ETV Bharat / state

ಡಿ.ಕೆ.ಶಿವಕುಮಾರ್​ರನ್ನು ಮುಖ್ಯಮಂತ್ರಿಯಾಗಿಸಿ, ಒಕ್ಕಲಿಗರೆಲ್ಲರು ಒಗ್ಗೂಡಿ ಪಕ್ಷ ಕಟ್ಟೋಣ: ಶಾಸಕ ಕದಲೂರು ಉದಯ್ - MLA Kadalur Uday

author img

By ETV Bharat Karnataka Team

Published : 22 hours ago

ಮದ್ದೂರು ತಾಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್​, ಮುಂಬರುವ ತಾ.ಪಂ. ಹಾಗೂ ಜಿ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್​ ಪಕ್ಷವೇ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹುರಿದುಂಬಿಸಿದರು.

Inauguration program of Maddur Taluk Block Congress President
ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ (ETV Bharat)
ಡಿ.ಕೆ.ಶಿವಕುಮಾರ್​ರನ್ನು ಮುಖ್ಯಮಂತ್ರಿಯಾಗಿಸಿ, ಒಕ್ಕಲಿಗರೆಲ್ಲರು ಒಗ್ಗೂಡಿ ಪಕ್ಷ ಕಟ್ಟೋಣ: ಶಾಸಕ ಕದಲೂರು ಉದಯ್ (ETV Bharat)

ಮಂಡ್ಯ: "ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟ್ ಗೆದ್ದಿದೆ. 2028ಕ್ಕೆ 138 ಸೀಟ್ ಗೆಲ್ಲಬೇಕು. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿಸಬೇಕು. ಒಕ್ಕಲಿಗರು ಎಲ್ಲ ಸೇರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡೋಣ. ಒಗ್ಗಟ್ಟಿನಿಂದ ನಾವೆಲ್ಲರೂ ದುಡಿಯೋಣ, ಪಕ್ಷ ಗಟ್ಟಿಯಾಗಿಸೋಣ" ಎಂದು ಶಾಸಕ ಕದಲೂರು ಉದಯ್ ಹೇಳಿದರು.

ಬುಧವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದ್ದೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಮಾಜಿ ಸಂಸದ ಡಿ.ಕೆ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಲುವರಾಜ್ ಹಾಗೂ ರಾಜೀವ್ ಅಧಿಕಾರ ಸ್ವೀಕರಿಸಿದರು.

"ಮದ್ದೂರಿನಲ್ಲಿ ಕಾರ್ಯಕರ್ತರು ಬಲಿಷ್ಠರಾಗಿದ್ದಾರೆ. ಹೊಸ ಅಧ್ಯಕ್ಷರ ನೇಮಕವಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಸಂದರ್ಭ ಇದೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್​ ಚುನಾವಣೆ ಬರುತ್ತಿದ್ದು, ಅದಕ್ಕಾಗಿ ಸಜ್ಜಾಗಬೇಕು. ನಮ್ಮ ಕಾರ್ಯಕರ್ತರ ಬಲಿಷ್ಠತೆಯನ್ನು ಚೆಕ್ ಮಾಡಿದ್ದೇವೆ. ಮುಂಬರುವ ಚುನಾವಣೆಯಲ್ಲಿ ನಿಮ್ಮ ಒಗ್ಗಟ್ಟು ಹೀಗೆ ಇರಬೇಕು. ಮಾರ್ಗದರ್ಶನ, ಅರ್ಥಿಕವಾಗಿ ಸಹಾಯ ಮಾಡುವವರು ಇರಲಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಮದ್ದೂರಿನ ಬಗ್ಗೆ ಡಿ.ಕೆ. ಶಿವಕುಮಾರ್ ವಿಶೇಷ ಕಾಳಜಿ ವಹಿಸಿದ್ದಾರೆ. ಎಲ್ಲಾ ಚುನಾವಣೆಯಲ್ಲಿ ನಾವೇ ಗೆಲ್ಲಬೇಕು" ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತಿನ ಮೂಲಕ ಶಕ್ತಿ ತುಂಬಿದರು.

ಮಾಜಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, "ಹೊಸ ನಾಯಕತ್ವಕ್ಕಾಗಿ ಮದ್ದೂರಿನ ಜನ ಉದಯ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ನೂತನ ತಾಲ್ಲೂಕು ಅಧ್ಯಕ್ಷರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಪಕ್ಷ ಸಂಘಟನೆ ಮಾಡಬೇಕು. ಅನೇಕ ಚುನಾವಣೆಗಳು ಬರ್ತಿವೆ, ಎಲ್ಲದಕ್ಕೂ ಸಜ್ಜಾಗಬೇಕು‌. ತಾಳ್ಮೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಂಚಾಯತ್​ ಮಟ್ಟದಲ್ಲಿ ತಂಡ ಕಟ್ಟಿ ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗಿ. ನಮ್ಮ ಗುರಿ 2028ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಡಿಸೆಂಬರ್​ಗೆ ತಾ.ಪಂ, ಜಿ.ಪಂ ಚುನಾವಣೆ ಬರುತ್ತಿದೆ, ಸಜ್ಜಾಗಬೇಕು‌."

