ETV Bharat / bharat

ಜಮ್ಮು - ಕಾಶ್ಮೀರ ವಿಧಾನಸಭೆ ಚುನಾವಣೆ: ಸಂಜೆ 5 ಗಂಟೆ ವೇಳೆಗೆ ಶೇ.58.19 ರಷ್ಟು ಮತದಾನ - jammu kashmir assembly election

author img

By PTI

Published : 23 hours ago

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರ ಇದೇ ಮೊದಲ ಬಾರಿಗೆ ಇಂದು ವಿಧಾನಸಭಾ ಚುನಾವಣೆ ಎದುರಿಸುತ್ತಿದೆ. ಮೊದಲ ಹಂತದಲ್ಲಿ 23 ಲಕ್ಷಕ್ಕೂ ಹೆಚ್ಚು ಮತದಾರರು ಕಣದಲ್ಲಿರುವ 219 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಇನ್ನು ಸಂಜೆ 5 ಗಂಟೆ ವೇಳೆಗೆ ಶೇ.58.19 ರಷ್ಟು ಮತದಾನ ದಾಖಲಾಗಿದೆ.

ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ
ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆ (IANS)

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಇಂದು ಸಂಜೆ 5 ಗಂಟೆಯ ವೇಳೆಗೆ ಶೇ.58ಕ್ಕೂ ಹೆಚ್ಚು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾಧಿಕಾರಿಗಳ ಅಧಿಕಾರಿಗಳ ಪ್ರಕಾರ, ಸಂಜೆ 5 ಗಂಟೆ ವೇಳೆಗೆ ಒಟ್ಟಾರೆ ಶೇ.58.19ರಷ್ಟು ಮತದಾನವಾಗಿದೆ. ಮೊದಲ ಹಂತಮತದಾನ ನಡೆಯುತ್ತಿರುವ 24 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದರ್‌ವಾಲ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ.80.06 ರಷ್ಟು ಮತದಾನ ನಡೆದಿದೆ. ನಂತರ ಪಾಡರ್-ನಾಗ್ಸೇನಿ ಶೇ.76.80 ಮತ್ತು ಕಿಶ್ತ್ವಾರ್‌ನಲ್ಲಿ ಶೇ. 75.04 ರಷ್ಟು ಮತದಾನವಾಗಿದೆ.

ಇದೇ ಸಮಯಕ್ಕೆ ದೋಡಾ ಪಶ್ಚಿಮ ಕ್ಷೇತ್ರದಲ್ಲಿ ಶೇ.74.14 ರಷ್ಟು ಹೆಚ್ಚಿನ ಮತದಾನವಾಗಿದೆ. ಕಾಶ್ಮೀರ ಕಣಿವೆಯ ಪಹಲ್ಗಾಮ್​ನಲ್ಲಿ ಶೇ. 67.86 ರಷ್ಟು ಮತದಾನವಾಗಿದೆ. ಮುಂದುವರೆದು, ಡಿ.ಎಚ್.ಪೋರಾ ಶೇ.65.21, ಕುಲ್ಗಾಮ್ ಶೇ.59.58, ಕೊಕರ್ನಾಗ್ ಶೇ.58 ಮತ್ತು ದೂರು ಶೇ.57.90ರಷ್ಟು ಮತದಾನ ದಾಖಲಾಗಿದೆ. ಟ್ರಾಲ್​ ವಿಭಾಗದಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 40.58 ರಷ್ಟು ಮತದಾನ ದಾಖಲಾಗಿದೆ. ಪುಲ್ವಾಮಾ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಇನ್ನೂ ಶೇ.50 ರ ಗಡಿಯನ್ನು ದಾಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು.

2019 ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ: 'ಒಂದು ರಾಷ್ಟ್ರ, ಒಂದು ಚುನಾವಣೆ‘ ವರದಿಗೆ ಕೇಂದ್ರ ಅನುಮೋದನೆ: ಖರ್ಗೆ ವಿರೋಧ - One Nation One Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.