ETV Bharat / snippets

ಹುಬ್ಬಳ್ಳಿ ಐಇಎಂಎಸ್ ​​ಎಂಬಿಎ ಮಹಾವಿದ್ಯಾಲಯದಲ್ಲಿ ನಾಳೆ ಉದ್ಯೋಗ ಮೇಳ

author img

By ETV Bharat Karnataka Team

Published : Sep 14, 2024, 7:56 PM IST

job fair
ಸಾಂದರ್ಭಿಕ ಚಿತ್ರ (ETV Bharat)

ಹುಬ್ಬಳ್ಳಿ: ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ವತಿಯಿಂದ ಸೆ.15ರಂದು ತಾರಿಹಾಳ ಕೈಗಾರಿಕಾ ಪ್ರದೇಶದ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಬೆಳಗ್ಗೆ 10.00 ರಿಂದ ಸಂಜೆ 05.00ರವರೆಗೆ ಇರಲಿದೆ.

ಮುತ್ತೂಟ್ ಫೈನಾನ್ಸ್, ಪ್ರಣಾರ್ಥ್, ಯುರೇಕಾ ಫೋರ್ಬ್ಸ್, ಗ್ರಾಮೀಣ ಕ್ರೆಡಿಟ್ ಆಕ್ಸೆಸ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ, ಪ್ರೊಫಿಸೈನ್ಟ್ ಮೈಂಡ್ಸ್ ಸೇರಿದಂತೆ ಸ್ಥಳೀಯ ಹಾಗೂ ಜಾಗತಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಪದವೀದರ ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಳ್ಳುವಂತೆ ಐಇಎಂಎಸ್ ಮಹಾವಿದ್ಯಾಲಯದ ಗೌರವಾಧ್ಯಕ್ಷ ಡಾ.ಎನ್.ಎ.ಚರಂತಿಮಠ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರೊ.ದೀಪಕ್ ಎಂ.(ಟಿಪಿಒ,8904762365), ಪ್ರೊ.ವಿಶಾಲ ಪಾಟೀಲ(8105745621), ಪ್ರೊ.ಶಕ್ತಿಯಾನಂದ ಚಿಕ್ಕೂರು(77689 55355) ಹಾಗೂ ಡಾ.ವೀರಣ್ಣರನ್ನು (ನಿರ್ದೇಶಕರು,9893676393) ಸಂಪರ್ಕಿಸಬಹುದು.

ಸೆ.15ರಂದೇ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಬೆಳಗ್ಗೆ ಎಂಬಿಎ ಆಕಾಂಕ್ಷಿಗಳಿಗಾಗಿ ಕೈಜೆನ್ ಮೆರಿಟ್ ಸ್ಕಾಲರ್‌ಶಿಪ್ ಪರೀಕ್ಷೆ (KMST-2024) ನಡೆಯುತ್ತಿದೆ. ಹೆಚ್ಚಿನ ವಿವರಗಳಿಗಾಗಿ 9886676393,9902401677,9886473975, 9036171549, 7411185810 ಸಂಪರ್ಕಿಸಿ.

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ನಿರ್ಗಮನ ದ್ವಾರದಿಂದ ಬೆಳಗ್ಗೆ 09.30ರಿಂದ ಕಾಲೇಜು ಬಸ್ ಸೌಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.