29 ವರ್ಷಗಳ ವೈವಾಹಿಕ ಜೀವನಕ್ಕೆ ಎ.ಆರ್.ರೆಹಮಾನ್ ಹಾಗೂ ಸೈರಾ ಬಾನು ಅಂತ್ಯವಿರಾಮ ಇಟ್ಟಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಅಭಿಮಾನಿಗಳು ಶಾಕ್ನಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಮನರಂಜನಾ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆಗಳಿಂದಾಗಿ ಸಾಕಷ್ಟು ಪ್ರಸಿದ್ಧಿ ಗಳಿಸಿದ್ದಾರೆ. ಇದೀಗ ಅವರ ವೈಯಕ್ತಿಕ ಬದುಕಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಎ.ಆರ್.ರೆಹಮಾನ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ದಂಪತಿ ತಮ್ಮ 'ಗ್ರ್ಯಾಂಡ್ 30'ಯನ್ನು ಸಂಭ್ರಮಾಚರಿಸಲು ಆಶಿಸಿದ್ದರು. ಆದ್ರೆ ಅನಿರೀಕ್ಷಿತ, ನೋವಿನ ಅಂತ್ಯವನ್ನು ಎದುರಿಸಿರುವುದಾಗಿ ಬಹಿರಂಗಪಡಿಸಿದರು. ಪೋಸ್ಟ್‌ನಲ್ಲಿ ಕಠಿಣ ಸಂದರ್ಭದಲ್ಲಿ 'ಗೌಪ್ಯತೆ'ಗಾಗಿ ವಿನಂತಿಸಿದ್ದು, ಅವರ ಪ್ರತ್ಯೇಕತೆಯ ದುಃಖವನ್ನೂ ತಿಳಿಸಿದೆ. ಆದಾಗ್ಯೂ, ಇದು ನೆಟಿಜನ್‌ಗಳಿಗೆ ಚರ್ಚೆಯ ವಿಷಯವಾಗಿದೆ.
“We had hoped to reach the grand thirty, but all things, it seems, carry an unseen end. Even the throne of God might tremble at the weight of broken hearts. Yet, in this shattering, we seek meaning, though the pieces may not find their place again. To our friends, thank you for…
— A.R.Rahman (@arrahman) November 19, 2024
ರೆಹಮಾನ್ ಅವರ ಪೋಸ್ಟ್‌ನಲ್ಲಿ, "ನಾವು ಗ್ರ್ಯಾಂಡ್ ತರ್ಟಿ (29 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ) ತಲುಪಲು ಆಶಿಸಿದ್ದೆವು. ಆದ್ರೆ ಇದು ಅಂತ್ಯ ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರದಲ್ಲಿ ದೇವರ ಸಿಂಹಾಸನವೂ (ಗದ್ದುಗೆ) ಸಹ ನಡುಗಬಹುದು. ಇಂಥ ಪರಿಸ್ಥಿತಿಯಲ್ಲೂ ಅರ್ಥ ಹುಡುಕುವ ಪ್ರಯತ್ನ ನಮ್ಮದು. ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಮ್ಮ ಸ್ನೇಹಿತರಿಗೆ ಧನ್ಯವಾದಗಳು. #arrsairaabreakup ಎಂದು ಬರೆದುಕೊಂಡಿದ್ದಾರೆ. ಗಾಯಕನ ಬರಹ ಬಹಳ ಭಾವನಾತ್ಮಕವಾಗಿದ್ದರೂ, ಇಂಥ ವೈಯಕ್ತಿಕ ಕ್ಷಣದಲ್ಲಿ ಹ್ಯಾಶ್‌ಟ್ಯಾಗ್ (''#arrsairaabreakup") ಅನ್ನು ಸೇರಿಸಿರುವುದು ಆನ್‌ಲೈನ್ ಗದ್ದಲಕ್ಕೆ ಕಾರಣವಾಗಿದೆ.
