ETV Bharat / snippets

ಕಲಬುರಗಿ: ಪೊಲೀಸ್ ಹೆಡ್ ಕಾನ್ಸ್​ಟೆಬಲ್ ಆತ್ಮಹತ್ಯೆ

author img

By ETV Bharat Karnataka Team

Published : Jun 23, 2024, 2:12 PM IST

constable
ದೊಡ್ಡೇಶ್ ಬಾರಿಗಿಡ (ETV Bharat)

ಕಲಬುರಗಿ: ನಗರದ ಉದನೂರ ರಸ್ತೆಯ ಬಿರ್ಲಾ ಸ್ಕೂಲ್ ಹತ್ತಿರದ ಜಮೀನಿನಲ್ಲಿ ಪೊಲೀಸ್ ಹೆಡ್ ಕಾನ್ಸ್​ಟೆಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಬೂಳ​ ಠಾಣೆ ಹೆಡ್ ಕಾನ್ಸ್​ಟೆಬಲ್ ದೊಡ್ಡೇಶ್ ಬಾರಿಗಿಡ(40) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಜೇವರ್ಗಿಯವರಾದ ದೊಡ್ಡೇಶ್, ಕಲಬುರಗಿಯ ಮಾಣಿಕಪ್ರಭು ಕಾಲೊನಿಯಲ್ಲಿ ವಾಸವಿದ್ದರು.

ಭಾನುವಾರ ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ವಿಶ್ವವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು: ನೀರಿನ ನಳಕ್ಕೆ ಮೋಟಾರ್ ಹಚ್ಚುತ್ತಿದ್ದಾಗ ವಿದ್ಯುತ್ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ನಗರದ ಬಿದ್ದಾಪುರ ಕಾಲೋನಿಯಲ್ಲಿ ನಡೆದಿದೆ. ಭೀಮಾಶಂಕರ (13) ಮೃತಪಟ್ಟ ಬಾಲಕ. ಬಾಲಕನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಶೋಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಬಿದ್ದಾಪುರ ಕಾಲೊನಿ ಜನರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.