ETV Bharat / entertainment

ಸೌತ್ ಸೂಪರ್​ಸ್ಟಾರ್​ ಸೂರ್ಯ ಮುಖ್ಯಭೂಮಿಕೆಯ 'ಕಂಗುವ' ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೀಗಿದೆ - KANGUVA COLLECTION

ಜನಪ್ರಿಯ ನಟ ಸೂರ್ಯ ಅವರ 'ಕಂಗುವ' ಸಿನಿಮಾ ಅದ್ಭುತ ಅಂಕಿಅಂಶಗಳೊಂದಿಗೆ ಬಾಕ್ಸ್ ಆಫೀಸ್​ ಪ್ರಯಾಣ ಪ್ರಾರಂಭಿಸಿದ್ರೂ, ಎರಡನೇ ದಿನ ಕಲೆಕ್ಷನ್​​ನಲ್ಲಿ ಕುಸಿತವಾಗಿದೆ.

Kanguva Box Office Collection
ಕಂಗುವ ಬಾಕ್ಸ್​ ಆಫೀಸ್ ಕಲೆಕ್ಷನ್​ (Photo: Film Poster)
author img

By ETV Bharat Entertainment Team

Published : Nov 16, 2024, 2:28 PM IST

ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಸೂರ್ಯ ಮುಖ್ಯಭೂಮಿಕೆಯ ಫ್ಯಾಂಟಸಿ ಡ್ರಾಮಾ 'ಕಂಗುವ' ನವೆಂಬರ್ 14ರಂದು ಅದ್ಧೂರಿಯಾಗಿ ಬಿಡುಗಡೆ ಆಯಿತು. ಅತ್ಯುತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್‌ ಪ್ರಯಾಣ ಪ್ರಾರಂಭಿಸಿದೆ. ವರುಣ್ ತೇಜ್ ಅವರ ಮಟ್ಕಾ ಜೊತೆಗೆ ಬಿಡುಗಡೆಯಾಗಿರುವ ಕಂಗುವ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶ ಕಂಡಿದೆ.

ಮೇಕಿಂಗ್​​ ಮತ್ತು ಸ್ಟಾರ್ ಕಾಸ್ಟ್ ಪವರ್​​ನಿಂದಾಗಿ ವಿಶೇಷವಾಗಿ ಗಮನ ಸೆಳೆದಿದೆ. ಅದಾಗ್ಯೂ, ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್​ ಸುತ್ತಲಿನ ಮಾತುಗಳು, ಆರಂಭಿಕವಾಗಿ ಸಿನಿಮಾ ಭರವಸೆ ಮೂಡಿಸಿದ್ದರೂ ಕೂಡಾ ಆ ವೇಗವನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಸೂಚಿಸಿದೆ.

'ಕಂಗುವ' ಬಾಕ್ಸ್​ ಆಫೀಸ್​ ಕಲೆಕ್ಷನ್​: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಕಂಗುವ ಬಾಕ್ಸ್​ ಆಫೀಸ್​ನಲ್ಲಿ ಅತ್ಯುತ್ತಮ ಆರಂಭವನ್ನು ಹೊಂದಿತ್ತು. ತನ್ನ ಮೊದಲ ದಿನ ಬರೋಬ್ಬರಿ 24 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಹೆಚ್ಚಿನವರ ಗಮನ ಸೆಳೆದಿತ್ತು. ಅದಾಗ್ಯೂ, ಸಿನಿಮಾ ತನ್ನ ಎರಡನೇ ದಿನದ ಗಳಿಕೆಯಲ್ಲಿ ಕುಸಿತ ಕಂಡಿದೆ. ತೋರಿಸಿದೆ.

ಆರಂಭಿಕ ಅಂದಾಜಿನ ಪ್ರಕಾರ, ಚಿತ್ರ ಬಿಡುಗಡೆಯಾದ 2ನೇ ದಿನದಂದು ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಸುಮಾರು 9 ಕೋಟಿ ರೂ. (ನೆಟ್ ಕಲೆಕ್ಷನ್​) ಗಳಿಸಿದೆ. ಈ ಮೂಲಕ ಎರಡು ಸಿನಗಳಲ್ಲಿ 33 ಕೋಟಿ ರೂ. ಗಳಿಸಿದೆ. ಪ್ರಸ್ತುತ ಟ್ರೆಂಡ್​ ಗಮನಿಸಿದ್ರೆ, ಚಿತ್ರ ನಿರ್ಣಾಯಕ ವಾರಾಂತ್ಯವನ್ನು ಎದುರಿಸುತ್ತಿದೆ. ಸ್ಪರ್ಧೆಯ ಕಾವು ಏರಿದೆ. ವಾರಾಂತ್ಯದ ನಂತರ, ಹೊಸ ಸಿನಿಮಾಗಳು ಬಿಡುಗಡೆ ಆಗುವುದರಿಂದ ಮತ್ತು ಪ್ರಸ್ತುತ ನಡೆಯುತ್ತಿರುವ ಪೈಪೋಟಿಯಿಂದಾಗಿ ಕಂಗುವ ಬಾಕ್ಸ್​​ ಆಫೀಸ್​ನಲ್ಲಿ ಸವಾಲುಗಳನ್ನು ಎದುರಿಸುವ ಕಳವಳಗಳಿದ್ದು, ತನ್ನ ಉಳಿಯುವಿಕೆಗೆ ಈ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್​ ಮಾಡುವ ಸಾಧ್ಯತೆಯಿದೆ.

ಎರಡನೇ ದಿನ, ತಮಿಳು ಮಾತನಾಡುವ ಪ್ರದೇಶಗಳಲ್ಲಿ ಆಕ್ಯುಪೆನ್ಸಿ ಸುಮಾರು ಶೇ.16.27ರಷ್ಟಿತ್ತು. ಅಮರನ್‌ನಂತಹ ಸಿನಿಮಾಗಳಿಂದ ಚಿತ್ರ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆಗಳಿವೆ. ವಾರದ ದಿನಗಳಲ್ಲಿ ಕಲೆಕ್ಷನ್​​ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು.

ಇದನ್ನೂ ಓದಿ: 'ಭೈರತಿ ರಣಗಲ್​​' ಅತ್ಯುತ್ತಮ ಪ್ರದರ್ಶನ: ಮೊದಲ ದಿನ ಬಾಕ್ಸ್​​ ಆಫೀಸ್​ನಲ್ಲಿ ಗಳಿಸಿದ್ದಿಷ್ಟು

ಆರಂಭಿಕ ಅಡೆತಡೆಗಳ ಹೊರತಾಗಿಯೂ, ಕಂಗುವ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರವು ತನ್ನ ಮೊದಲ ದಿನದಂದು ವಿಶ್ವಾದ್ಯಂತ 58.60 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಲನಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

'ಕಂಗುವ' ಸಿನಿಮಾಗೆ ಶಿವ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಬಾಲಿವುಡ್ ತಾರೆಯರಾದ ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಅವರಿಗಿದು ಚೊಚ್ಚಲ ತಮಿಳು ಚಿತ್ರ. ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ ಮತ್ತು ಕೆಎಸ್ ರವಿಕುಮಾರ್ ಅವರಂತಹ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.