ETV Bharat / snippets

ಕದ್ರಿ ದೇವಸ್ಥಾನದಲ್ಲಿ ಅಣ್ಣಪ್ಪ ದೈವದ ಕಡ್ತಲೆ ಹಿಡಿದು ಯುವಕನ ಹುಚ್ಚಾಟ

author img

By ETV Bharat Karnataka Team

Published : Jul 10, 2024, 10:26 AM IST

ಕದ್ರಿ ದೇವಸ್ಥಾನದಲ್ಲಿ ವ್ಯಕ್ತಿಯಿಂದ ದಾಂಧಲೆ
ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ (ETV Bharat)

ಮಂಗಳೂರು: ನಗರದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ ಯುವಕನೋರ್ವ ದಾಂಧಲೆ ನಡೆಸಿದ್ದಲ್ಲದೆ, ಅಣ್ಣಪ್ಪ ದೈವದ ಕಡ್ತಲೆ (ಆಯುಧ) ಹಿಡಿದು ಹುಚ್ಚಾಟ ನಡೆಸಿದ್ದಾನೆ. ಉಳ್ಳಾಲ ನಿವಾಸಿ ದಿವಾಕರ ಆಚಾರ್ಯ ಎಂಬಾತ (35) ಈ ಕೃತ್ಯ ಎಸಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲಿಗೆ ಈತ ಬೈಕ್​ ಚಲಾಯಿಸಿಕೊಂಡು ನೇರವಾಗಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿ, ದೇವಸ್ಥಾನದೊಳಗೆ ರಂಪ ನಡೆಸಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂಭಾಗಕ್ಕೆ ತೆರಳಿ ಕಾಲಿನಿಂದ ಬಾಗಿಲನ್ನು ಒದ್ದು, ದೈವದ ಕಡ್ತಲೆಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಅರ್ಚಕರ ಮೇಲೂ ಹಲ್ಲೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಸ್ಥಳದಲ್ಲಿದ್ದವರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ‌. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆರೋಪಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಾಸನ: ಮನೆ ಕಳ್ಳತನಕ್ಕೆ ಬಂದ ದುಷ್ಕರ್ಮಿಗಳಿಂದ ಮಹಿಳೆಯ ಕೊಲೆ ಯತ್ನ - Hassan Robbery Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.