ETV Bharat / sports

ಪಾಲಾಶ್​​ ಜೊತೆ ಸ್ಮೃತಿ ಮಂಧಾನ ಪ್ರೀತಿ; ಹೇಗೆ ಹುಟ್ಟಿತು ಗೊತ್ತಾ ಈ ಲವ್​​ ಕಹಾನಿ? - SMRITI MANDHANA LOVE STORY

ಕ್ರೀಡಾ ಜಗತ್ತಿನ ಹೊರತಾಗಿ ಅನೇಕ ಬಾರಿ ತಮ್ಮ ಬಾಯ್​ಫ್ರೆಂಡ್​ ಕಾರಣಕ್ಕಾಗಿಯೂ ಸ್ಮೃತಿ ಮಂಧಾನ ಸುದ್ದಿಯಾಗುತ್ತಾರೆ.

smriti-mandhana-love-story-know-who-is-her-boyfriend-palash-muchhal
ಸ್ಮೃತಿ ಮಂಧಾನ (ಎಎನ್​ಐ)
author img

By ETV Bharat Karnataka Team

Published : Nov 5, 2024, 5:15 PM IST

ನವದೆಹಲಿ: ಸ್ಮೃತಿ ಮಂಧಾನ ಎಂಬ ಒಂದು ಹೆಸರು ಕೇಳಿದರೆ ಸಾಕು ಲಕ್ಷಾಂತರ ಜನರ ಹೃದಯದ ಹಾರ್ಟ್​ಬೀಟ್​ ಜೋರಾಗುತ್ತದೆ. ಈ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿಗೆ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವೇ ಇದೆ. ಮೈದಾನದಲ್ಲಿ ನಿಂತು ಫೋರ್​, ಸಿಕ್ಸ್​ ಬೀಸುವ ಅವರ ಸ್ಟೈಲ್​ ಮೋಡಿಗೆ ಸರಿಸಾಟಿಯಿಲ್ಲ ಬಿಡಿ. ಮಹಿಳಾ ಕ್ರಿಕೆಟ್​​ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತದ ಮೊದಲ ಕೀಡಾಪಟು​​ ಕೂಡಾ ಇವರಾಗಿದ್ದಾರೆ.

ಸ್ಮೃತಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರಿಗೆ ಹೆಚ್ಚಿನ ಲೈಕ್ಸ್​​ ಮತ್ತು ಕಮೆಂಟ್ಸ್​ಗಳು ಸಿಗುತ್ತದೆ. ಇವರ ಅನೇಕ ಅಭಿಮಾನಿಗಳಲ್ಲಿ ಇವರ ಬಾಯ್​ಫ್ರೆಂಡ್​ ಬಗ್ಗೆ ಸಣ್ಣ ಅಸೂಯೆ ಕೂಡ ಇದೆ. ಅಷ್ಟಕ್ಕೂ ಸ್ಮೃತಿ ಮಂಧಾನ ಗೆಳೆಯ ಯಾರ ಎಂಬ ಕುತೂಹಲ ಅನೇಕರಲ್ಲಿದೆ.

ಸ್ಮೃತಿ ಗೆಳೆಯ ಯಾರು? : ಕ್ರೀಡಾ ಜಗತ್ತಿನ ಹೊರತಾಗಿ ಅನೇಕ ಬಾರಿ ತಮ್ಮ ಬಾಯ್​ಫ್ರೆಂಡ್​ ಕಾರಣಕ್ಕಾಗಿಯೂ ಸ್ಮೃತಿ ಸುದ್ದಿಯಾಗುತ್ತಾರೆ. ಸ್ಮೃತಿ ಗೆಳೆಯನ ಹೆಸರು ಪಾಲಾಶ್​ ಮುಚ್ಚಲ್​. 29 ವರ್ಷದ ಪಾಲಾಶ್​​ ಸಂಗೀತಗಾರನಾಗಿ ಗುರುತಿಸಿಕೊಂಡಿದ್ದು, ಬಾಲಿವುಡ್​ನಲ್ಲಿ ಸಂಗೀತ ಸಂಯೋಜನೆ, ರೈಟರ್​, ಫಿಲ್ಮ್​ ಮೇಕರ್​ ಆಗಿ ಗುರುತಿಸಿಕೊಂಡಿದ್ದಾರೆ.

