ETV Bharat / snippets

ಮಂಡ್ಯದಲ್ಲಿ ಕೌಟುಂಬಿಕ ಕಲಹ: ದಂಪತಿ ಆತ್ಮಹತ್ಯೆಗೆ ಶರಣು

FAMILY CLASHES  COUPLE COMMITTED SUICIDE  MANDYA
ದಂಪತಿ ಆತ್ಮಹತ್ಯೆಗೆ ಶರಣು (ಕೃಪೆ: ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 5, 2024, 12:45 PM IST

ಮಂಡ್ಯ: ಕೌಟುಂಬಿಕ ಕಲಹದಿಂದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಕಿರಂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಭಾವತಿ (45) ಮತ್ತು ದಿಲೀಪ್ (45) ಎಂದು ಗುರುತಿಸಲಾಗಿದೆ.

ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಹಾಗಾಗಿ ಕಳೆದ ರಾತ್ರಿ ಪ್ರಭಾವತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಸಾವಿನಿಂದ ನೊಂದು ಬೆಳಗ್ಗೆ ಪತಿ ದಿಲೀಪ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಬುರಾಯನ ಕೊಪಲು ಬಳಿ ಜಮೀನೊಂದರಲ್ಲಿ ದಿಲೀಪ್​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿ, ಪರಿಶೀಲನೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಓದಿ: ಚಿಕ್ಕೋಡಿ: ಮತ ಎಣಿಕೆ ವೇಳೆ ಪಾಕ್​​ ಪರ ಘೋಷಣೆ ಆರೋಪ, ಆರೋಪಿ ಬಂಧನ: ಸಚಿವ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ - Pro Pak slogan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.