ಕಾರವಾರ: ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಗೋಪಿಶಿಟ್ಟಾ ಅರಣ್ಯ ವ್ಯಾಪ್ತಿಯ ಜರಡಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ರಾತ್ರಿ ವೇಳೆ ರಮೇಶ ಗೋವೆಕರ ಅವರ ಬಾವಿಗೆ ಚಿರತೆ ಬಿದ್ದಿದೆ. ಬಾವಿಗೆ ಯಾವುದೇ ಕಟ್ಟೆ ಇರದ ಕಾರಣ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮನೆಯವರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಚಿರತೆಯ ಕಳೇಬರವನ್ನು ಮೇಲೆತ್ತಿದರು. ಬಳಿಕ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಮೂರು ವರ್ಷದ ಮಗು ಹೊತ್ತೊಯ್ದ ಚಿರತೆ; ಇದುವರೆಗೂ ಸಿಗದ ಸುಳಿವು! - Leopard Attack