ETV Bharat / snippets

ಚಾಲಕ ಕಂ ನಿರ್ವಾಹಕ ಹುದ್ದೆಗೆ ನೇಮಕಾತಿ ; ಮೂಲ ದಾಖಲಾತಿ ಪರಿಶೀಲನೆಗೆ ಕಡೆಯ ಅವಕಾಶ ನೀಡಿದ ಕೆಎಸ್ಆರ್​ಟಿಸಿ

author img

By ETV Bharat Karnataka Team

Published : Jul 8, 2024, 8:20 PM IST

ksrtc
ಕೆಎಸ್ಆರ್​ಟಿಸಿ (ETV Bharat)

ಬೆಂಗಳೂರು : ಕೆಎಸ್ಆರ್​ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ಕಡೆಯ ಅವಕಾಶ ನೀಡಲಾಗಿದ್ದು, ಜುಲೈ 13ರ ಒಳಗೆ ಪರಿಶೀಲನಾ ಕಾರ್ಯ ಮುಗಿಸಿಕೊಳ್ಳಬೇಕು ಎಂದು ಕೆಎಸ್ಆರ್​ಟಿಸಿ ಸೂಚಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್ಆರ್​ಟಿಸಿ ಚಾಲಕ ಕಂ ನಿರ್ವಾಹಕ ಹುದ್ದೆಯ ಆಯ್ಕೆ ಸಮಿತಿ ಅಧ್ಯಕ್ಷರು, ಮೂಲ ದಾಖಲಾತಿ, ದೇಹದಾರ್ಢ್ಯತೆ ಪರಿಶೀಲನೆಯನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಸಲಾಗುತ್ತಿದೆ.

ಮೂಲ ದಾಖಲಾತಿ ಪರಿಶೀಲನೆಯು ಜುಲೈ 13 ಕ್ಕೆ ಮುಕ್ತಾಯಗೊಳ್ಳಲಿದ್ದು, ಅರ್ಜಿ ಸಲ್ಲಿಸಿರುವ ಹಾಗೂ ಇದುವರೆಗೂ ದಾಖಲಾತಿ ಪರಿಶೀಲನೆಗೆ ಗೈರುಹಾಜರಾದ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್​ಸೈಟ್ ksrtcjobs.karnataka.gov.in ರಿಂದ ಅಂತಿಮ ಕರೆಪತ್ರವನ್ನು ಡೌನ್​ಲೋಡ್ ಮಾಡಿಕೊಂಡು, ಅಗತ್ಯ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಅಥವಾ ಜುಲೈ 13ರ ಒಳಗಾಗಿ ತಪ್ಪದೇ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ಐಟಿಬಿಪಿಯಲ್ಲಿ ಹೆಡ್​ ಕಾನ್ಸ್​ಟೇಬಲ್ ಹುದ್ದೆ ಭರ್ತಿಗೆ ಅಧಿಸೂಚನೆ - ITBP Recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.