ETV Bharat / snippets

ನೆಲಮಂಗಲ: ಟ್ರ್ಯಾಕ್ಟರ್​ನಿಂದ ರೋಟರಿ ಟಿಲ್ಲರ್​ಗೆ ಆಯತಪ್ಪಿ ಬಿದ್ದು 4 ವರ್ಷದ ಬಾಲಕ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 20, 2024, 1:28 PM IST

ನೆಲಮಂಗಲ: ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ನಾಲ್ಕು ವರ್ಷದ ಬಾಲಕ ಆಯತಪ್ಪಿ ರೋಟರಿ ಟಿಲ್ಲರ್​​ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ಸೊಳ್ಳೆಗುಟ್ಟೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಾವಿಕೆರೆ ಗ್ರಾಮದ ರೈತ ಭರತ್ ಮತ್ತು ಚೈತ್ರಾ ದಂಪತಿಯ ನಾಲ್ಕು ವರ್ಷದ ಮಗ ನಂದನ್ ಸಾವನ್ನಪ್ಪಿದ್ದಾನೆ. ರೈತ ಭರತ್ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್​​ ಕರೆಸಿದ್ದರು. ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮೇಲೆ ತಮ್ಮ ಮಗನನ್ನ ಕುರಿಸಿದ್ದರು. ಈ ವೇಳೆ ಬಾಲಕ ಆಯತಪ್ಪಿ ಟ್ರ್ಯಾಕ್ಟರ್​​ನಿಂದ ರೋಟರಿ ಟಿಲ್ಲರ್ ಮೇಲೆ ಬಿದ್ದಿದ್ದರಿಂದ ಘಟನೆ ನಡೆದಿದೆ.

ಸ್ಥಳಕ್ಕೆ ಎಎಸ್ಪಿ ನಾಗರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್ ವಶಕ್ಕೆ ಪಡೆದು, ಚಾಲಕನಿಂದ ಮಾಹಿತಿ ಕಲೆ ಹಾಕಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೆಗಲ ಮೇಲೆ ಮಹಿಳಾ ರೋಗಿ ಹೊತ್ತೊಯ್ದ ಗ್ರಾಮಸ್ಥರು: ಖಾನಾಪುರ ಕಾಡಂಚಿನ ಅಮಗಾಂವ್​ನಲ್ಲಿ ದಯನೀಯ ಸ್ಥಿತಿ - villagers carried the patient

ETV Bharat Logo

Copyright © 2024 Ushodaya Enterprises Pvt. Ltd., All Rights Reserved.