ETV Bharat / snippets

ದಾವಣಗೆರೆ: ಲಂಚ ಪಡೆಯುತ್ತಿದ್ದ ನಗರಸಭೆ ಆಯುಕ್ತ ಲೋಕಾಯುಕ್ತ ಬಲೆಗೆ

author img

By ETV Bharat Karnataka Team

Published : Jul 8, 2024, 7:56 PM IST

municipal commissioner
ನಗರಸಭೆ ಆಯುಕ್ತ (ETV Bharat)

ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಹರಿಹರ ನಗರಸಭೆ ಆಯುಕ್ತರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ನಗರಸಭೆ ಆಯುಕ್ತ ಬಸವರಾಜ್ ಐಗೂರು ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ.

ಬಸವರಾಜ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಗರಸಭೆಯ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಗ್ರಿ ಸರಬರಾಜು ‌ಗುತ್ತಿಗೆದಾರ ಕರಿಬಸಪ್ಪ ಎಂಬುವರಿಂದ 2 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ದಾವಣಗೆರೆಯ ಹರಿಹರನಗರದ ವಿದ್ಯಾನಗರದಲ್ಲಿ ವಾಸವಿದ್ದ ರೂಮಿನಲ್ಲಿ ಲಂಚ ಸ್ವೀಕರಿಸುವ ವೇಳೆ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಎಸ್​ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ. ಬಸವರಾಜ್ ಐಗೂರು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 224 ವರ್ಷಗಳ ಪಾರಂಪರಿಕ ಕಟ್ಟಡಕ್ಕೆ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಲು ಯತ್ನ: ವ್ಯಕ್ತಿ ಬಂಧನ - fake document case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.