Now your followers are expected to trend this hashtag? 🤔
— Blazzing Bud ✨ (@NishthurStree) November 19, 2024
ಈ ಪೋಸ್ಟ್‌ಗೆ ಹೆಚ್ಚಿನ ಸಂಖ್ಯೆಯ ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇಂಥ ವಿಷಾದಕರ ಸಂದರ್ಭದಲ್ಲಿ ಗಣ್ಯ ವ್ಯಕ್ತಿ ಹ್ಯಾಶ್‌ಟ್ಯಾಗ್ ಅನ್ನು ಏಕೆ ಬಳಸಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ 'X'ನ ಓರ್ವ ಬಳಕೆದಾರರು ಪ್ರತಿಕ್ರಿಯಿಸಿ, "ಇಂಥ ಪರಿಸ್ಥಿತಿಗಾಗಿ ಹ್ಯಾಶ್‌ಟ್ಯಾಗ್ ಅನ್ನು ಯಾರು ರಚಿಸುತ್ತಾರೆ? ಫೈರ್ ಯುವರ್ ಅಡ್ಮಿನ್, ಥಲೈವಾ ಎಂದು ಬರೆದಿದ್ದಾರೆ. ಇತರರು AI ಒಳಗೊಳ್ಳುವಿಕೆಯ ಬಗ್ಗೆ ಊಹಿಸಿದ್ದಾರೆ.
ChatGPT and Hashtag ? admin 🤷🏻♂️
— Kars (@Kars0211) November 19, 2024
''ಸದ್ಯ ನಿಮ್ಮ ಫಾಲೋವರ್ಗಳು ಈ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುವ ನಿರೀಕ್ಷೆಯಿದೆಯೇ?'' ಎಂದು ಕೇಳಿದ್ದಾರೆ. ಇನ್ನೂ ಹಲವರು ತಮ್ಮ ನಿರಾಶೆ ವ್ಯಕ್ತಪಡಿಸಿ, ಹ್ಯಾಶ್‌ಟ್ಯಾಗ್ ಡಿಲೀಟ್ ಮಾಡಲು ಸೂಚಿಸಿದ್ದಾರೆ.
ಇದನ್ನೂ ಓದಿ: ಎ ಆರ್ ರೆಹಮಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಸೈರಾ ಬಾನು: 29 ವರ್ಷಗಳ ದಾಂಪತ್ಯ ಅಂತ್ಯ
ನಿನ್ನೆ, ನವೆಂಬರ್ 19ರಂದು ಸೈರಾ ಬಾನು ಅವರ ವಕೀಲರಾದ ವಂದನಾ ಷಾ ಅವರು ಡಿವೊರ್ಸ್ ನಿರ್ಧಾರವನ್ನು ದೃಢೀಕರಿಸುವ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು. ಹೇಳಿಕೆಯ ಪ್ರಕಾರ, ಸೈರಾ ತಮ್ಮ ವಿಚ್ಛೇದನಕ್ಕೆ 'ಭಾವನಾತ್ಮಕ ಒತ್ತಡ'ವನ್ನು ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಿದ್ದಾರೆ, ಇದು ಅವರ ನಡುವೆ "ಅಂತರ" ಸೃಷ್ಟಿಸಿದೆ. ಪರಸ್ಪರ ಪ್ರೀತಿ ಹೊಂದಿದ್ದರೂ, ಅವರ ಸಂಬಂಧದಲ್ಲಿ ಬೆಳೆಯುತ್ತಿರುವ ಅಂತರವನ್ನು ಕಡಿಮೆ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಸೈರಾ ಅವರ ಈ ನಿರ್ಧಾರವು "ನೋವು ಮತ್ತು ಸಂಕಟ" ದಿಂದ ಬಂದಿದೆ ಎಂದು ತಿಳಿಸಿದೆ. ಜೊತೆಗೆ, ಗೌಪ್ಯತೆಯನ್ನು ಕೋರಿದ್ದಾರೆ.
ಇದನ್ನೂ ಓದಿ: 'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ ಹೇಳಿದ್ದಿಷ್ಟು
1995 ರಲ್ಲಿ ಸೈರಾ ಮತ್ತು ರೆಹಮಾನ್ ದಾಂಪತ್ಯ ಜೀವನ ಆರಂಭಿಸಿದ್ದರು. ಇವರಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಗಾಯಕಿಯಾಗಿರುವ ಅಮೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಕೇಳಿಕೊಂಡಿದ್ದಾರೆ. "ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಎಲ್ಲರಲ್ಲೂ ವಿನಂತಿಸುತ್ತೇವೆ. ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.