ಪಾಲಾಶ್​ ಮತ್ತು ಸ್ಮೃತಿ ನಡುವೆ ಅಂತಹ ವಯಸ್ಸಿನ ಅಂತರವೇನಿಲ್ಲ. ಇಬ್ಬರ ನಡುವಿರುವುದು ಕೇವಲ ಎರಡು ವರ್ಷದ ವ್ಯತ್ಯಾಸ. ಪಾಲಾಶ್​ ಸಹೋದರಿ ಪಾಲಾಕ್​ ಮುಚ್ಚಲ್​ ಕೂಡ ಬಾಲಿವುಡ್​​ನಲ್ಲಿ ಅನೇಕರ ಹಾಡಿಗೆ ಧ್ವನಿಯಾಗಿದ್ದಾರೆ. ಪಾಲಾಶ್​ ಸಂಗೀತ ಹೊರತಾಗಿ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದು, ಅವರ ಕಾಮ್​ ಚಾಲು ಹೈ ಚಿತ್ರ 2024ರಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ರಾಜ್ಫಾಲ್​ ಯಾದವ್​ ಮತ್ತು ಜಿಯಾ ಮನೆಕ್​ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.

ಪ್ರೀತಿ ಶುರುವಾಗಿದ್ದು ಹೇಗೆ?: ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಾಲಾಶ್ ಮತ್ತು ಸ್ಮೃತಿ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರು. ಬಳಿಕ ಸ್ನೇಹಿತರಾದರು. ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಜುಲೈ 18ರಂದು ಸ್ಮೃತಿ ಹುಟ್ಟುಹಬ್ಬದ ದಿನದಂದು ಪಾಲಾಶ್​ ನನ್ನ ಸುಂದರ ಹುಡುಗಿಗೆ ಹುಟ್ಟು ಹಬ್ಬದ ಶುಭಾಶಯ, ನೀನೇ ನನಗೆ ಎಲ್ಲಾ. ನಿನ್ನ ಹೊರತಾಗಿ ಜೀವನ ಕಲ್ಪಿಸಿಕೊಳ್ಳುವುದು ಅಸಾಧ್ಯ ಎನ್ನುವ ಮೂಲಕ ಇಬ್ಬರು ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯನ್ನು ಹೊರ ಹಾಕಿದ್ದರು.

ಪಾಲಾಶ್​ ಆಗ್ಗಾಗ ಸ್ಮೃತಿ ಮ್ಯಾಚ್​ಗೆ ಹೋಗಿ ಅವರಿಗೆ ಪ್ರೋತ್ಸಾಹ ನೀಡುತ್ತಾರೆ. 2023ರಲ್ಲಿ ಬಾಂಗ್ಲಾದೇಶಕ್ಕೆ ತೆರಳಿ ಬಾಂಗ್ಲಾ ವಿರುದ್ಧದ ಭಾರತದ ಆಟದಲ್ಲಿ ಹುರಿದುಂಬಿಸಿದ್ದರು. ಪಾಲಾಶ್​​ ತಮ್ಮ ಸಹೋದರಿಯ ಸಮ್ಮುಖದಲ್ಲಿಯೇ ಮಂಧಾನಕ್ಕೆ ಪ್ರೀತಿ ಪ್ರಸ್ತಾಪವನ್ನು ಮಾಡಿದ್ದರಂತೆ. ಮೂಲಗಳ ಪ್ರಕಾರ, ಇವರು ಐದು ವರ್ಷಗಳಿಂದ ಜೊತೆಯಲ್ಲಿದ್ದಾರೆ.

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ! ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿಯ ಪ್ರಮುಖ ದಾಖಲೆಗಳು ಹೀಗಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.