ಧಾರವಾಡ: ಅವಳಿನಗರದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದು, 11 ಜನ ಮಾದಕ ವಸ್ತುಗಳ ಮಾರಾಟಗಾರರನ್ನು ಖಾಕಿಪಡೆ ವಶಕ್ಕೆ ಪಡೆದುಕೊಂಡಿದೆ. ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದವರ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಹಮ್ಮದ ಆಲಿ, ದಾದಾಪೀಠ ಹಂಚಿನಮನಿ, ಪರಮೇಶ್ವರ ರೇವಡಿಹಾಳ, ಬಾಬಾಜಾನ ಮೆಹಬೂಬಸಾಬ, ಅಬುಜರ ಬಾಗರ, ಜಾಫರ ರಾಜಾಹುಸೇನ ಇರಾನಿ, ಸಾಧಿಕ್ ಬಾಬಾಹುಸೇನ್ ರಜಾಹುಸೇನ್, ಆಫ್ರಾಬ ಜೀವನಸಾಬ್, ಸಲ್ಮಾನ್ ಕಾಕರ್, ಮಹಮ್ಮದ್ ಆಸೀಫ್, ಸಚ್ಚಾದ ಸಯ್ಯದ್ ಬಂಧಿತರು. ಬಂಧಿತರಿಂದ 1 ಕೆ.ಜಿ. 398 ಗ್ರಾಂ ಗಾಂಜಾ ಜೊತೆಗೆ ಒಂದೂವರೆ ಲಕ್ಷ ಮೌಲ್ಯದ 14 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅವಳಿನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಕ್ರಮ ಕೈಗೊಂಡು ಮಾದಕ ವಸ್ತುಗಳ ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದ್ದು, ಧಾರವಾಡ ಮೂಲದ ಒಟ್ಟು 11 ಮಂದಿ ಬಂಧಿತರಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನಿಸಿದ ಯುವಕನ ಹತ್ಯೆ