ETV Bharat / snippets

ಬೆಂಗಳೂರು: ಈಶಾನ್ಯ ವಿಭಾಗದ ರೌಡಿ ಶೀಟರ್ಸ್ ನಿವಾಸಗಳ ಮೇಲೆ ಪೊಲೀಸರ ದಾಳಿ, ಪರಿಶೀಲನೆ

author img

By ETV Bharat Karnataka Team

Published : Aug 27, 2024, 1:24 PM IST

POLICE RAIDS ON ROWDY SHEETERS
ರೌಡಿ ಶೀಟರ್ಸ್ ಮನೆಗಳ ಮೇಲೆ ಪೊಲೀಸರ ದಾಳಿ (ETV Bharat)

ಬೆಂಗಳೂರು : ಈಶಾನ್ಯ ವಿಭಾಗದ ರೌಡಿಶೀಟರ್​ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಗ್ಗೆ 5ರ ಸುಮಾರಿಗೆ ಏಕಕಾಲಕ್ಕೆ ಯಲಹಂಕ, ಕೊಡಿಗೇಹಳ್ಳಿ, ಅಮೃತಹಳ್ಳಿ, ವಿದ್ಯಾರಣ್ಯಪುರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

ಅಪರಾಧ ಹಿನ್ನೆಲೆ ಹೊಂದಿರುವವರ ಪ್ರಸ್ತುತ ವಾಸಸ್ಥಳ, ವಿಳಾಸ, ಆದಾಯದ ಮೂಲ ಮತ್ತಿತರ ಮಾಹಿತಿಗಳನ್ನ ಕಲೆ ಹಾಕಲಾಗಿದೆ. ಇದೇ ವೇಳೆ, ಆ್ಯಕ್ಟಿವ್ ಇರುವ ಕೆಲ ರೌಡಿಶೀಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ, ಕೆಲವು ರೌಡಿಶೀಟರ್​ಗಳ‌ ಮನೆಯಲ್ಲಿ ಮಾರಕಾಸ್ತ್ರಗಳು ಸಹ ಪತ್ತೆಯಾಗಿವೆ. ಸದ್ಯ ತಪಾಸಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ವಿಶೇಷ ಆತಿಥ್ಯ ಪ್ರಕರಣ: ಮೂರು ಪ್ರತ್ಯೇಕ ತನಿಖಾ ತಂಡ ರಚನೆ - darshan viral photo in jail

ETV Bharat Logo

Copyright © 2024 Ushodaya Enterprises Pvt. Ltd., All Rights Reserved.