸಚಿವ ಪ್ರಿಯಾಂಕ್‌ ಖರ್ಗೆ

author img

By ETV Bharat Karnataka Team

Published : Sep 14, 2024, 8:36 AM IST

ಸಚಿವ ಪ್ರಿಯಾಂಕ್‌ ಖರ್ಗೆ
ಸಚಿವ ಪ್ರಿಯಾಂಕ್‌ ಖರ್ಗೆ (ETV Bharat)

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ ಇರಿಸಲು ಹಾಗೂ ವಿದ್ಯುತ್‌ ವೆಚ್ಚ ಕಡಿಮೆ ಮಾಡಲು 50 ಗ್ರಾಮ ಪಂಚಾಯತ್​ಗಳಲ್ಲಿ ಸೋಲಾರ್‌ ಬೀದಿ ದೀಪ ಅಳವಡಿಸುವ 'ಹೊಂಬೆಳಕು' ಯೋಜನೆ ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಈ ವರ್ಷದ ಆಯವ್ಯಯದಲ್ಲಿ ಘೋಷಿಸಿದ್ದಂತೆ ಹೊಂಬೆಳಕು ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 25 ಕೋಟಿ ರೂ. ವೆಚ್ಚ ಮಾಡಲಾಗುವುದು. ಸೌರ ಬೀದಿ ದೀಪಗಳು ಪರಿಸರ ಸ್ನೇಹಿಯಾಗಿದ್ದು, ಇಂಧನ ಬಳಕೆ ಆಗದಿರುವುದರಿಂದ ಗ್ರಾಪಂಗಳಿಗೆ ವಿದ್ಯುತ್‌ ವೆಚ್ಚದ ಹೊರೆ ಕಡಿಮೆಯಾಗಲಿದೆ. ಅಳವಡಿಸಲಾಗುತ್ತಿರುವ ಸೌರ ಬೀದಿ ದೀಪಗಳು ಎಲ್​​ಇಡಿ ತಂತ್ರಜ್ಞಾನ ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಈ ವರ್ಷ ಸುಮಾರು 16,500 ಸೋಲಾರ್‌ ಬೀದಿ ದೀಪ ಅಳವಡಿಸುವ ಗುರಿ ಇದೆ. ಗ್ರಾಮೀಣ ಜನರು ಪ್ರಖರ ಬೆಳಕು ಪಡೆಯುವ ಜೊತೆಗೆ ವೆಚ್ಚದ ಮಿತವ್ಯಯದಿಂದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.