ETV Bharat / snippets

ಮಂಡ್ಯ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ: FDA ವಶಕ್ಕೆ

mandya tehsildar office
ತಹಶೀಲ್ದಾರ್ ಕಚೇರಿ (ETV Bharat)
author img

By ETV Bharat Karnataka Team

Published : Sep 4, 2024, 6:41 PM IST

ಮಂಡ್ಯ: ರೈತರೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಂಡ್ಯ ತಹಶೀಲ್ದಾರ್ ಕಚೇರಿಯ ಭೂಮಿ ಶಾಖೆ ವಿಭಾಗದ ಎಫ್​ಡಿಎ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪಿ ತಿಪ್ಪೇಸ್ವಾಮಿ ಎಂಬವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.

ಮರಕಾಡುದೊಡ್ಡಿ ಗ್ರಾಮದ ರೈತ ಮೋಹನ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಿಪಿಐ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎಫ್​ಡಿಎಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಕಚೇರಿಗೆ ಕರೆದೊಯ್ದ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಪ್ರತ್ಯೇಕ ಪ್ರಕರಣ: ಲೇಔಟ್​ಗೆ ಕೇಬಲ್ ಹಾಕಲು ವಿದ್ಯುತ್​ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ದೇವನಹಳ್ಳಿಯ ಕುಂದಾಣ ಗ್ರಾಪಂ ಪಿಡಿಒ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ. ಪಿಡಿಒ ಪದ್ಮನಾಭ, ಕೇಬಲ್​ ಅಳವಡಿಸಲು ಎನ್‌ಒಸಿಗೆ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ​​ ಗುತ್ತಿಗೆದಾರ ಮಲ್ಲಿಕಾರ್ಜುನ್ ಲೋಕಾಯಕ್ತರಿಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಜಮೀನು ವ್ಯವಹಾರದಲ್ಲಿ ಜೀವ ಬೆದರಿಕೆ ಆರೋಪ: ನಟೋರಿಯಸ್​ ರೌಡಿ ಬಚ್ಚಾಖಾನ್ ಸೇರಿ 8 ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.