"ಶಾಶ್ವತವಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಮನೆ ಮನೆಗೆ ಹೋಗಿ ಜನರ ಕಷ್ಟ ಕೇಳಿ. ಅನೇಕ ಅಭಿವೃದ್ಧಿ ಕೆಲಸಕ್ಕೆ ಸಿಎಂ, ಡಿಸಿಎಂ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆ ಬರುತ್ತಿದೆ. ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಮಳೆ ಇಲ್ಲ. ಎಚ್ಚರಿಕೆಯಿಂದ ನೀರಿನ ಬಳಕೆ ಬಗ್ಗೆ ನಿಗಾ ವಹಿಸಿ. ಕೇಂದ್ರದ ವಿರೋಧ ನೀತಿ ನೋಡುತ್ತಿದ್ದೀರಿ. ಕರ್ನಾಟಕದ ರಕ್ಷಣೆಗೆ ಯಾರೂ ಬರಲ್ಲ. ಹನಿ ನೀರನ್ನು ರೈತರು ಯಾವ ರೀತಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನೀರು ಸಿಗುವುದು ಕಡಿಮೆಯಾಗುತ್ತದೆ. ಮಳೆ ಬರುವುದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೈಯಲ್ಲಿ ಇಲ್ಲ. ಸಿದ್ದರಾಮಯ್ಯ ಬಂದ ಮೇಲೆ ಮಳೆ ಬರ್ತಿಲ್ಲ ಅಂತಾರೆ. ನಾವು ಮಾತನಾಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ರೈತರ ಮಕ್ಕಳಿಗೆ ಕೊಟ್ಟಿದ್ದೇವೆ. ಜಾತಿ ನೋಡಿ ಕೊಟ್ಟಿಲ್ಲ, ಎಲ್ಲರಿಗೂ ಕೊಟ್ಟಿದ್ದೇವೆ" ಎಂದರು.

ಹೆಚ್​ ಡಿ ಕುಮಾರಸ್ವಾಮಿಗೆ ವೋಟ್ ಹಾಕಿದವರಿಗೂ ಕೊಟ್ಟಿದ್ದೇವೆ. ನುಡಿದಂತೆ ಕಾಂಗ್ರೆಸ್ ಪಕ್ಷ ನಡೆದಿದೆ. ಚುನಾವಣೆಯಲ್ಲಿ ಗೆಲುವು ಸೋಲು ಸಹಜ. ನಮ್ಮ ಕಾರ್ಯಕ್ರಮವನ್ನು ಬಿಡಲ್ಲ. ನಾವು ಸೋತು ಮನೆಯಲ್ಲಿ ಕುಳಿತಿಲ್ಲ. ಜನರ ಕಷ್ಟದಲ್ಲಿ ಭಾಗಿಯಾಗಿದ್ದೇವೆ. ಕಾಂಗ್ರೆಸ್ ಸರ್ಕಾರದ ಜನರ ಪರ ಇದೆ. ತಾಕತ್ತಿದ್ದರೆ ಬಿಜೆಪಿಯವರು ಗ್ಯಾರಂಟಿ ಕಿತ್ತು ಹಾಕಲಿ. ಅಭಿವೃದ್ಧಿ ಕುಂಠಿತವಾಗಿಲ್ಲ. ಬಾಕಿ ಇದ್ದ ಹಳೆ ಕೆಲಸಗಳೆಲ್ಲವೂ ನಡೆಯುತ್ತಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ. ಶಾಸಕರು ಹೊಸಬರಿದ್ದಾರೆ, ಕೆಲಸ ಮಾಡ್ತಾರೆ, ಸಹಕರಿಸಿ. 2028 ಕ್ಕೆ ಎರಡನೇ ಬಾರಿ ಉದಯ್ ಅವರನ್ನು ಶಾಸಕರಾಗಿ ಮಾಡಿ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಸ್ಟಾರ್ ಚಂದ್ರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಸೇರಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ: ಮೋದಿ ಭಯದಿಂದ 'ಒಂದು ದೇಶ, ಒಂದು ಚುನಾವಣೆ'ಗೆ ಕಾಂಗ್ರೆಸ್ ವಿರೋಧ: ಆರ್​​.ಅಶೋಕ್​ - One Nation One Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.