ETV Bharat / state

ಭೂತಗನ್ನಡಿಯಿಂದ ಭಾವಚಿತ್ರ ರಚಿಸಿದ ಉಡುಪಿ ಕಲಾವಿದ: 'ಸೂರ್ಯ ಚುಂಬಿಸಿದ ಕಲಾಕೃತಿ' ಮೆಚ್ಚಿದ ರಾಷ್ಟ್ರಪತಿ ಮುರ್ಮು

ಉಡುಪಿ ಜಿಲ್ಲೆಯ ಕಲಾವಿದ ಮಹೇಶ್ ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿ ರಾಷ್ಟ್ರಪತಿ ಮುರ್ಮು ಅವರ ಮೆಚ್ಚುಗೆ ಪಡೆದಿದೆ. ಈಟಿವಿ ಭಾರತ ಕನ್ನಡ ಪ್ರತಿನಿಧಿ ಆದಿತ್ಯ ಐತಾಳ್ ಮಾಡಿರುವ ವಿಶೇಷ ವರದಿ ಇಲ್ಲಿದೆ.

ಭೂತಗನ್ನಡಿಯಿಂದ ಭಾವಚಿತ್ರ ರಚಿಸಿದ ಉಡುಪಿ ಕಲಾವಿದ
ಭೂತಗನ್ನಡಿಯಿಂದ ಭಾವಚಿತ್ರ ರಚಿಸಿದ ಉಡುಪಿ ಕಲಾವಿದ (ETV Bharat)
author img

By ETV Bharat Karnataka Team

Published : Nov 5, 2024, 5:16 PM IST

Updated : Nov 5, 2024, 6:06 PM IST

ಉಡುಪಿ: ಜಿಲ್ಲೆಯ ಮರ್ಣೆ ಎಂಬ ಸಣ್ಣ ಊರಿನ ಹವ್ಯಾಸಿ ಕಲಾವಿದರೊಬ್ಬರು ಸೂರ್ಯನ ಶಾಖದಿಂದ ರಚಿಸಿದ ವಿನೂತನ ಕಲಾಕೃತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಷ್ಟುಪಟ್ಟು, ಕಲಾವಿದನಿಗೆ ಮೆಚ್ಚುಗೆ ಸಂದೇಶವನ್ನು ಕಳುಹಿಸಿದ್ದಾರೆ.

ಹೌದು, ರಾಷ್ಟ್ರಪತಿ ಅವರಿಂದ ಮೆಚ್ಚುಗೆ ಪಡೆದ ಕಲಾವಿದನ ಹೆಸರು ಮಹೇಶ್ ಮರ್ಣೆ. ಇವರು ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿಯ ಸುಪುತ್ರ. ಇವರ ವೃತ್ತಿ ಬೇರೆಯಾಗಿದ್ದರೂ, ಪ್ರವೃತ್ತಿಯಲ್ಲಿ ಹವ್ಯಾಸಿ ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಮಹೇಶ್​ ಕಲಾಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್​ ಜೊತೆಗೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲ, ಈ ಮೊದಲು ತಮ್ಮ ಕಲೆಯ ಮೂಲಕ ಈ ಮೊದಲು ಪ್ರಧಾನಿ ಕಚೇರಿ, ಸಚಿನ್ ತೆಂಡೂಲ್ಕರ್ ಅವರಿಂದದಲೂ ಇವರು ಮೆಚ್ಚುಗೆ ಪಡೆದಿದ್ದರು.

ಭೂತಗನ್ನಡಿಯಿಂದ ಭಾವಚಿತ್ರ ರಚಿಸಿದ ಉಡುಪಿ ಕಲಾವಿದ; ರಾಷ್ಟ್ರಪತಿ ಮೆಚ್ಚುಗೆ (ETV Bharat)

ಭೂತಗನ್ನಡಿಯ ಶಾಖದಿಂದ ರಾಷ್ಟ್ರಪತಿ ಕಲಾಕೃತಿ: ಸದಾ ಹೊಸತನದ ಹುಡುಕಾಟದಲ್ಲಿರುವ ಮಹೇಶ್ ಅವರು ವಿನೂತನ ರೀತಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರ ಕಲಾಕೃತಿಯನ್ನು ರಚಿಸಿದ್ದಾರೆ. ಭೂತಗನ್ನಡಿಯನ್ನು ಸೂರ್ಯನ ಕಿರಣಗಳಿಗೆ ಹಿಡಿದಾಗ ಉತ್ಪತ್ತಿಯಾಗುವ ಶಾಖದಿಂದ ರಾಷ್ಟ್ರಪತಿಗಳ ಭಾವಚಿತ್ರವನ್ನು ರಚಿಸಿ ಮಹೇಶ್ ಸೈ ಎನಿಸಿಕೊಂಡಿದ್ದಾರೆ.

