ETV Bharat / snippets

ಶಿವಮೊಗ್ಗದ 2 ತಾಲೂಕು, ಉಡುಪಿಯ ಕಾಪು ಸೇರಿ ದ.ಕನ್ನಡ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ರಜೆ

ಶಿವಮೊಗ್ಗದ 2 ತಾಲೂಕಿನ ಶಾಲಾ-ಕಾಲೇಜಿಗೆ ರಜೆ
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Jul 31, 2024, 6:53 AM IST

ಶಿವಮೊಗ್ಗ/ದಕ್ಷಿಣ ಕನ್ನಡ: ಮಲೆನಾಡಿನಲ್ಲಿ ಮಳೆ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳ ಶಾಲಾ-ಕಾಲೇಜಿಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ, ಕಾಪು ಭಾಗದಲ್ಲೂ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ದ.ಕನ್ನಡ ಜಿಲ್ಲೆಯಲ್ಲೂ ರಜೆ ಘೋಷಣೆ: ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಇಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ​ ಆದೇಶಿಸಿದ್ದಾರೆ.

ಪ್ರವಾಹ ಭೀತಿ ಇರುವುದರಿಂದ ಹವಾಮಾನ ಇಲಾಖೆ ಇಂದು ಜಿಲ್ಲೆಗೆ ರೆಡ್​ ಅಲರ್ಟ್ ನೀಡಿದೆ. ಈ ಬೆನ್ನಲ್ಲೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ವಯನಾಡು ಭೂ ಕುಸಿತ ದುರಂತ: ಚಾಮರಾಜನಗರದ ಇಬ್ಬರ ಶವ ಪತ್ತೆ, ಇನ್ನಿಬ್ಬರು ನಾಪತ್ತೆ - Wayanad Land Slide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.