ETV Bharat / snippets

ಬೆಳಗಾವಿ ಬೆಂಕಿ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ 18 ಲಕ್ಷ ರೂ. ಪರಿಹಾರ ನೀಡಿದ ಕಾರ್ಖಾನೆ ಮಾಲೀಕ

author img

By ETV Bharat Karnataka Team

Published : Aug 10, 2024, 8:30 PM IST

ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ
ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ (ETV Bharat)

ಬೆಳಗಾವಿ: ಬೆಳಗಾವಿಯ ಸ್ನೇಹಂ ಕಾರ್ಖಾನೆ ಅಗ್ನಿ ದುರಂತದಲ್ಲಿ ಮೃತ ಕಾರ್ಮಿಕನ ಕುಟುಂಬಕ್ಕೆ ಕಾರ್ಖಾನೆ ಮಾಲೀಕ 18 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ.

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಟೇಪಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮಾರ್ಕಂಡೇಯ ನಗರದ ಯಲಗೊಂಡ ಸಣ್ಣಯಲ್ಲಪ್ಪ ಗುಂಡ್ಯಾಗೋಳ(20) ಸುಟ್ಟು ಕರಕಲಾಗಿದ್ದರು.

ಇಂದು ಕಾರ್ಖಾನೆ ಮಾಲೀಕ ಅನೀಷ್ ಮೇತ್ರಾಣಿ ಅವರು ಮಾರ್ಕಂಡೇಯ ನಗರದಲ್ಲಿರುವ ಮೃತ ಕಾರ್ಮಿಕ ಯಲಗೊಂಡ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು‌. ಬಳಿಕ ಯಲಗೊಂಡ ತಂದೆ ಸಣ್ಣ ಯಲ್ಲಪ್ಪ ಮತ್ತು ಸಹೋದರಿಯರ ಕೈಗೆ 9 ಲಕ್ಷ ರೂಪಾಯಿಗಳ ಎರಡು ಚೆಕ್​​ಗಳನ್ನು ವಿತರಿಸಿದರು.

ಇದನ್ನೂ ಓದಿ: ಬೆಳಗಾವಿ ಬೆಂಕಿ ದುರಂತ ಸ್ಥಳಕ್ಕೆ ಸಚಿವ​ ಜಾರಕಿಹೊಳಿ ಭೇಟಿ: ಮೃತ ಯುವಕ‌ನ ಕುಟುಂಬಕ್ಕೆ ಪರಿಹಾರ ವಿತರಣೆಗೆ ಸೂಚನೆ - Belagavi fire accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.