ಕಲಾಕೃತಿ ರಚನೆ ಹೇಗೆ: ಭೂತಗನ್ನಡಿಯನ್ನು ಸೂರ್ಯನ ಕಿರಣದ ನೇರಕ್ಕೆ ಹಿಡಿದಾಗ ಉತ್ಪತ್ತಿಯಾಗುವ ಶಾಖವು ಮರದ ಹಲಗೆ ಮೇಲೆ ಬೀಳುವಂತೆ ಮಾಡಿ, ಅದೇ ಶಾಖದಿಂದ ಮರದ ಹಲಗೆ ಸುಟ್ಟು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾವಚಿತ್ರವನ್ನು ರಚಿಸುವಲ್ಲಿ ಮಹೇಶ್ ಯಶಸ್ವಿಯಾಗಿದ್ದಾರೆ. ಸುಮಾರು 2 ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಈ ಕಲಾಕೃತಿಯನ್ನು ಮಾಡಿದ್ದಾರೆ. ಬಳಿಕ ಇದಕ್ಕೆ "ಸೂರ್ಯ ಚುಂಬಿಸಿದ ಕಲಾಕೃತಿ" ಎಂದು ಹೆಸರಿಸಿದ್ದಾರೆ.

ರಾಷ್ಟ್ರಪತಿ ಮೆಚ್ಚಿದ 'ಸೂರ್ಯ ಚುಂಬಿಸಿದ ಕಲಾಕೃತಿ': ಕಲಾಕೃತಿಯನ್ನು ರಾಷ್ಟ್ರಪತಿ ಕಚೇರಿಗೆ ಕಳುಹಿಸುವಾಗ ಇದಕ್ಕೆ 'ಸೂರ್ಯ ಚುಂಬಿಸಿದ ಕಲಾಕೃತಿ' ಎಂದು ಹೆಸರು ಇಡಲಾಗಿತ್ತು. ಈಗ ಈ ಕಲಾಕೃತಿಯನ್ನು ರಾಷ್ಟ್ರಪತಿಗಳು ಮೆಚ್ಚಿಕೊಂಡು ತಮ್ಮ ಕಚೇರಿಯಿಂದ Email ಮೂಲಕ ಕಲಾವಿದನಿಗೆ ಸಂದೇಶವನ್ನು ಕಳುಹಿಸಿದ್ದಾರೆ.

'ಈಟಿವಿ ಭಾರತ ಕನ್ನಡ' ಪ್ರತಿನಿಧಿ ಜೊತೆ ಮಾತನಾಡಿದ ಮಹೇಶ್ ಮರ್ಣೆ, "ಬೇರೆ ಬೇರೆ ರೀತಿಯ ಕಲಾಕೃತಿ ರಚಿಸಿ ಹೊಸತನವನ್ನು ಸಮಾಜಕ್ಕೆ ತರುವುದು ನನ್ನ ಮುಖ್ಯ ಗುರಿ. ಹಾಗೆಯೇ ಭೂತಗನ್ನಡಿ ಹಿಡಿದು ಸೂರ್ಯನ ಕಿರಣ ಮೂಲಕ ಮರದ ಹಲಗೆಯಲ್ಲಿ ರಾಷ್ಟ್ರಪತಿಯವರ ಕಲಾಕೃತಿ ಬಿಡಿಸಿ, ಅದನ್ನು ಪೋಸ್ಟ್ ಮಾಡಿ ರಾಷ್ಟ್ರಪತಿಯವರಿಗೆ ಕಳುಹಿಸಿದ್ದೆ. ಆ ಚಿತ್ರವನ್ನು ನೋಡಿದ ರಾಷ್ಟ್ರಪ್ರತಿಯವರು ಮೆಚ್ಚುಗೆ ವ್ಯಕ್ತಪಡಿಸಿ, ಈಮೇಲ್ ಸಂದೇಶ ಕಳುಹಿಸಿದ್ದಾರೆ. ಇದರಿಂದ ಬಹಳ ಸಂತಸವಾಗಿದೆ. ಇದು ನನ್ನ ಮೊದಲ ಹೊಸಕಲೆಯಾಗಿದೆ. ಅಲ್ಲದೆ ಅಶ್ವಥ ಮರದ ಎಲೆಯಲ್ಲಿ ಸಹ ಹಲವಾರು ಕಲಾಕೃತಿಯನ್ನು ಮಾಡಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ: ಮಲ್ಪೆ ಬೀಚ್​ನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ: ಪ್ರವಾಸಿಗರ ಗಮನ ಸೆಳೆದ ಮರಳು ಕಲಾಕೃತಿ

Last Updated : Nov 5, 2024, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.