ETV Bharat / snippets

ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಪಂಚಾಯಿತಿ ಮುಂದೆ ಶವವಿಟ್ಟ ಗ್ರಾಮಸ್ಥರು!

ಗ್ರಾಮ ಪಂಚಾಯಿತಿ
ಗ್ರಾಮ ಪಂಚಾಯಿತಿ (ETV Bharat)
author img

By ETV Bharat Karnataka Team

Published : Nov 1, 2024, 3:44 PM IST

ಚಿಕ್ಕಮಗಳೂರು: ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮ ಪಂಚಾಯಿತಿ ಮುಂದೆ ಗ್ರಾಮಸ್ಥರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ 1200 ಮನೆಗಳಿವೆ. ಆದರೆ, ಅಂತ್ಯಸಂಸ್ಕಾರ ನೆರವೇರಿಸಲು ಗ್ರಾಮದಲ್ಲಿ ಸ್ಮಶಾನವೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ವಯೋಸಹಜ ಕಾಯಿಲೆಯಿಂದ ಮೃತಪಟ್ಟ ರಂಗನಾಥ್ (75) ಎಂಬುವರ ಶವವನ್ನು ಪಂಚಾಯಿತಿ ಮುಂದೆ ಇಡಲಾಗಿತ್ತು. ಇಕ್ಕಟ್ಟಿಗೆ ಸಿಲುಕಿದ್ದ ಅಧಿಕಾರಿಗಳು, ಮನವೊಲಿಸುವ ಪ್ರಯತ್ನ ನಡೆಸಿದರು.

ಸ್ಮಶಾನದ ಜಾಗವಿದೆ. ಆದರೆ, ಒತ್ತುವರಿ ಮಾಡಲಾಗಿದೆ. ಕಳೆದ 50 ವರ್ಷಗಳಿಂದಲೂ ಸ್ಮಶಾನವಿಲ್ಲದೇ ಇಲ್ಲಿನ ಜನರು ಕಷ್ಟ ಪಡುತ್ತಿದ್ದಾರೆ. ಈವರೆಗೂ ಮೃತರನ್ನು ಆಯಾ ಮನೆಯವರು ತಮ್ಮ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಆದರೆ, ಮೃತ ರಂಗನಾಥ್ ಗ್ರಾಮಸ್ಥರಾದರೂ ಮನೆಯವರು ಇಲ್ಲ, ಸ್ವಂತ ಜಾಗವೂ ಇಲ್ಲ. ಹೀಗಾಗಿ ಗ್ರಾಮಸ್ಥರೇ ಅಂತ್ಯ ಸಂಸ್ಕಾರಕ್ಕೆ ಮುಂದಾದರೂ ಅಂತ್ಯಸಂಸ್ಕಾರ ನಡೆಸಲು ಜಾಗವಿಲ್ಲ. ಹತ್ತಾರು ಬಾರಿ ಗ್ರಾಪಂ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.